ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ

ಹೊಸಪೇಟೆ:

     ದೇಶದ ಎಲ್ಲೆಡೆ ಕೋಮುದ್ವೇಷ ಹಬ್ಬಿಸುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸ್ಥಳೀಯ ಅಂಜುಮನ್ ಕಮಿಟಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.

     ಸ್ಥಳೀಯ ಈದ್ಗಾ ಮೈದಾನದಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ರ್ಯಾಲಿಯೂ ರಾಮಚಿತ್ರ ಮಂದಿರ ವೃತ್ತದ ಮೂಲಕ, ಉದ್ಯೋಗ ಪೆಟ್ರೋಲ್ ಬಂಕ್ ಮಾರ್ಗವಾಗಿ ದೊಡ್ಡ ಮಸೀದಿ ರಸ್ತೆ ಮೂಲಕ, ಗಾಂಧಿ ವೃತ್ತ, ಮೂರಂಗಡಿ ಮೂಲಕ ನಗರ ಕೇಂದ್ರ ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ತೆರಳಿ ಶಾನಭಾಗ ವೃತ್ತದಲ್ಲಿ ಬೃಹತ್ ಸಭೆಯಾಗಿ ಮಾರ್ಪಟ್ಟಿತ್ತು.

    ರ್ಯಾಲಿಯುದ್ಧಕ್ಕೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಆರ್‍ಎಸ್‍ಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಸಹಾಯಕ ಆಯುಕ್ತ ತನ್ವೀರ್ ಶೇಕ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ದೇಶದ ಅಖಂಡಂತೆ ಉಳಿಯಲು ಪೌರತ್ವ ಕಾಯಿದೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

   ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು. ಧರ್ಮಗಳ ನಡುವೆ ಗೋಡೆಗಳನ್ನು ಕಟ್ಟಿ ಕೆಡಹುವೆವು ಎಂಬುದು ಶತಮಾನ ಕಾಲದ ಸ್ವಾತಂತ್ರ್ಯ ಚಳವಳಿಯ ಆಶಯ. ಈ ಪ್ರಮುಖ ಆಶಯ ನಮ್ಮ ದೇಶದ ಸಂವಿಧಾನದಲ್ಲಿಯೂ ಇದೆ. ಆದರೆ, ಸಂವಿಧಾನವನ್ನೂ ಧಿಕ್ಕರಿಸಿ ಇಂತಹ ಮಸೂದೆಗಳನ್ನು ಜಾರಿ ಮಾಡಿದ್ದು ಖಂಡನಾರ್ಹ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
ದೇಶದಲ್ಲಿನ ಅಭಿವೃದ್ಧಿ ಯೋಜನೆ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಗುರಿ. ಆದರೆ, ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಆರ್‍ಎಸ್‍ಎಸ್ ಕೂಟ. ತಮ್ಮ ಧಮಾರ್ಂಧ ಬುದ್ಧಿ ಬಳಸಿ ಸಮಾನತೆಯನ್ನೇ ಕಿತ್ತೆಸೆಯುವ ಹುನ್ನಾರ ನಡೆಸಿದೆ. ಧರ್ಮಗಳ ನಡುವೆ ವಿಭಜನೆ ತರುವ, ದ್ವೇಷ ಹಬ್ಬಿಸುವ ಕೃತ್ಯಕ್ಕೆಕೈ ಹಾಕಿದ್ದಾರೆ. ಇದು ದುಡಿಯುವ ಜನತೆಯ ಏಕತೆಗೆ ಬಹು ದೊಡ್ಡ ಪೆಟ್ಟು ಎಂದರು.

      ಈಗಾಗಲೇ ಪೌರತ್ವ ನೋಂದಣಿ ಮಾಡಿರುವ ಅಸ್ಸಾಂನಲ್ಲಿ 19 ಲಕ್ಷ ಪ್ರಜೆಗಳನ್ನು ಅನಾಥ ಮಾಡಲಾಗಿದೆ. ನಿಬರ್ಂಧಿತ ಕ್ಯಾಂಪ್‍ಗಳಲ್ಲಿ ಕೂಡಿ ಹಾಕಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಮತ್ತು ದೇಶದ ಸಂಪತ್ತನ್ನು ಲೂಟಿ ಮಾಡಿ, ಜನಾಂಗೀಯ ದ್ವೇಷÀ ಹುಟ್ಟು ಹಾಕುವ ಅಜೆಂಡಾವನ್ನೇ ಕಾಯ್ದೆ ರೂಪದಲ್ಲಿ ಜಾರಿ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.

      ಈಗಾಗಲೇ ದೇಶದ ಆರು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಸರಕಾರಗಳು ಈ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿವೆ. ಕರ್ನಾಟಕವೂ ಈ ಕಾಯ್ದೆ ಜಾರಿ ಮಾಡುವುದಿಲ್ಲವೆಂದು ಘೋಷಿಸಬೇಕು ಎಂದೂ ಆಗ್ರಹಿಸಿದರು.ಅಂಜುಮನ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ರಫಾಯಿ, ಬಡಾವಲಿ, ಹೆಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಖಾಜಾ ಹುಸೇನ್ ನಿಯಾಜಿ, ಮರಡಿಜಂಭಯ್ಯ ನಾಯಕ, ಮೊಹಮ್ಮದ್ ರಫೀಕ್, ದುರುಗಪ್ಪ ಪೂಜಾರಿ, ತಾರಿಹಳ್ಳಿ ವೇಂಕಟೇಶ್, ಬಾಸ್ಕರ್ ನಾಯ್ಡು, ನಿಂಬಗಲ್ ರಾಮಕೃಷ್ಣ, ಕಟಗಿ ಸಾಧೀಕ್, ಸಿ.ಕೃಷ್ಣ, ಮೊದಲಿಯಾರ್, ಬಣ್ಣದ ಮನೆ ಸೋಮಶೇಖರ್, ಕೆ.ಎಸ್. ದಾದಾಪೀರ್, ಬಾಬಾ, ಮೊಹಮ್ಮದ್ ಗೌಸ್, ರಫೀಕ್, ಮೌಲಾ ಹುಸೇನ್, ಅಬುಲ್ ಕಲಾಂ ಅಜಾದ್, ಅಲನ್ ಭಕ್ಷೀ ,ತಾಜುದ್ದೀನ್ ಸೇರಿದಂತೆ ಹೊಸಪೇಟೆ ಅಂಜುಮನ್ ಸಮಿತಿ ಪದಾದಿಕಾರಿಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link