ತುರುವೇಕೆರೆ:
ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ರೈತ ವಿರೋಧಿ ಮಸೂದೆ ವಿರೋದಿಸಿ ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಗುರುವಾರ ಸಿಐಟಿಯು, ಅಂಗನವಾಡಿ, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿದ ಸಂಘಟನೆಯ ಕಾರ್ಯಕರ್ತರುಗಳು ಪ್ರತಿಭಟನೆ ನೆಡೆಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ, ರೈತ ವಿರೋದಿ ಮಸೂದೆ ಬೇಡ, ಅಂಗನವಾಡಿ ಖಾಸಗಿಕರಣ ನಿಲ್ಲಲಿ, ಗ್ರಾಮ ಪಂಚಾಯ್ತಿ ನೌಕರರಿಗೆ ಬಾಕಿ ವೇತನ ನೀಡಬೇಕು, ಬಿಸಿ ಊಟ ನೌಕರರಿಗೆ 3 ತಿಂಗಳ ವೇತನ ಬಿಡುಗಡೆ ಮಾಡಬೇಕು, ಕಟ್ಟಡ ಕಾರ್ಮಿಕರ ಮಂಡಳಿಯನ್ನು ಮುಚ್ಚಬಾರದು, ಕೆ.ಎಸ್.ಆರ್.ಟಿ.ಸಿ ನೌಕರರ 3 ತಿಂಗಳ ವೇತನ ನೀಡುವುದು, ವಿಮಾನ, ರೈಲ್ವೆ, ಎಲ್.ಐ.ಸಿ, ಕೆಂಪುಕೋಟೆ, ಬಿಎಸ್.ಎನ್.ಎಲ್ ಖಾಸಗಿಕರಣ ನೀಡದಿರುವುದು ಹಾಗೂ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಬಾರದು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ನಂತರ ತಹಶೀಲ್ದಾರ್ ನಯಿಂ ಉನ್ನಿಸಾರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಅಧ್ಯಕ ರಂಗನಾಥ, ಕಾರ್ಯದರ್ಶಿ ಡಿ.ಎಚ್. ಸತೀಶ್, ಅಂಗನವಾಡಿ ತಾಲ್ಲೂಕು ಅಧ್ಯಕ್ಷೆ ವಸಂತಕುಮಾರಿ, ಬಿಸಿಯೂಟದ ತಾಲ್ಲೂಕು ಅದ್ಯಕ್ಷೆ ಶಾಂತಮ್ಮ, ಕಮಲ, ಜ್ಯೋತಿ ಸೇರಿದಂತೆ ಕಟ್ಟಡ ಕಾರ್ಮಿಕರ ಸಂಘದ ಮಂಜುನಾಥ್, ಗ್ರಾಮಪಂಚಾಯ್ತಿ ರಮೇಶ್ ಸೇರಿದಂತೆ ಅಂಗನವಾಡಿ ನೌಕರರು, ಕಟ್ಟಡ ಕಾರ್ಮಿಕರು, ಗ್ರಾಮ ಪಂಚಾಯ್ತಿ ಕಾರ್ಮಿಕರು ಒಳಗೊಂಡಂತೆ ಅನೇಕ ಸಂಘಟನೆಗ ಪದಾಧಿಕಾರಿಗಳು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








