ಟ್ರಾನ್ಸ್‍ಜೆಂಡರ್ ಬಿಲ್ ವಾಪಸ್ ಪಡೆಯಲು ಆಗ್ರಹ

ಚಿತ್ರದುರ್ಗ

       ಟ್ರಾನ್ಸ್ ಜೆಂಡರ್ ಬಿಲ್‍ನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಮಾನವ ಕಳ್ಳಸಾಕಾಣಿಕೆಯ ಮಸೂದೆಯನ್ನು ಸಲಹಾ ಸಮಿತಿಗೆ ನೀಡುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಮಂಗಳಮುಖಿಯರು ಪ್ರತಿಭಟನೆಯನ್ನು ನಡೆಸಿದರು.ವಾಹಿನಿ ಸಮುದಾಯ ಸಂಸ್ಥೆ ಮತ್ತು ಸಂಗಮದ ಅಡಿಯಲ್ಲಿ ನಗರದಲ್ಲಿ ಮೆರವಣಿಗೆಯನ್ನು ನಡೆಸಿದ ಮಂಗಳಮುಖಿಯರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

        ಡಿ. 2018ರಲ್ಲಿಲೋಕಸಭೆಯಲ್ಲಿ ಟ್ರಾನ್ಸ ಜೆಂಡರ್ ವ್ಯಕ್ತಿಗಳ ಮಸೂದೆ, 2018ನ್ನು 27 ತಿದ್ದುಪಡಿಗಳ ಸಮೃತ ಅನುಮೋದಿಸಲಾಗಿದೆ, ಜುಲೈ 2018ರಲ್ಲಿ ಮಾನವ ಕಳ್ಳಸಾಕಾಣಿಕೆಯ ಮಸೂದೆ 2018ನ್ನು ಅನುಮೋದಿಸಲಾಗಿದೆ. ತಿದ್ದುಪಡಿ ಮಾಡಲಾದ ಟ್ರಾನ್ಸ ಜೆಂಡರ್ ಮಸೂದೆಯಲ್ಲಿ ಟ್ರಾನ್ಸ್ ಜೆಂಡರ್ ಪದವನ್ನು ಸುಧಾರಿತ ವ್ಯಾಖ್ಯಾನ ಮಾಡಿದ್ದು ಸ್ವಾಗರ್ತಾ ಇದನ್ನು ಬಿಟ್ಟರೆ ಈ ಮಸೂದೆ ಜನ ವಿರೋಧಿಯಾಗಿದೆ, ಇದನ್ನು ಮತ್ತೋಮ್ಮೆ ತಿದ್ದುಪಡಿ ಮಾಡುವಂತೆ ಆಗ್ರಹಿಸಲಾಯಿತು.

          2014ರಲ್ಲಿ ಸವೋಚ್ರ್ಛ ನ್ಯಾಯಾಲಯವು ನ್ಯಾಷನಲ್ ಲೀಗಲ್ ಸರ್ವಿಸ್ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತಿರ್ಪಿನ ನಂತರ ಸರಣಿಗಳಲ್ಲಿ ರಚನೆಯಾದ ಮಸೂದೆಗಳಲ್ಲಿ ಇದು ಹೊಸದಾಗಿದೆ 2016ರಲ್ಲಿ ಮಸೂದೆಯ ಬಗ್ಗೆ ಸಮುದಾಯದ ಜೋತೆಯಲ್ಲಿ ವಿಮರ್ಶೆಗಳನ್ನು ಮತ್ತು ಸಂಸದೀಯ ಸ್ಥಾಯಿ ಸಮಿತಿಯ ಶೀಫಾರಸ್ಸುಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಲಕ್ಷ ಮಾಡಲಾಗಿದೆ. ನ್ಯಾಯಾಲಯದ ತೀರ್ಪು, ಸಂವಿಧಾನ ನೀಡಿರುವ ವ್ಯಕ್ತಿಗಳ ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗಿದೆ ಇದಲ್ಲದೆ ನಮಗೆ ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡದೇ ಅವಕಾಶವಂಚಿತರನ್ನಾಗಿ ಮಾಡಲಾಗಿದೆ ಎಂದು ದೂರಿದ್ದಾಋಎ.

       ನಮ್ಮ ಸಂಪ್ರಾದಾಯಕವಾಧ ಭೀಕ್ಷಾಟನೆಯನ್ನು ಅಪರಾಧಿಕಾರಣ ಎಂದು ಎತ್ತಿ ಹಿಡಿಯಲಾಗಿದೆ. ನಮ್ಮ ಮೇಲೆ ನಡೆಯುವ ದೌರ್ಜನ್ಯಗಳಿಗೆ ನೀಡುವ ಶಿಕ್ಷೆಯ ಪ್ರಮಾಣ ಕಡಿಮೆ ಇದೆ, ವಯಸ್ಕ ಟ್ರಾನ್ಸ್ ಜೆಂಡರ್ ಗಳ ಕಾನೂತ್ಮಾಕವಾದ ಹಕ್ಕುಗಳ ಉಲ್ಲಂಘನೆಯಾಗಿದ್ದು ತಮಿಷ್ಠದಂತೆ ವಾಸವಿರಲು ಬಿಡದೆ ತಮ್ಮ ಪೋಷಕರೊಂದಿಗೆ ವಾಸ ಮಾಡಲು ಬಿಡಬೇಕು ಇಲ್ಲವಾದಲ್ಲಿ ನ್ಯಾಯಾಲುದ ಮೊರೆ ಹೋಗುವಂತ ವಾತಾವರಣ ನಿರ್ಮಾಣವಾಗಿದೆ. ನಮ್ಮ ಸಮುದಾಯವನ್ನು ಇಬ್ಬಾಗ ಮಾಡಲಾಗಿದೆ ಯಾರು ಲಿಂಗ ಪುನರ್ವಿತರಣೆ ಶಶ್ತ್ರಚಿಕಿತ್ಸಗೆ ಒಳಗಾಗಿಲ್ಲವೋ ಅವರು ಟ್ರಾನ್ಸ ಜೆಂಡರ್ ಎಂದು ಮಾತ್ರ ಗುರುತಿಸಲಾಗಿದೆ, ಯಾರು ತಾನು ಹೆಣ್ಣು ಅಥವಾ ಗಂಡು ಎಂದು ಗುರುತಿಸ ಬಯಸುವರೊ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿರಬೇಕೆಂದು ಹೇಳಲಾಗುತ್ತಿದೆ ಆದರೆ ಇದು ನ್ಯಾಯಾಲಯದ ತೀರ್ಪಿಗೆ ವಿರುದ್ದವಾಗಿದೆ ಎಂದು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap