ಭಾರತೀಯ ಜನತಾ ಪಕ್ಷದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ

ಹಾನಗಲ್ಲ :

       ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಇಳಿಸಿದರು ಸಹಿತ ರಾಜ್ಯ ಸಮಿಶ್ರ ಸರಕಾರ ಅವುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಅನ್ಯಾಯ ಮಾಡುವುದರ ಜೊತೆಗೆ ತಮ್ಮದೆ ಸರಕಾರದ ಸಚಿವರು ಬ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಹಾನಗಲ್ಲ ತಾಲೂಕ ಭಾರತೀಯ ಜನತಾ ಪಕ್ಷದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

      ಪ್ರತಿಭಟನೆ ರವಿವಾರ ಬೆಳಿಗ್ಗೆ 11 ಘಂಟೆಗೆ ಇಲ್ಲಿನ ಸಾವಿತ್ತಮ್ಮ ಉದಾಸಿ ಕಲ್ಯಾಣ ಮಂಟಪದಿಂದ ಹೋರಟು ನಂತರ ಕನಕದಾಸ ವೃತ್ತದಲ್ಲಿ ಟಾಯರಿಗೆ ಬೆಂಕಿ ಹಚ್ಚುವ ಮೂಲಕ ಸಮಿಶ್ರ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

       ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕ ಅದ್ಯಕ್ಷ ನಿಂಗಪ್ಪ ಗೊಬ್ಬೇರ ಮಾತನಾಡಿ, ಕರ್ನಾಟಕ ರಾಜ್ಯ ಸರಕಾರ ಜನರಿಗಾಗಿ ಸರಕಾರವನ್ನ ನಡೆಸುತ್ತಿಲ್ಲ ಸಂಪುಟ ಉಳಿವಿಗಾಗಿ ಸರಕಾರ ನಡೆಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೆ ಹಲವು ಸಾರಿ ಅವಹೇಳನಕಾರಿ, ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತ ರಾಜ್ಯದಲ್ಲಿ (ಕಾಂಗ್ರೇಸ್ ಮತ್ತು ಜೆಡಿಎಸ್) ಕುಮಾರಸ್ವಾಮಿ ಸರಕಾರವನ್ನು ನಡೆಸುತ್ತಿದ್ದಾರೆ ಇದು ಬಹಳ ದಿನಗಳ ಕಾಲ ನಡೆಯದು ಮುಂದಿನ ದಿನಗಳಲ್ಲಿ ನಾವು ತಕ್ಕ ಪಾಠ ಕಲಿಸಲಿದ್ದೇವೆ ಎಂದರು.

         ಸಹಕಾರಿ ಯುನಿಯನ್ ಅದ್ಯಕ್ಷ್ಯ ಕಲ್ಯಾಣಕುಮಾರ ಶೇಟ್ಟರ ಮಾತನಾಡಿ, ಈಡಿ ದೇಶದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾದ ಸಂಧರ್ಭದಲ್ಲಿ ಎಲ್ಲ ಪಕ್ಷಗಳು ಸೇರಿ ಮಹಾ ಘಟಬಂಧನ ಎಂಬುದನ್ನು ಕಟ್ಟಿ ಭಾರತ ಬಂದ್ ಮಾಡುವ ಮೂಲಕ ಮೋದಿಯವರಿಗೆ ದೊಡ್ಡ ಸಘರ್ಷವನ್ನು ಉಂಟುಮಾಡಿದ್ದರು. ಆದರೆ ಇವತ್ತು ನರೆಂದ್ರ ಮೋದಿಯವರ ಚಾಣಾಕ್ಷತನದಿಂದ ತೈಲಬೆಲೆ ಕಡಿಮೆಯಾಗಿದ್ದರು ಸಹಿತ ಕರ್ನಾಟಕ ರಾಜ್ಯದಲ್ಲಿ ಕಡಿಮೆ ಮಾಡದೆ ದ್ವಿಮುಖ ನೀತಿಯನ್ನು ಅನಿಸರಿಸುತ್ತಿದೆ.

       ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿನ ತೆರಿಗೆ ಹೆಚ್ಚಿಗೆ ಮಾಡುವುದರಿಂದ ಜನಸಾಮಾನ್ಯರಿಗೆ ಹೊರೆ ಹಾಗೂ ಸರಕು ಸಾಗಾಣಿಕೆಗೆ ತೀರ್ವ ತೊಂದರೆ ಹಾಗೂ ಬೆಲೆ ಹೆಚ್ಚಳ ವಾಗುವುದನ್ನು ನಾವು ಖಂಡಿಸುತ್ತೆವೆ. ರಾಜ್ಯದಲ್ಲಿ ಸಮಿಶ್ರ ಸರಕಾರ ಬಂದು ಏಳು ತಿಂಗಳುಗಳಾದರು ಯಾವುದೆ ಅಭಿವೃದ್ದಿ ಕೆಲಸವಾಗದೇ ಶೂನ್ಯವಾಗಿದೆ. ಬ್ರಷ್ಟಾಚಾರದಲ್ಲಂತು ಏತ್ತಿದ ಕೈ ಎಲ್ಲ ಇಲಾಖೆಗಳಲ್ಲೂ ವಸೂಲಿದಂದೆ ನಡೆಯುತ್ತಿದೆ ಯಾರು ಮಂತ್ರಿಗಳಾಗಿದ್ದಾರೆ ಅವರಿಗೆ ಪ್ರತಿ ತಿಂಗಳ ಕಪ್ಪು ಕಾಣಿಕೆ ನೀಡತ್ತಿದ್ದಾರೆ.

       ಈವತ್ತಿನ ಬ್ರಷ್ಟಾಚಾರ ವಿಧಾನಸೌದದ 3 ನೇ ಮಹಡಿವರೆಗೂ ರಾಜಾ ರೋಷವಾಗಿ ನಡೆಯುತ್ತಿದ್ದರು ಕುಮಾರಸ್ವಾಮಿ ಸರಕಾರ ಕಣ್ಮುಚ್ಚಿ ಕುಳಿತಿದೆ. ಕೂಡಲೆ ಬ್ರಷ್ಟಾಚಾರದಲ್ಲಿ ತೊಡಗಿದ್ದ ಸಚಿವ ಪುಟ್ಟರಂಗಶೆಟ್ಟಿ ರಾಜಿನಾಮೆ ನೀಡಬೇಕು ಸಮರ್ಗ ಸಿಬಿಐ ತನಿಖೆಯಾಗಬೇಕು ಹಾಗೂ ತೈಲ ಬೆಲೆ ಕಡಿಮೆಯಾಗಬೇಕೆಂದು ಒತ್ತಾಯಿಸಿದರು.

       ಬಿಜೆಪಿ ಯುವ ಮುಖಂಡ ರಾಜು ಗೌಳಿ ಹಾಗೂ ಮಾಜಿ ಜಿಪಂ ಸದಸ್ಯ ಪದ್ಮನಾಬ ಕುಂದಪುರ ಮಾತನಾಡಿದರು. ಈ ಸಂಧರ್ಭದಲ್ಲಿ ಜಾಫರ್‍ಸಾಬ್ ಖೇಣಿ, ಬಾಸ್ಕರ್‍ಹುಲ್ಮನಿ, ಸದಾಗೌಡ ಪಾಟೀಲ, ಚಂದ್ರಪ್ಪ ಹರಿಜನ, ಚಂದು ಉಗ್ರಣ್ಣವರ, ನಾಗನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಸಂತೋಷ ಭಜಂತ್ರಿ, ರಮೇಶ ಚಿನ್ನಮುಳಗುಂದ, ಚಮನಸಾಬ್ ಕಿತ್ತೂರ, ರೆಹಮಾನ್‍ಸಾಬ ಸೌದಾಗರ, ಮಂಜುನಾಥ ಬಸವಂತಕರ, ಸಂತೋಷ ಟೇಕೋಜಿ, ಕೊಟೇಪ್ಪ ಚಿಕ್ಕಣ್ಣವರ, ಪ್ರಶಾಂತ ಗೊಂದಿ, ಶಿವಕುಮಾರ ಹಳೆಕೋಟಿ, ನಿಯಾಜ ಉಪ್ಪಿನ, ಪವನ ಗಜಾಕೋಶ, ರಾಮಚಂದ್ರ ಹೆಗಡೆ, ಚಂದ್ರು ಆನವಟ್ಟಿ ಮುಂತಾದªರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link