ಅಂಬೇಡ್ಕರ್ ಪ್ರತಿಮೆಗಳ ಮರು ನಾಮಕರಣಕ್ಕೆ ಒತ್ತಾಯ…!

ಬೆಂಗಳೂರು

       ದೇಶದಾದ್ಯಂತವಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಸ್ಟ್ಯಾಚ್ಯೂ ಆಫ್ ರಿರ್ಫಾಮೇಷನ್ ಎಂದು ಹೆಸರಿಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿ ಇಂಡಿಯನ್ ಲಿಬರಲ್ ಅಂಡ್ ರೆವಿಲ್ಯೂಷನರಿ ಸಿಟಿಜನ್ ಆಫ್ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

       ಟೌನ್‍ಹಾಲ್ ಮುಂದೆ ಗುರುವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ವಿನಯ್ ಕುಮಾರ್ ವಿ. ನಾಯ್ಕ್ ಮಾತನಾಡಿ ರಾಜ್ಯದ ವಿಧಾನಸೌಧ ಮುಂಭಾಗವಿರುವ ಅಂಬೇಡ್ಕರ್ ರವರ ಪುತ್ಥಳಿಗೆ ಕಬ್ಬಿಣ ತಂತಿಯ ಬೇಲಿ ನಿರ್ಮಿಸಿ, ರಾಜ್ಯ ಸರ್ಕಾರ ಕೆಲ ದುರ ದೇಶವುಳ್ಳ ಸಂಘಟನೆಕಾರರನ್ನು ಬಳಸಿಕೊಂಡು ಬಾಬಾ ಸಾಹೇಬರ ಪುತ್ಥಳಿಯನ್ನು ವಿಧಾನಸೌಧದ ಹೊರಗೆ ನಿಲ್ಲಿಸಿ, ಇಂದಿಗೂ ಅಸ್ಪೃಶ್ಯತೆಯನ್ನು ಜೀವಂತವಾಗಿ ಇರಿಸಿದ್ದಾರೆ ಎಂದರು.

       ಸಂವಿಧಾನ ಶಿಲ್ಪಿ ಸಾಮಾಜಿಕ ಸುಧಾರಕ ಡಾ. ಬಿ.ಆರ್. ಅಂಬೇಡ್ಕರ್‍ರವರ ಬೃಹತ್ ಪ್ರತಿಮೆ ದೇಶದಲ್ಲಿ ಇಲ್ಲ. ರಾಜ್ಯ ಅಥವಾ ರಾಷ್ಟ್ರದಲ್ಲಿ ಅವರ ಬೃಹತ್ ಪ್ರತಿಮೆಯನ್ನು ನಿಲ್ಲಿಸಲು ಕೇಂದ್ರ ಅಥವಾ ರಾಜ್ಯ ಸರ್ಕಾರ ಮುಂದಾಗಬೇಕು.

      ರಾಜ್ಯ ಸರ್ಕಾರ ರಾಜ್ಯದಲ್ಲಿ ಅಂಬೇಡ್ಕರ್ ರವರ ಬೃಹತ್ ಪ್ರತಿಮೆಯನ್ನು ನಿರ್ಮಿಸಬೇಕು. ಅಥವಾ ಕೇಂದ್ರ ಸರ್ಕಾರಕ್ಕೆ ಪ್ರತಿಮೆ ನಿರ್ಮಿಸಲು ಕೇಂದ್ರಕ್ಕೆ ಮನವಿ ಮಾಡಬೇಕು. ಹಾಗೂ ದೇಶದಾದ್ಯಂತವಿರುವ ಪ್ರತಿಮೆಗಳಿಗೆ ಸ್ಟ್ಯಾಚ್ಯೂ ಆಫ್ ರಿರ್ಫಾಮೇಷನ್ ಎಂದು ನಾಮಕರಣ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದರು.

      ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap