ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಬಳ್ಳಾರಿ :
 
    ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ  ಮತ್ತು ರಾಷ್ಟ್ರೀಯ ಪೌರರ ದಾಖಲಾತಿಯನ್ನು ಸಂಸತ್ತಿನ ಎರಡೂ ಸದನಗಳು ಮಸೂದೆಗೆ ಅಂಗೀಕಾರ ನೀಡಿದ್ದು, ಈ ಕಾಯಿದೆಯು ಇದೇ ಡಿಸೆಂಬರ್ 31, 2014ರ ಪೂರ್ವ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ ಹಾಗೂ ಕ್ರಿಶ್ಚಿಯನ್ನರ ಧರ್ಮಗಳ ಜನ ಸಮುದಾಯವನ್ನು ಕಾನೂನು ಬದ್ಧವೆಂದು ಪರಿಗಣಿಸಿ ಪೌರತ್ವವನ್ನು ನೀಡುವುದಾಗಿ ಹೇಳುತ್ತಿದೆ. ಆದರೆ ಅದೇ ದೇಶಗಳಿಂದ ಅದೇ ಸಮಯಗಳಲ್ಲಿ ವಲಸೆ ಬಂದ ಮುಸ್ಲೀಮರನ್ನು ಮಾತ್ರ ಕಾನೂನು ಬಾಹಿರ ವಲಸೆಗಾರರೆಂದು ಪರಿಗಣಿಸುತ್ತಿದೆ. ಇದು ಭಾರತೀಯ ಸಂವಿಧಾನದ ನಗ್ನ ಉಲ್ಲಂಘನೆಯಾಗಿದೆ. 
    ನಮ್ಮ ಸಂವಿಧಾನವು ಕಾನೂನಿನ ಮುಂದೆ ಈ ದೇಶದ ಪ್ರತಿಯೊಬ್ಬ ಪ್ರಜೆ ಸಮಾನವೆಂದು ಪರಿಗಣಿಸಿದೆ. ಕಾನೂನಿನ ರಕ್ಷಣೆಯ ವಿಚಾರವು ಸೇರಿದಂತೆ ಇದರಲ್ಲಿ ತಾರತಮ್ಯ ಎಸಗದಂತೆ ಪ್ರಭುತ್ವಕ್ಕೆ ಹೇಳಿದೆ ಮಾತ್ರವಲ್ಲ ಈ ದೇಶದ ಪ್ರಜೆಗೆ ಧರ್ಮ, ಜಾತಿ, ಭಾಷೆ, ಪ್ರದೇಶ ಹಾಗೂ ಲಿಂಗದ ಆಧಾರದ ತಾರತಮ್ಯ ಮಾಡುವುದನ್ನು ನಿಷೇಧಿಸಿದೆ. ಆದ್ದರಿಂದ ಸದರಿ ಕಾಯ್ದೆಯು ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
     ಆದ್ದರಿಂದ ಇದು ಸಂವಿಧಾನದ ವಿರೋಧಿ ಮಾತ್ರವಲ್ಲ, ಇದು ಭಾರತೀಯ ಗಣತಂತ್ರದ ಪ್ರಜಾಸತ್ತಾತ್ಮಕ ಬುನಾದಿಯನ್ನೇ ನಾಶಪಡಿಸುವುದೇ ಅದರ ಹಿಂದಿನ ಉದ್ದೇಶವಾಗಿದೆ.
      ಇದು ಪೌರತ್ವವನ್ನು ಒಬ್ಬ ವ್ಯಕ್ತಿಯ ಧಾರ್ಮಿಕ ನೆಲೆಯೊಂದಿಗೆ ಜೋಡಿಸುತ್ತದೆ. ಇದು ಜಾತ್ಯಾತೀತತೆಗೆ ತದ್ವಿರುದ್ಧವಾದ ಸಂಗತಿಯಾಗಿದೆ. ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ಧೃವೀಕರಣವನ್ನು ಇನ್ನಷ್ಟು ತೀವ್ರಗೊಳಿಸುವುದು ಈ ಮಸೂದೆಯ ಹಿಂದಿನ ಉದ್ದೇಶವಾಗಿದೆ. ಇದು ನಮ್ಮ ದೇಶದ ಐಕ್ಯತೆ, ಸಮಗ್ರತೆಗೆ ಅಪಾಯಕಾರಿ ಹಾನಿ ಉಂಟು ಮಾಡುತ್ತದೆ. ಇಂತಹ ಮಸೂದೆ ಮಂಜೂರಾಗಿರುವುದು ಮತ್ತು ಓಖಅ ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಮೋದಿ-ಶಾ ಸರ್ಕಾರ ಸಾರಿರುವುದು ಭಾರತೀಯ ಗಣತಂತ್ರದ ಸ್ವರೂಪವನ್ನೇ ಬುಡಮೇಲು ಮಾಡುವ ಒಂದು ಅವಳಿ ಸಂಯೋಜನೆ.
    ಇದು ಜಾತ್ಯಾತೀತ ಪ್ರಜಾಪ್ರಭುತ್ವ ಗಣತಂತ್ರವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಆರ್.ಎಸ್.ಎಸ್. ರಾಜಕೀಯ ಯೋಜನೆಯ ಭಾಗವಾಗಿದೆ. ಸಂವಿಧಾನ ವಿರೋಧಿಯಾದ ಇದನ್ನು ತಕ್ಷಣವೇ ಹಿಂಪಡೆಯಬೇಕೆಂದು ಸಿಪಿಐ ಬಳ್ಳಾರಿ ಜಿಲ್ಲಾ ಮತ್ತು ಸಿಪಿಎಂ ಬಳ್ಳಾರಿ ಜಿಲ್ಲಾ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.
 
     ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಆರ್.ಎಸ್.ಬಸವರಾಜ್, ಸಿಪಿಐ (ಎಂ) ನಗರ ಕಾರ್ಯದರ್ಶಿ ಚಂದ್ರಕುಮಾರಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ನಾಗಭೂಷಣರಾವ್, ಸಿಪಿಐ ನಗರ ಕಾರ್ಯದರ್ಶಿ ಶೇಖರ್‍ಬಾಬು ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link