ಪ್ರೀತಿಸಿ ವಂಚಿಸಿದ ಕಾಲ್ ಸೆಂಟರ್ ಉದ್ಯೋಗಿ..!!

ಬೆಂಗಳೂರು

     ಅಮೇರಿಕಾದಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಪ್ರೀತಿಸಿ 30 ಲಕ್ಷ ಹಣ ಪಡೆದು ವಿವಾಹವಾಗಿ ಕಾಲ್ ಸೆಂಟರ್ ಉದ್ಯೋಗಿಯೊಬ್ಬ ವಂಚಿಸಿದ್ದಾನೆ ಎಂದು ಯುವತಿಯೊಬ್ಬರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

     ಈಗಾಗಲೇ ವಿವಾಹವಾಗಿದ್ದರೂ ಅದು ನನಗೆ ಗೊತ್ತಾಗದಂತೆ ಮುಚ್ಚಿಟ್ಟು ಪ್ರೀತಿಸಿ ವಿವಾಹವಾಗಿದ್ದ ಕಾಲ್ ಸೆಂಟರ್ ಉದ್ಯೋಗಿ ಎರಡನೇ ಮದುವೆಯಾಗಿರುವುದನ್ನು ಪ್ರಶ್ನಿಸಿ ಜಗಳ ತೆಗೆದಿದ್ದರಿಂದ ನನಗೆ ತಲಾಖ್ ನೀಡಿದ್ದಾನೆ ಎಂದು ತಿಳಿಸಿದ್ದಾರೆ

      ಅಮೇರಿಕಾದಲ್ಲಿ ಜಕಿಯೋನ್ನಿಸ ಅವರಿಗೆ ಪತಿ ಸೈಯ್ಯದ್ ರಹೇಮಾನ್ ಮೋಸ ಮಾಡಿದ್ದಾನೆ. ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದ ಜಕಿಯೋನ್ನಿಸ ನಗರದ ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ಸೈಯ್ಯದ್‍ನನ್ನು ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೆ ಈತನನ್ನು ಪತಿಯಾಗಿ ಪಡೆಯಲು ಬರೋಬ್ಬರಿ 30 ಲಕ್ಷ ರೂ. ಖರ್ಚು ಕೂಡ ಮಾಡಿದ್ದರು. ಪತ್ನಿ ದುಡಿಮೆಯಲ್ಲಿ ಮೂರು ತಿಂಗಳು ಮಜಾ ಮಾಡಿದ ಬಳಿಕ ಚಾಲಾಕಿ ಪತಿ ತನ್ನ ವರಸೆ ತೋರಿಸಿದ್ದಾನೆ.

       ನಿತ್ಯ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡಿದ್ದಾನೆ. ಪತಿಯನ್ನು ಅಮೇರಿಕಾಗೆ ಕರೆದೊಯ್ಯಲು ಆಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಅಮೇರಿಕಾದಲ್ಲಿದ್ದಾಗಲೂ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಆದರೆ ಇತ್ತೀಚಿಗೆ ಬೆಂಗಳೂರಿಗೆ ಪತ್ನಿಯನ್ನ ಕರೆತಂದು ಆಕೆಯ ತಂದೆ ತಾಯಿ ಮನೆಯಲ್ಲಿ ಸೈಯದ್ ಬಿಟ್ಟಿದ್ದನು. ಅಷ್ಟೇ ಅಲ್ಲದೆ ಪತ್ನಿ ಎದುರಲ್ಲೇ ಬೇರೋಬ್ಬಳ ಜೊತೆ ಸೈಯ್ಯದ್ ಚಾಟಿಂಗ್, ಎಂಎಂಎಸ್ ಮಾಡಿದ್ದನು. ಈ ಅನಾಚರವನ್ನ ಪ್ರಶ್ನೆ ಮಾಡಿದರೆ ನನ್ನ ಮೇಲೆಯೇ ಮಾರಾಣಾಂತಿಕವಾಗಿ ಹಲ್ಲೆ ಪತಿ ಹಲ್ಲೆ ಮಾಡುತ್ತಿದ್ದ ಎಂದು ನೊಂದ ಪತ್ನಿ ಆರೋಪಿಸಿದ್ದಾರೆ.

      ತವರು ಮನೆಯಲ್ಲಿದ್ದಾಗ ಆಕೆಯ ಕಣ್ತಪ್ಪಿಸಿ ತನ್ನ ಹೆಸರು ಬದಲಿಸಿಕೊಂಡು ಬೇರೊಬ್ಬಳ ಜೊತೆ ಸೈಯದ್ ಮದುವೆ ಆಗಿದ್ದಾನೆ. ಆದರೆ ಈ ವಿಚಾರ ಮೊದಲನೇ ಪತ್ನಿಗೆ ಗೊತ್ತಾಗಿದೆ. ಈ ವಿಚಾರ ಹೊರಬೀಳುತ್ತಿದ್ದಂತೆ ತ್ರಿವಳಿ ತಲಾಖ್ ಚಾಲ್ತಿಯಲ್ಲಿಲ್ಲದ್ದಿದ್ದರೂ ತಲಾಖ್ ಎಂದು ಹೇಳಿ ಸೈಯದ್ ಕೈ ತೊಳೆದುಕೊಂಡಿದ್ದಾನೆ. ಎಂದು ಯುವತಿಯೂ ಆರ್ ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಆದರೆ ಪತಿಯ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕೆ ಆರೋಪಿಸಿ ನ್ಯಾಯಾಕ್ಕಾಗಿ ಪೊಲೀಸ್ ಠಾಣೆ, ಪೊಲೀಸ್ ಆಯುಕ್ತರ ಕಚೇರಿಗೆ ಅಲೆಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link