ಖಾಸಗಿ ಫೈನಾನ್ಸ್‍ಗಳಿಂದ ಕಿರುಕುಳ : ಆರೋಪ

ತುರುವೇಕೆರೆ

   ಖಾಸಗಿ ಫೈನಾನ್ಸ್ ಸಂಸ್ಥೆಗಳ ಹಾವಳಿ ತಾಲ್ಲೂಕಿನಲ್ಲಿ ಹೆಚ್ಚಾಗಿದ್ದು ಹಳ್ಳಿಗಳಲ್ಲಿ ಸಾಲದ ಕಂತನ್ನು ವಸೂಲಿ ಮಾಡುವ ನೆಪದಲ್ಲಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದ.ಸಂ.ಸ ಜಿಲ್ಲಾ ಸಂಚಾಲಕ ರಾಮಾಂಜಿನಯ್ಯ ಆರೋಪಿಸಿದರು.

    ಪಟ್ಟಣದ ತಾಲ್ಲೂಕು ಕಚೇರಿ ಎದುರು ಸಂಘದ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಆಗಸ್ಟ್ ತಿಂಗಳವರೆವಿಗೂ ಸಾಲ ವಸೂಲಿ ಮಾಡದಂತೆ ಲಿಖಿತ ಆದೇಶ ಹೊರಡಿಸಿದ್ದರೂ, ಹಳ್ಳಿಗಳಿಗೆ ತೆರಳಿ ಫೈನಾನ್ಸ್ ಸಂಸ್ಥೆಗಳ ಕೆಲಸಗಾರರು ಹಣ ಕಟ್ಟುವಂತೆ ಮಹಿಳೆಯರನ್ನು ಒತ್ತಾಯಿಸುತ್ತಿರುವುದು ಸರಿಯಾದ ಕ್ರಮವಲ್ಲ. ಕರೋನಾ ದಿನೇ ದಿನೇ ಹೆಚ್ಚುತ್ತಿದ್ದು ಹಳ್ಳಿಗಳಲ್ಲಿ ಸಾಮಾನ್ಯ ಜನರಿಗೆ ಕೂಲಿ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಲ ವಸೂಲಿಗೆ ಮುಂದಾಗುವ ಸಂಸ್ಥೆಗಳ ವರ್ತನೆ ನಾಚಿಕೆಗೇಡಿತನದಿಂದ ಕೂಡಿದೆ. ಸರ್ಕಾರದ ಆದೇಶ ಪಾಲಿಸದ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸಬೇಕೆಂದು ಹಾಗೂ ಕರೋನ ಹಾವಳಿ ತಹಬದಿಗೆ ಬರುವವರೆವಿಗೂ ಹಣ ವಸೂಲಿ ಮಾಡದಂತೆ ಸರ್ಕಾರ ಆದೇಶವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.

    ತಾಲ್ಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ, ಬೊಮ್ಮೇನಹಳ್ಳಿ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ವಸೂಲಿದಾರ ಸಾಲದ ಹಣ ಕಟ್ಟುವ ವಿಚಾರದಲ್ಲಿ ದೌರ್ಜನ್ಯದಿಂದ ವಸೂಲಿ ಮಾಡಲು ಮುಂದಾಗಿರುವುದು ಕಂಡು ಬಂದಿದ್ದು, ಜನಸಾಮಾನ್ಯರಿಗೆ ಮೂರ್ನಾಲ್ಕು ತಿಂಗಳುಗಳಿಂದ ಸರಿಯಾದ ಕೂಲಿ ಸಿಗದೆ ದಿನ ನಿತ್ಯದ ಬದುಕು ಮೂರಾಬಟ್ಟೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧನದಾಹಿ ತನಕ್ಕೆ ಬಿದ್ದಿರುವ ಫೈನಾನ್ಸ್‍ಗಳ ಲೈಸೆನ್ಸ್‍ಗಳನ್ನು ರದ್ದುಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

     ಈ ಸಂದರ್ಭದಲ್ಲಿ ತಹಸೀಲ್ದಾರ್ ನಯೀಮ್‍ಉನ್ನೀಸರಿಗೆ ಮನವಿ ಪತ್ರ ನೀಡಲಾಯಿತು. ಸಂಘದ ಪದಾಧಿಕಾರಿಗಳಾದ ಡೊಂಕಿಹಳ್ಳಿ ರಾಮಣ್ಣ, ರಾಮಚಂದ್ರಯ್ಯ, ಮಹಾದೇವಯ್ಯ, ದಯನಂದ್, ರಂಗನಾಥ್, ವಸಂತ್ ಕುಮಾರ್, ರಂಗಸ್ವಾಮಿ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap