ಶಬರಿಮಲೆ ಭಕ್ತರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಧರಣಿ

ಹಾವೇರಿ :

        ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶಬರಿಮಲೆ ಭಕ್ತರ ಮೇಲೆ ಲಾಠಿ ಚಾರ್ಜ, ರಾಜ್ಯದ ಮುಖ್ಯಮಂತ್ರಿಗಳು ರೈತ ಮಹಿಳೆಗೆ ಮಾಡಿದ ಅವಮಾನ, ರೈತರ ಸಾಲ ಮನ್ನಾ ಮತ್ತು ಬೇ ಬಾಕಿ ಪತ್ರ ನೀಡುವಂತೆ ಒತ್ತಾಯಿಸಿ ಮೈಲಾರ ಮಾಹಾದೇವಪ್ಪ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಯಿತು.

         ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ಮಾತನಾಡಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ನಂತರ ರೈತಪರ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಸಿಎಂ ಕುಮಾರಸ್ವಾಮಿಯವರ ಆಡಳಿತದ ಪ್ರತಿಯೊಂದು ಹಂತದಲ್ಲಿಯು ರೈತರು ಅವಮಾನ ಎದುರುಸುತ್ತಿದ್ದಾರೆ. ಕಬ್ಬುಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ನಡೆಸಿದ ಹೋರಾಟಕ್ಕೆ ಮುಖ್ಯಮಂತ್ರಿಗಳು ಬೆಲೆ ಕೊಟ್ಟಿಲ್ಲ, ರೈತ ಮಹಿಳೆಗೆ 4 ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ಎಂದು ಕೇಳುವ ಮೂಲಕ ರೈತ ಮಹಿಳೆಗೆ ಅವಮಾನ ಮಾಡಿದ್ದಾರೆ ಹಾಗೂ ಕೇರಳದಲ್ಲಿ ಶಬರಿಮಲೆ ಭಕ್ತರ ಮೇಲೆ ಅಲ್ಲಿನ ಸರ್ಕಾರ ಹಲ್ಲೆ ಮಾಡುತ್ತಿದ್ದಾರೆ. ಅಲ್ಲದೆ ಕೇರಳದಲ್ಲಿ ಹಿಂದೂ ವಿರೋಧ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

         ಬ್ಯಾಡಗಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ನಾಡಿನಲ್ಲಿ ರೈತರನ್ನು ಪ್ರತಿಯೊಂದು ಹಂತದಲ್ಲಿ ಅವಮಾನಿಸಲಾಗುತ್ತಿದೆ. ಮುಖ್ಯಮಂತ್ರಿಗಳು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಸಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ.ರೈತ ಮಹಿಳೆಗೆ ಕ್ಷೇಮೆ ಕೇಳಬೇಕು ಎಂದು ಆಗ್ರಹಿಸಿದರು.

        ಮಾಜಿ ಶಾಸಕರಾದ ಯು.ಬಿ. ಬಣಕಾರ ಮಾತನಾಡಿ ರಾಜ್ಯದಲ್ಲಿ ರೈತರಿಗೆ ಬೆಂಬಲ ಬೆಲೆ ಸಿಗದೆ ಅಳವಿನ ಅಂಚು ತಲುಪಿದ್ದಾರೆ. ಇದರಿಂದ ರೈತ ಸಾಲದ ಸುಳಿಯಲ್ಲಿ ಸಿಲಿಕಿದ್ದಾನೆ.ಮುಖ್ಯಮಂತ್ರಿಗಳು ಅಧಿಕಾರದ ಅಮುಲಿನಲ್ಲಿ ರೈತರ ಯೋಗ ಕ್ಷೇಮವನ್ನು ಮರೆತು ಕಾಲ ಹರಣ ಮಾಡುತ್ತಿದ್ದಾರೆ ಎಂದರು.

            ಪ್ರತಿಭಟನೆಯನ್ನು ಉದ್ದೇಶಿಸಿ ಮುಖಂಡರಾದ ಭೋಜರಾಜ ಕರೋದಿ, ಕೆ.ಶಿಲಿಂಗಪ್ಪ, ಪಾಲಕ್ಷಗೌಡ ಪಾಟೀಲ, ಸಿದ್ದರಾಜ ಕಲಕೋಟಿ, ಡಿ.ಎಂ. ಸಾಲಿ, ಶಿದ್ದಲಿಂಗಪ್ಪ ಮಾತನಾಡಿದರು.ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ,ಲಿಂಗರಾಜ ಚಪ್ಪರದಳ್ಳಿ, ಸಂತೋಷ ಪಾಟೀಲ, ಡಾ. ಸಂತೋಷ ಆಲದಕಟ್ಟಿ, ಪ್ರಭು ಹಿಟ್ನಳ್ಳಿ, ರಾಜೇಂದ್ರ ಹಾವೇರಣ್ಣನವರ, ಮುತ್ತಯ್ಯ ಕಿತ್ತೂರಮಠ, ವಿರುಪಾಕ್ಷಪ್ಪ ಕಡ್ಲಿ, ಶಂಕ್ರಣ್ಣ ಮಾತನವರ, ನಿಂಗಪ್ಪ ಗೊಬ್ಬೇರ, ವಿರೇಂದ್ರ ಶೆಟ್ಟರ, ಪ್ರಕಾಶ ಉಜನಿಕೊಪ್ಪ, ಶಣ್ಮುಕಯ್ಯ ಮಳ್ಳಿಮಠ, ನೀಲಪ್ಪ ಚಾವಡಿ, ಸಂಗಮೇಶ ಸುರಳಿಹಳ್ಳಿ,ಈರಣ್ಣ ಅಂಗಡಿ, ನಾಗರಾಜ ಬಸಗಣ್ಣಿ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link