ತಿಪಟೂರು :
ದೇಶದಲ್ಲಿ ಒಂದು ಕಡೆ ಪ್ರವಾಹ, ಬರ, ಆರ್ಥಿಕ ಕುಸಿತ, ಕಾಶ್ಮೀರ ಸಮಸ್ಯೆ, ನಿರೊದ್ಯೋಗ ಸಮಸ್ಯೆಗಳನ್ನು ಬಿಟ್ಟು ಬೇನಾಮಿ ಆಸ್ತಿಯೆಂದು ಡಿ.ಕೆ.ಶಿವಕುಮಾರ್‍ರನ್ನು ಬಂಧಿಸಿರುವುದು ಒಂದು ರಾಜಕೀಯ ದುರುದ್ದೇಶವೆಂದು ಜೆ.ಡಿ.ಎಸ್ ನ ಕಾರ್ಯಧ್ಯಕ್ಷ ಶಿವಸ್ವಾಮಿ ಆರೋಪಿಸಿದರು.
ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಕಾಂಗ್ರೇಸ್ ಹಾಗೂ ಜೆ.ಡಿ.ಎಸ್‍ನ ಕಾರ್ಯಕರ್ತರು ಸೇರಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮತ್ತು ರಸ್ತೆ ತಡೆ ನಡೆಸಿ ಮಾತನಾಡಿದ ಅವರು ದೇಶ ಮತ್ತು ರಾಜ್ಯದಲ್ಲಿ ಸಾವಿರಾರು ಸಮಸ್ಯೆಗಳು ತಾಂಡವವಾಡುತ್ತಿವೆ ಆದರೆ ಇವೆಲ್ಲವನ್ನು ಬಿಟ್ಟು ರಾಜ್ಯದ ಪ್ರಭಾವಿ ನಾಯಕ ಕಾಂಗ್ರೇಸ್‍ನ ಡಿ.ಕೆ.ಶಿವಕುಮಾರ್‍ರನ್ನು ಬಂಧಿಸಿರುವುದು ರಾಷ್ಟರ ರಾಜಕಾರಣಕ್ಕೆ ಒಂದು ಕಪ್ಪುಚುಕ್ಕಯಾಗಿದೆ ಎಂದು ಕೇಂದ್ರಸರ್ಕಾರದ ವಿರುದ್ಧ ಹರಿಹಾಯ್ದರು.
ತಾ.ಪಂ ಮಾಜಿ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ ದೇಶದ ಮತಬಾಂದವರಿಗೆ ಅಂಗೈನಲ್ಲೆ ಆಕಾಶ ತೋರಿಸಿ ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುತ್ತೇವೆಂದು ಹೇಳಿ ಸೂಕ್ತವಲ್ಲದ ಕಾನೂನುಗಳನ್ನು ಹೇರಿ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳುತ್ತಿದ್ದು ತಮ್ಮನ್ನು ಎದುರಿಸಲು ಬಂದತಂಹ ನಾಯಕರನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕೀಯ ಮಾಡುತ್ತಿರುವ ಕೇಂದ್ರದ ಬಿ.ಜೆ.ಪಿ ಸರ್ಕಾರಕ್ಕೆ ದಿಕ್ಕಾರವಿರಲೆಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ, ಸದಸ್ಯ ಸುರೇಶ್, ತಾ.ಬ್ಲಾ.ಕಾ ಅಧ್ಯಕ್ಷ ಕಾಂತರಾಜು, ಎ.ಪಿ.ಎಂ.ಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್, ನಗರಸಭಾ ಸದಸ್ಯರು, ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ