ರಾಣಿಬೆನ್ನೂರು
ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪರಮೇಶ್ವರಪ್ಪನ ದುರಾಡಳಿತ, ಭ್ರಷ್ಠಾಚಾರ ಹಾಗೂ ಕರ್ತವ್ಯ ನಿರ್ಲಕ್ಷತನವನ್ನು ಖಂಡಿಸಿ ಕೂಡಲೇ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಿಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಶಿವಪುತ್ರಪ್ಪ ಮಲ್ಲಾಡದ ಮಾತನಾಡಿ, ಈ ಹಿಂದೆ ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಸ್ವಯಂ ಉದ್ಯೋಗ ಯೋಜನೆಯಡಿ 3 ಲಕ್ಷಗಳ ವರೆಗೂ ಸಹಾಯ ಧನ ಮಂಜೂರ ಮಾಡಲು ಅರ್ಜಿ ವಿತರಿಸಲು ಸರ್ಕಾರ ತಿಳಿಸಿದ್ದರೂ ಇಲ್ಲಿಯವರೆಗೂ ಸಂಪೂರ್ಣವಾಗಿ ವಿತರಣೆಯಾಗಿಲ್ಲ. ವೈದ್ಯ ಪರಮೇಶಪ್ಪ ಪ್ರಮಾಣ ಪತ್ರ ಕೇಳಲು ಹೋದ ಮಹಿಳೆಯರಿಗೆ ಮನ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಮತ್ತು ಜಿಲ್ಲಾಧಿಕಾರಿಗಳು ಸಂತ್ರಸ್ತ ಮಹಿಳೆಯರಿಗೆ ಪ್ರಮಾಣ ಪತ್ರ ಒದಗಿಸಲು ಸೂಚಿಸಿದ್ದರೂ ಅದಕ್ಕೆ ಸ್ಪಂದಿಸದಿರುವುದು ಅವರ ಘನತೆಯನ್ನು ಎತ್ತಿ ಹಿಡಿಯುತ್ತದೆ.
ಇವರ ಬಗ್ಗೆ ಸಂಬಂಧಪಟ್ಟ ಇಲಾಖೆ, ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದ್ದರಿಂದ ಇಂತಹ ನೀಚ ಕರ್ತವ್ಯ ಮಾಡುತ್ತಿರುವ ಡಾ|| ಪರಮೆಶ್ವರಪ್ಪ ಆರ್.ಸಿ ಇವರನ್ನು ತತಕ್ಷಣವೇ ಸೇವೆಯಿಂದಲೇ ವಜಾಗೊಳಿಸಬೇಕು ಇಲ್ಲವಾದರೆ ಜೂ.10 ರಿಂದ ನಿರಂತರ ಉಪವಾಸ ಧರಣಿ ಹಮ್ಮಿಕೊಳ್ಳುತ್ತೇವೆ ನಾವುಗಳೂ ಈ ಮಹಿಳೆಯರಿಗೆ ಪರಿಹಾರ ಒದಗಿಸುವವರೆಗೂ ಈ ಧರಣಿ ಕೈ ಬಿಡುವುದಿಲ್ಲ. ಒಂದು ವೇಳೆ ನಮಗೆ ತೊಂದರೆ ಉಂಟಾದರೆ ಅದಕ್ಕೆ ಆರೋಗ್ಯ ಇಲಾಖೆಯೇ ನೇರ ಹೊಣೆ ಎಂದರು.
ಇದೇ ಸಂದರ್ಭದಲ್ಲಿ ಜಗದೀಶ ಕೆರೂಡಿ, ರಾಜು ಓಲೇಕಾರ, ಗೋವಿಂದ ಲಮಾಣಿ, ಪರಮೇಶಪ್ಪ ಲಮಾಣಿ, ದೇವಕ್ಕ ಲಮಾಣಿ, ಚೆನ್ನವ್ವ ಲಮಾಣಿ, ಗೀತವ್ವ ಲಮಾಣಿ ಸೇರಿದಂತೆ 50ಕ್ಕೂ ಹೆಚ್ಚು ಮಹಿಳೆಯರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ