ಹಾವೇರಿ :
ಜಮ್ಮು ಕಾಶ್ಮೀರದ ಪಲ್ವಾಮದಲ್ಲಿ ದಿ,14 ರಂದು ನಡೆದ ಆತ್ಮಾಹುತಿ ದಾಳಿಯಿಂದ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ನಗರದ ಸಿದ್ದಪ್ಪ ಸರ್ಕಲಿನಲ್ಲಿ ಪ್ರತಿಭಟಿಸಿ, ಮೌನಾಚಾರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ದಾಳಿಯಲ್ಲಿ ಭಾಗಿಯಾದ ಉಗ್ರ ಸಂಘಟನೆಗಳಿಗೆ ಕೇಂದ್ರ ಸರ್ಕಾರ ನಿರ್ದಾಕ್ಷಿಣ್ಯ, ಸೂಕ್ತ ಕ್ರಮ ಕೈಗೊಳ್ಳಬೇಕು.ಇದೊಂದು ಅಮಾನವೀಯ ಕೃತ್ಯವಾಗಿದ್ದು, ಇಂತಹ ಘಟನೆ ಆಗದಂತೆ ನೋಡಿಕೊಳ್ಳವಂತಾಗಬೇಕು.ವೀರ ಮರಣ ಅಪ್ಪಿದ ಕುಟುಂಬ ವರ್ಗದವರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ವಕೀಲರು ಪಾರ್ಥನೆಗೈದರು.