JNU ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಬಳ್ಳಾರಿ:

     ದೆಹಲಿಯ ಜೆಎನ್‍ಯು ವಿವಿ ವಿದ್ಯಾರ್ಥಿಗಳು, ಪ್ರಾಧ್ಯಾಪಕ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಅಖಿಲ ಭಾರತೀಯ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

     ಜೆಎನ್‍ಯು ವಿವಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಎಬಿವಿಪಿ ಸಂಘಟನೆ ಗೂಂಡಾಗಳು ನಡೆಸಿರುವ ಹಲ್ಲೆಯು ಅತ್ಯಂತ ಖಂಡನೀಯವಾಗಿದೆ. ಎಬಿವಿಪಿ ಗೂಂಡಾಗಳು ಮತ್ತು ಹೊರಗಿನಿಂದ ಬಂದಂತಹ ಕಿಡಿಗೇಡಿಗಳು ಕಬ್ಬಿಣದ ರಾಡ್ ಮತ್ತು ಲಾಠಿಗಳನ್ನು ಹಿಡಿದು ಕ್ಯಾಂಪ್‍ನಲ್ಲಿರುವ ಹಾಸ್ಟೆಲ್ ಮತ್ತು ವಿದ್ಯಾರ್ಥಿನಿಯರು ಸೇರುವ ಸ್ಥಳಗಳಿಗೆ ನುಗ್ಗಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅದರಲ್ಲೂ ವಿವಿ ಶುಲ್ಕ ಹೆಚ್ಚಳವನ್ನು ವಿರೋಧಿಸಿದ್ದ ವಿದ್ಯಾರ್ಥಿಗಳನ್ನು ಮಾತ್ರ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಭಾರೀ ರಕ್ತ ಸ್ರಾವದ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಭಾರತೀಯ ಸಂಸ್ಕøತಿ ರಕ್ಷಕರು ಎಂದು ಸ್ವಯಂ ಘೋಷಿಸಿಕೊಂಡಿರುವ ಮುಸುಕುದಾರಿ ಗೂಂಡಾಗಳು ಜೆಎನ್‍ಯು ಹಾಸ್ಟೆಲುಗಳ ಆಸ್ತಿ ಹಾನಿಗೆ ಕಾರಣರಾಗಿದ್ದಾರೆ. ಸ್ಥಳದಲ್ಲಿಯೇ ಹಾಜರಿದ್ದ ಪೆÇಲೀಸರು ಮೂಕಪ್ರೇಕ್ಷಕರಾಗಿ ನಿಂತು, ಗೂಂಡಾ ಚಟುವಟಿಕೆಗಳಿಗೆ ಸಹಕರಿಸಿದ್ದು ನಾಚಿಕೆಗೇಡಿನ ಸಂಗತಿ. .ಭಾರೀ ಸೆಕ್ಯೂರಿಟಿ ಇದ್ದರೂ ಗೇಟುಗಳ ಮೂಲಕ ಮಾರಣಾಂತಿಕ ಅಸ್ತ್ರಗಳನ್ನು ಹಿಡಿದಿದ್ದ ಎಬಿವಿಪಿ ಗೂಂಡಾಗಳು ಒಳಗೆ ಬಂದಿದ್ದು ಗಮನಿಸಿದರೆ, ಆಡಳಿತ ವರ್ಗವು ಈ ಗೂಂಡಾಗಿರಿಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದವರು ತಿಳಿಸಿದ್ದಾರೆ.
      ಎಐಡಿಎಸ್‍ಓ ಜಿಲ್ಲಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಎಲ್ಲಾ ಅಡೆತಡೆಗಳನ್ನು ಮೀರಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ವಿರುದ್ಧ ಆಡಳಿತ ವರ್ಗದ ಸಹಕಾರದೊಂದಿಗೆ ಕೋಮುವಾದಿ ಎಬಿವಿಪಿ ನಡೆಸಿದ ಈ ದಾಳಿಯು, ಆಡಳಿತ ವರ್ಗದ ಹೊಣೆಗೇಡಿತನವನ್ನು ತೋರಿಸುತ್ತದೆ. ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ದಿಕ್ಕು ತಪ್ಪಿಸಲು ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಯ ಮೂಡಿಸಲು ಆಡಳಿತ ವರ್ಗ ಮತ್ತು ಎಬಿವಿಪಿ ಈ ಕುತಂತ್ರವನ್ನು ಹೆಣೆದಿವೆ.

      ಈ ರೀತಿಯ ದಾಳಿಗಳನ್ನು ಎದುರಿಸಲು ನಾವೆಲ್ಲರೂ ಒಂದಾಗಬೇಕು ಮತ್ತು ಇಂತಹ ಅಪ್ರಜಾತಾಂತ್ರಿಕ, ನಿರಂಕುಶವಾದಿ ಮತ್ತುಕ್ರೂರ ಆಡಳಿತದ ವಿರುದ್ಧ ಬಲಿಷ್ಠ ಜನ ಹೋರಾಟಗಳನ್ನು ರೂಪಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಹೆಚ್ಚಳವಾಗಿರುವ ಶುಲ್ಕವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಮಾತನಾಡಿದರು. ಜಿಲ್ಲಾಉಪಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ಮಂಡಳಿಯ ರಂಗಸ್ವಾಮಿ, ಈರಣ್ಣ, ಶಾಂತಿ, ಮಂಜುನಾಥ ಮತ್ತು ಸದಸ್ಯರುಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

 

Recent Articles

spot_img

Related Stories

Share via
Copy link
Powered by Social Snap