ಯೋಧನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ…!!!

ಬ್ಯಾಡಗಿ:

      ಹಾವೇರಿಯಲ್ಲಿ ಜರುಗಿದ ಯೋಧನ ಮೇಲೆ ಮಾರಣಾಂತಿಕ ಹಲ್ಲೆ ಘಟನೆಯನ್ನು ಖಂಡಿಸಿ ಪಟ್ಟಣದ ವಿವಿಧ ಸಂಘಟನೆಗಳ ಹಾಗೂ ಮಾಜಿ ಸೈನಿಕರು ಕೆಲಕಾಲ ಪ್ರತಿಭಟನೆ ನಡೆಸಿದರಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.ಸುಭಾಸ್ ವೃತ್ತದ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ನೂರಾರು ಜನರು ತಪ್ಪಿತಸ್ಥ ಮುಸ್ಲಿಂ ಯುವಕರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಪೊಲೀಸರ ರಕ್ಷಣಾ ವೈಫಲ್ಯವನ್ನೂ ಸಹ ಖಂಡಿಸಿದರು.

       ಭಾರತೀಯರು ತಲ್ಲೆ ತಗ್ಗಿಸುವಂತಹ ಘಟನೆ: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ, ದೇಶಸೇವೆಯನ್ನು ಈಗಷ್ಟೇ ಮುಗಿಸಿ ತನ್ನ ಕುಟುಂಬದೊಂದಿಗೆ ನೆಮ್ಮದಿಯಾಗಿ ಬದುಕಲು ಗ್ರಾಮಕ್ಕೆ ಬಂದಿದ್ದ ಕುಮ್ಮೂರ ಗ್ರಾಮದ ಪರಮೇಶಪ್ಪ ಬಾರಂಗಿ ಎಂಬ ಯೋಧ ಹಾಗೂ ಆತನ ಪತ್ನಿಯ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಮುಸ್ಲಿಂ ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಸದರಿ ಘಟನೆಯಿಂದ ಪ್ರತಿಯೊಬ್ಬ ಭಾರತೀಯನು ತಲೆ ತಗ್ಗಿಸುವಂತಾಗಿದೆ ಎಂದರು.

       ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ: ಧರ್ಮಾಂಧ ಮುಸ್ಲಿಂ ಯುವಕರ ಉಪಟಳ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇನ್ನೂ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಸದರಿ ಘಟನೆಯಿಂದ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತಿದ್ದು, ಇಂತಹ ಸಮಾಹ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುವಂತಾಗಬೇಕು ಇಲ್ಲದೇ ಹೋದಲ್ಲಿ ಇನ್ನೂ ಹೆಚ್ಚಿನ ಅನಾಹುತಗಳು ನಡೆಯಲು ಕಾರಣವಾಗಬಹುದು, ಪ್ರತೀಕಾರಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

        ಶಿಕ್ಷೆಯಾಗದಿದ್ದರೇ ಪ್ರಕರಣ ಗಂಭೀರ ಸ್ವರೂಪಕ್ಕೆ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ತಪ್ಪಿತಸ್ಥರು ಯಾರೇ ಆಗಿರಲಿ ಅಥವಾ ಯಾವುದೇ ಸಮುದಾಯಕ್ಕೆ ಸೇರಿದವರಾಗಿರಲಿ, ಅದು ಮುಖ್ಯವಲ್ಲ ಅವರೆಲ್ಲರನ್ನೂ ಕಾನೂನು ದೃಷ್ಟಿಯಿಂದ ಪರಿಗಣಿಸಬೇಕಾಗುತ್ತದೆ, ಇಂತಹ ತಪ್ಪುಗಳು ಮುಂದುವರೆಯದಂತೆ ಮುಸ್ಲಿಂ ಸಮಾಜದ ಮುಖಂಡರು ತಮ್ಮ ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವುದು ಉತ್ತಮ ಇಲ್ಲದೇ ಹೋದಲ್ಲಿ ಇನ್ನಷ್ಟು ಅನಾಹುತಗಳಾಗಲು ಕಾರಣವಾಗಬಹುದು ಎಂದರು.

         ಈ ಸಂದರ್ಭದಲ್ಲಿ ಮಾಜಿ ಯೋಧರಾದ ಎಸ್.ಎಸ್.ಕಲ್ಲಾಪುರ, ರಾಜಣ್ಣ ಹೊಸಳ್ಳಿ, ಮುರಿಗೆಪ್ಪ ಶೆಟ್ಟರ, ಮಂಜುನಾಥ ಕೋಡಿಹಳ್ಳಿ, ಈರಪ್ಪ ಭೈರಾಪುರ, ಸಂಜೀವ ಮಡಿವಾಳರ, ಸುರೇಶ ಅಸಾದಿ, ಜಿತೇಂದ್ರ ಸುಣಗಾರ, ಶಿವು ಗಡಾದ, ಮುಂಜುನಾಥ ಶಿರವಾಡಕರ, ರುದ್ರೇಶ ಚನ್ನಗೌಡ್ರ, ವಿಕ್ರಮ, ಜಿತೇಂದ್ರ ಸುಣಗಾರ, ಮಂಜುನಾಥ ಪೂಜಾರ, ಈರಣ್ಣ ಚೌಟಿ, ಚಂದ್ರು ಬಾರ್ಕಿ, ಪಾಂಡು ಸುತಾರ, ಚನ್ನಬಸ್ಪಪ್ಪ ಶೆಟ್ಟರ, ಡಾ.ಸೌದಾಗರ, ಉದಯಕುಮಾರ ಬೇವಿನಕಟ್ಟಿ, ವಿಷ್ಣುಕಾಂತ ಬೆನ್ನೂರ, ಪುಟ್ಟಪ್ಪ ರಾಮಗೊಂಡನಹಳ್ಳಿ, ರಾಘವೇಂದ್ರ ಭೈರಾಪೂರ, ಪ್ರದೀಪ ಒಳಗುಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link