ಮಹಾತ್ಮಗಾಂಧಿಗೆ ಅಪಮಾನ ಮಾಡಿದ್ದವರನ್ನು ಶಿಕ್ಷಿಸುವಂತೆ ಕಾಂಗ್ರೆಸ್ ಆಗ್ರಹ

ಬಳ್ಳಾರಿ

       ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾದ ಮಹಿಳಾ ನಾಯಕಿಯೋರ್ವರು ಜನೆವರಿ 30 ರಂದು ಪೂಜ್ಯ ಮಹಾತ್ಮಗಾಂಧಿ ಪುತ್ಥಳಿಗೆ ಗನ್ ಇಟ್ಟು ಶೂಟ್ ಮಾಡಲು ಹೋಗಿರುವ ದೃಶ್ಯ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದ್ದು ಆ ಮಹಿಳೆಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದೆ.

         ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಮತ್ತು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಹಮ್ಮದ್ ರಫೀಕ್ ನೇತೃತ್ವದಲ್ಲಿ ಇಂದು ಅನೇಕ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ದೇಶಕ್ಕಾಗಿ ತಮ್ಮ ಹಿತಾಸಕ್ತಿಯನ್ನೇ ಬಲಿಕೊಟ್ಟು ಮಹಾತ್ಮರೆನಿಸಿದ ಮಹಾತ್ಮಾಗಾಂಧಿ ಅವರನ್ನು ಅವಮಾನಿಸಿ ಅವರನ್ನು ಗುಂಡಿಕ್ಕಿ ಕೊಂದಿರುವ ಗೋಡ್ಸೆ ಅವರನ್ನು ಮಹಾತ್ಮನೆಂದು ಘೋಷಣೆ ಮಾಡಿರುವ ಮಹಿಳೆಯನ್ನು ಕೂಡಲೇ ಬಂಧಿಸಬೇಕು. ಹುತಾತ್ಮರನ್ನು, ಮಹಾತ್ಮರನ್ನು ಗೇಲಿ ಮಾಡಿ ರಾಷ್ಟ್ರಭಕ್ತಿ ಹೊಂದಿರುವ ಮನಸ್ಸುಗಳಲ್ಲಿ ಕಿಡಿ ಹಚ್ಚುವ ಯಾರೇ ಆಗಲಿ ಕಾನೂನಾತ್ಮಕ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

         ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಹೆಗಡೆ, ಕಲ್ಲುಕಂಬ ಪಂಪಾಪತಿ, ಟಿ.ಪದ್ಮ, ಪಿ.ಮೋಹನ್, ಅಯಾಜ್ ಅಹ್ಮದ್, ಅರುಣ್ ಕುಮಾರ್, ಅಸುಂಡಿ ನಾಗರಾಜ್, ವಿವೇಕ್, ಜಾಶ್ವ, ರವಿಕುಮಾರ್, ಸಾದಿಕ್, ಗೌತಮ್, ಸಮೀರ್ ಇನ್ನಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link