ಹೊಸಪೇಟೆ :
ಬೈಲುವದ್ದಿಗೇರಿ ಪ್ರಾ.ಕೃ.ಪ.ಸಹಕಾರ ಸಂಘವು 2017-18ನೇ ಸಾಲಿನಲ್ಲಿ 7.60ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ರೇವಯ್ಯಸ್ವಾಮಿ ತಿಳಿಸಿದರು.
ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಈ ಕುರಿತು ವರದಿ ಮಂಡಿಸಿದ ಅವರು, ಕಳೆದ 3 ವರ್ಷಗಳಿಂದ ಸಹಕಾರ ಸಂಘವು ಉತ್ತಮ ಲಾಭದತ್ತ ಹೆಜ್ಜೆ ಇಟ್ಟಿದೆ. ಅದರಂತೆ ಈ ವರ್ಷವೂ 7.60ಲಕ್ಷ ಲಾಭ ಗಳಿಸಿದೆ ಎಂದರು.
ಸಂಘವು 2555 ಸದಸ್ಯರನ್ನು ಹೊಂದಿ, ರೂ.1,96,18,422ಕೋಟಿ ಸ್ವಂತ ಷೇರು ಬಂಡವಾಳ, ರೂ.13,11,18,365 ಕೋಟಿ , ಹಾಗು ಬಿಡಿಸಿಸಿ ಬಜಾರ ಶಾಖೆಯಲ್ಲಿ ರೂ.4,78,05886 ಕೋಟಿ ಠೇವಣಿಯನ್ನು ಹೊಂದಿದೆ.
ಬಿಡಿಸಿಸಿ ಬ್ಯಾಂಕಿನಿಂದ ರೂ.12,48,77,502ಕೋಟಿ ಸಾಲವನ್ನು ಪಡೆದು, ತನ್ನ ಸದಸ್ಯರಿಗೆ ರೂ.22,10,33,755ಕೋಟಿ ಸಾಲವನ್ನು ನೀಡಿದೆ. ಸಾಲ ವಸೂಲಾತಿಯಲ್ಲಿ ಶೇ.100ರಷ್ಟು ಪ್ರಗತಿಯನ್ನು ಸಾಧಿಸಿದೆ. ಇತರೆ ಸಂಘ ಸಂಸ್ಥೆಗಳಲ್ಲಿ ರೂ.4,13,26,537ಕೋಟಿ ಷೇರು ಹಾಗು ನಿಧಿಗಳನ್ನು ಹೊಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ರೈತರಿಗೆ 6.35ಕೋಟಿ ಕೆಸಿಸಿ ಸಾಲವನ್ನು ನೀಡಲಾಗಿದೆ. ಅದರಲ್ಲಿ 870 ಜನ ಸದಸ್ಯರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‍ನ್ನು ನೀಡಿ ಅಪಘಾತ ವಿಮೆ ಯೋಜನೆಗೆ ಒಳಪಡಿಸಲಾಗಿದೆ. ಆಕಸ್ಮಿಕ ಸಾವು ಸಂಭವಿಸಿದ ರೈತನಿಗೆ ರೂ.50ಸಾವಿರ ಪರಿಹಾರ ನೀಡಲಾಗುತ್ತದೆ.
2018-19ನೇ ಸಾಲಿಗೆ ರೂ.1.40ಕೋಟಿ ಷೇರು ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ.
ಅದರಂತೆ ಠೇವಣಿಯನ್ನು ರೂ.13.50ಕೋಟಿ, ಸಾಲಗಳ ವಿತರಣೆ ರೂ.23ಕೋಟಿ, ಮಹಿಳಾ ಸ್ವಸಹಾಯ ಗುಂಪುಗಳಿಗೆ 5ಕೋಟಿ ಹಾಗು ಸಂಘದ ವ್ಯವಹಾರಗಳನ್ನು ಗಣಕೀಕರಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಿವರ ನೀಡಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ಪಂಪಣ್ಣ, ವಿವಿಧ ಗ್ರಾಮಗಳ ಮುಖಂಡರಾದ ಗೋವಿಂದರೆಡ್ಡಿ, ಉಳ್ಳಿ ಕೃಷ್ಣಪ್ಪ, ಗುಜ್ಜಲ ಶ್ರೀನಿವಾಸ, ಕೆ.ಎಸ್.ಶ್ರೀನಿವಾಸ, ಕೋರಿ ಪಕ್ಕೀರಪ್ಪ, ಪಂಚಪ್ಪ, ಜಿ.ಎಚ್.ರೆಡ್ಡಿ, ಎಂ.ಜಡೆಪ್ಪ, ಎರಡೋಣಿ ಕೊಮಾರೆಪ್ಪ, ಸಂಡೂರು ವಿರುಪಾಕ್ಷಿ, ಸಂಗಪ್ಪ, ಸಿದ್ದಯ್ಯಸ್ವಾಮಿ, ನಾಗರಾಜ, ಪರಶುರಾಮ ಸೇರಿದಂತೆ ಇನ್ನಿತರರು ಇದ್ದರು.