ಹೊಸಪೇಟೆ :
ಜಮ್ಮು ಕಾಶ್ಮೀರದ ಅವಂತಿಪುರದಲ್ಲಿ ಭಾರತೀಯ ಸೈನಿಕರ ಮೇಲೆ ಗುರುವಾರ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹೊಸಪೇಟೆ ತಾಲೂಕು ಸಮಾನ ಮನಸ್ಕರ ವೇದಿಕೆಯ ನೂರಾರು ದೇಶಾಭಿಮಾನಿಗಳು ನಗರದ ರೋಟರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಹಾಗು ಪಾಕ್ ಬೆಂಬಲಿತ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮುಖಂಡ ಧರ್ಮೇಂದ್ರಸಿಂಗ್ ಮಾತನಾಡಿ, ನಿನ್ನೆ ನಡೆದ ಉಗ್ರರ ದಾಳಿಯಲ್ಲಿ ಸುಮಾರು 44 ಯೋಧರು ಹುತಾತ್ಮರಾಗಿದ್ದಾರೆ. ಇದನ್ನು ಇಡೀ ದೇಶವೇ ಒಕ್ಕೊರಲಿನಿಂದ ಖಂಡಿಸುತ್ತದೆ. ಇಂಥ ಘಟನೆ ನಡೆಯಬಾರದಿತ್ತು. ಮೃತ ಯೋಧರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ದಾಳಿಯಲ್ಲಿ ಗಾಯಗೊಂಡ ಯೋಧರು ಶೀಘ್ರ ಗುಣಮುಖರಾಗಿ ಹೊರ ಬರಲಿ. ಹಾಗು ಮೃತ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ ಎಂದರು.
ಬಳಿಕ ಮೇಣದ ಬತ್ತಿಗಳನ್ನು ಹಚ್ಚಿ ಮೃತ ಯೋಧರಿಗೆ ಸಂತಾಪ ಸೂಚಿಸಲಾಯಿತು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್, ಮುಖಂಡರಾದ ಇಮಾಮ್ ನಿಯಾಜಿ, ಕವಿತಾಸಿಂಗ್, ಡಿ.ವೆಂಕಟರಮಣ, ನಿಂಬಗಲ್ ರಾಮಕೃಷ್ಣ, ಎನ್.ವೆಂಕಟೇಶ, ಪಾಂಡು, ಶ್ರೀನಿವಾಸ ರಾಯಸಂ, ಈಶ್ವರ್ ಚೌಹಾಣ್, ಗೌಸ್, ಲಿಯಾಕತ್ ಅಲಿ, ಗುಜ್ಜಲ ಮಂಜುನಾಥ, ಮಧುರ ಚೆನ್ನಶಾಸ್ತ್ರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
