ಹಾವೇರಿ:
ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಖಾಸಗಿ ವಾಹನಗಳ ಭರಾಟೆ ಮೀತಿ ಮೀರಿದ್ದು, ಬುಧವಾರ ಟಂ ಟಂ ವಾಹನಗಳ ಚಾಲಕರು ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆಗೆ ಯತ್ನಿಸಿದರು. ನಗರದ ತಾಲೂಕ ಪಂಚಾಯತ ಮುಂಭಾಗದಲ್ಲಿ ಮುಂಭಾಗದಲ್ಲಿ ನಡೆದಿದೆ.
ಎಂದಿನಂತೆ ಸಾರಿಗೆ ಸಂಸ್ಥೆಯ ಬಸ್ ಹಾವೇರಿಯಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ದೇವಗಿರಿಯತ್ತ ಸಾಗುತ್ತಿತ್ತು. ಈ ವೇಳೆ ಬಸ್ ನಿಲ್ದಾಣದ ಹೊರ ಭಾಗದಲ್ಲಿ ದೇವಗಿರಿಗೆ ಸಾಗುವ ಟಂ ಟಂ ವಾಹನಗಳ ಸಾಗುವ ಜನರು ಬಸ್‍ಗೆ ಕೈ ಮಾಡಿದಾಗ ಚಾಲಕರು ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವೇಳೆ, ಟಂ ಟಂ ವಾಹನಗಳ ಚಾಲಕರು ಏಕಾ-ಎಕಿ ಸಾರಿಗೆ ಸಿಬ್ಬಂಧಿಗಳ ಮೇಲೆ ಗುಂಪು ಕಟ್ಟಿಕೊಂಡು ಮುಗಿ ಬಿದ್ದುಇ, ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸಾರಿಗೆ ಸಿಬ್ಬಂಧಿಗಳು ಸಮಾಜಾಯಿಸಿ ತಿಳಿ ಹೇಳಲು ಮುಂದಾದರು, ಅದನ್ನು ಲೆಕ್ಕಕ್ಕೆ ತೆಗದುಕೊಳ್ಳದ ಖಾಸಗಿ ವಾಹನಗಳ ಚಾಲಕರು ಸಿಬ್ಬಂಧಿಗಳಿಗೆ ಅವಾಶ್ಚ ಶಬ್ದಗಳಿಂದ ನಿಂಧಿಸಿದರು.
ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ ನಿಲ್ಲಿಸಿದ ವೇಳೆ ಗುಂಪು ಕಟ್ಟಿಕೊಂಡ ಬಂದ ಟಂ ಟಂ ವಾಹನಗಳ ಚಾಲಕರು ನೇರವಾಗಿ ಸಾರಿಗೆ ಸಿಬ್ಬಂಧಿಗಳ ಕೊಳ್ಳ ಪಟ್ಟಿ ಹಿಡಿದು ಗೂಂಡಾ ವರ್ತನೆ ಮೇರೆದರು. ಈ ಸಮಯದಲ್ಲಿ ಸಾರ್ವಜನಿಕರು ಮಧ್ಯ ಪ್ರವೇಶ ಮಾಡಿ, ಸಾರಿಗೆ ಸಿಬ್ಬಂಧಿಗಳನ್ನು ಬಿಡಿಸಿಕೊಂಡು ಬಸ್ ನಲ್ಲಿ ಹತ್ತಿಸಿದರು.
ಖಾಸಗಿ ವಾಹನಗಳ ಚಾಲಕ ದುರವರ್ತನೆ ಖಂಡಿಸಿ, ಹುಬ್ಬಳಿಯತ್ತ ಸಾಗುವ ಸಾರಿಗೆ ಬಸ್ ಗಳನ್ನು ಹಾಗೂ ವಿಭಾಗೀಯ ಕಚೇರಿಯತ್ತ ಸಾಗುವ ಬಸ್ ಗಳನ್ನು ಚಾಲಕರು ನಿಲ್ಲಿಸಿ ಸ್ಥಳಕ್ಕೆ ಪೊಲೀಸ್‍ರು ಆಗಮಿಸುವಂತೆ ಪಟ್ಟು ಹಿಡಿದರು. ಈ ವೇಳೆ ಸಾರ್ವಜನಿಕರು ಸಾರಿಗೆ ಸಿಬ್ಬಂಧಿಗಳ ಮನವೋಲಿಸಿ ಬಸ್ ಚಲಿಸುವಂತೆ ಮನವಿ ಮಾಡಿದರು. ಸಾರ್ವಜನಿಕರ ಮನವಿ ಸ್ಪಂಧಿಸಿದ ಸಾರಿಗೆ ಸಿಬ್ಬಂಧಿಗಳು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಸಾರಿಗೆ ನಿಯಮಾನುಸಾರ ಸಾರಿಗೆ ಬಸ್ ನಿಲ್ದಾಣದಿಂದ ಖಾಸಗಿ ವಾಹನಗಳು 500 ಮೀಟರ್ ದೂರದಲ್ಲಿ ನಿಲ್ಲಬೇಕು ಎಂದು ನಿಯಮವಿದ್ದರು, ಅದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಪ್ರಾದೇಶಿಕ ಸಾರಿಗೆ ಆಯುಕ್ತರು ಆಗಾಗ ಸಾರಿಗೆ ಸಿಬ್ಬಂಧಿಗಳು ಮತ್ತು ಖಾಸಗಿ ವಾಹನಗಳ ಚಾಲಕರ ಮಧ್ಯ ಜಟಾಪಟಿಗೆ ಕಾರಣವಾಗುತ್ತಿದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಸಾರಿಗೆ ಸಿಬ್ಬಂಧಿಗಳಿಗೆ ಸೂಕ್ತ ರಕ್ಷಣೆ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರು ಒತ್ತಾಯವಾಗಿದೆ.