ಬಳ್ಳಾರಿ:
ಇಂದು ನಗರದ ಕೊಟ್ಟರುಸ್ವಾಮಿ ಶಿಕ್ಷಣ ಮಹಾವಿದ್ಯಲಯ ಕಾಲೇಜಿನಲ್ಲಿ ಎಐಡಿಎಸ್ಒ ಎಐಎಮ್ಎಸ್ಎಸ್ ಸಂಘಟನೆಗಳಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಪ್ರಾರಂಭದಲ್ಲಿ ಮಧು ಪತ್ತಾರ್ ಅವರ ಆತ್ಮಕ್ಕೆ ಶಾಂತಿಕೋರಿ 2ನಿಮಿಷ ಮೌನ ಆಚರಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎಐಡಿಎಸ್ಒ ರಾಜ್ಯದ್ಯಕ್ಷರಾದ ಡಾ.ಪ್ರಮೋದ್ ರವರು ಇಂದಿನ ಸಾಮಾಜದಲ್ಲಿ ವಿದ್ಯಾರ್ಥಿ ಯುವಜನರ ನೈತಿಕ ಬೆನ್ನೆಲುಬನ್ನು ಮುರಿಯುವ ಹನ್ನಾರವನ್ನು ಆಳುವ ಸರ್ಕಾರಗಳು ಮಾಡುತ್ತಾ ಬಂದಿವೆ, ಬೆಂಗಾಲಿ ಕವಿ ‘ಶರತ್ ಚಂದ್ರ’ ರವರು “ ಮನಷ್ಯನ ಸಾವಿಗಿಂತ ಮಾನವ ಮೌಲ್ಯಗಳ ಸಾವು ಅತ್ಯಂತ ದು:ಖಕರ” ಎಂದು ಹೇಳಿದ್ದರೆ. ಹೀಗೆ ನಮ್ಮ ಜನರನ್ನು ಅಜ್ನಾನದೆಡೆಗೆ ದೂಡುವ ಎಲ್ಲಾ ಪ್ರಯತ್ನಗಳು ನಡೆಯುತ್ತದ. ಇದರ ವಿರುದ್ದ ನಮ್ಮ ಹೋರಾಟ ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಸಾಂಸ್ಕೃತಿಕ ಕ್ರಾಂತಿ ನಡೆಯಬೇಕಿದೆ ಎಂದರು.
ಎಐಎಮ್ಎಸ್ಎಸ್ ನ ಜಿಲ್ಲಾದ್ಯಕ್ಷರಾದ ಶ್ರೀಮತಿ ಶಾಂತಾರವರು ಇಂದು ಮಹಿಳೆಯರ ಮೇಲೆ ನಡೆಯುತ್ತರುವ ಅತ್ಯಾಚಾರ-ಕೊಲೆ ಪ್ರಕರಣಗಳು ಬೆಳಕಿಗೆ ಬಂದರೂ ಅವುಗಳನ್ನು ಮುಚ್ಚಿ ಹಾಕುವ ಪ್ರಯತ್ನಗಳೆ ಹೆಚ್ಚಾಗಿದೆ., ನ್ಯಾಯಾದಿಶ ಸ್ಥಾನದಲ್ಲಿ ಕುಳಿತವರೆ ಅತ್ಯಾಚಾರಿಗಳ ಪರವಾಗಿ ಧೋರಣೆಯನ್ನು ಹೋಂದಿರುವಾಗ ಮಹಹಿಳೆಯರಿಗೆ ನ್ಯಾಯ ಒದಗಿಸುವವರು ಯಾರು? ಇದಕ್ಕೆ ಒಂದೇ ಉತ್ತರ ಹೋರಾಟ ನಮ್ಮ ಸಂಘಟನೆಗಳಿಂದ ಮಧು ಅತ್ಯಾಚಾರ ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಯುತ್ತದೆ.
ಈ ಹಿಂದೆ ನಿರ್ಭಯ, ಧಾನಮ್ಮ, ಹಾಗೂ ರಕ್ಷಿತ ಅವರ ಹಾಲವರು ಪ್ರಕರಣಗಳ ವಿರುದ್ದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಅಗುವರೆಗೂ ಹೋರಾಟ ಕಟ್ಟಿದ್ದೆವೆ. ಈಗ ಇನ್ನು ಉಗ್ರ ಹೋರಾಟವನ್ನು ಈ ಆಳುವ ಸರ್ಕಾರಗಳ ವಿರುದ್ದ ಕಟ್ಟಬೇಕಿದೆ. ಅಷ್ಟೆ ಅಲ್ಲದೇ ‘ಮಧು’ಗೆ ನ್ಯಾಯ ಸಿಗೋವರೆಗೂ ನಾವು ಅವರೂಂದಿಗೆ ಇರುತ್ತವೆ ಎಂದರು.ಈ ಕಾರ್ಯಕ್ರಮದ ಅದ್ಯಕ್ಷತೆ ಗೋವಿಂದ್ ವಹಿಸಿದ್ದರು, ಎಐಡಿಎಸ್ಒ ಜಿಲ್ಲಾ ಉಪದ್ಯಾಕ್ಷರಾದ ಜಗದೀಶ್ ನೇಮಕಲ್ ಸದಸ್ಯರಾದ ಈರಣ್ಣ, ಶೇಖರ್, ಧರ್ಮನಾಯಕ್ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








