ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನಾ ಮೆರವಣಿಗೆ

ಹರಪನಹಳ್ಳಿ 

         ವಕೀಲರ ರಾಷ್ಟ್ರವ್ಯಾಪ್ತಿ ಪ್ರತಿಭಟನೆಗೆ ಭಾರತೀಯ ವಕೀಲರ ಪರಿಷತ್ ಕರೆ ನೀಡಿರುವ ಪ್ರಯುಕ್ತ ಪಟ್ಟಣದ ನ್ಯಾಯವಾದಿಗಳ ಸಂಘ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ನ್ಯಾಯಾಲಯದ ಆವರಣದಿಂದ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಪ್ರವಾಸಿ ಮಂದಿರ ವೃತ್ತದಿಂದ ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.

        ವಕೀಲರ ರಕ್ಷಣೆ ಕಾಯಿದೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಅಯವ್ಯಯದಲ್ಲಿ ವಕೀಲರ ಸಮುದಾಯವನ್ನು ಕಡೆಗಣಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸುವುದಾಗಿ ಹೇಳಿದರು.

        ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಕ.ಬಸವರಾಜ, ಪದಾಧಿಕಾರಿಗಳಾದ ಬಿ.ಗೋಣಿಬಸಪ್ಪ, ಬಿ.ಕರಿಯಪ್ಪ, ತಿರುಪತಿ, ಗಂಗಾಧರ ಗುರುಮಠ, ಸಿ.ರಾಮಭಟ್, ಎಸ್.ಎಂ.ರುದ್ರಮುನಿ, ಆರುಂಡಿ ನಾಗರಾಜ, ವಾಸುದೇವ, ಪ್ರಕಾಶ ಗೌಡ ವಿ.ಜಿ., ಎಂ.ಮಲ್ಲಪ್ಪ, ರೇವಣಸಿದ್ದಪ್ಪ, ರೇಣುಕಾ ಎಫ್.ಮೇಟಿ, ನಳಿನಾಕುಮಾರಿ ಹಾಗೂ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link