ಬಸ್‍ ಮಾರ್ಗದ ವಿಸ್ತರಣೆಗೆ ಖಂಡನೆ

ಬ್ಯಾಡಗಿ:

        ತಾಲ್ಲೂಕಿನ ಕಲ್ಲೆದೇವರು ಗ್ರಾಮಕ್ಕೆ ಬಂದು ವಾಪಸ್ ಬ್ಯಾಡಗಿ ಪಟ್ಟಣಕ್ಕೆ ಹೋಗುವ ಬಸ್‍ನ್ನು ಗುತ್ತಲದವರೆಗೆ ವಿಸ್ತರಿಸಿದ್ದನ್ನು ಖಂಡಿಸಿ ಸೋಮವಾರ ಕಲ್ಲೇದೇವರ ಗ್ರಾಮದ ನೂರಾರು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರಲ್ಲದೇ ಕೂಡಲೇ ಅದನ್ನು ರದ್ದುಪಡಿಸುವಂತೆ ಆಗ್ರಹಿಸಿದರು.

         ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡ ಶಿವಕುಮಾರ ಚಿಕ್ಕಮಠ, ಬ್ಯಾಡಗಿ-ಕಲ್ಲೆದೇವರು ನಡುವೆ ಚಲಿಸುತ್ತಿದ್ದ ಬಸ್‍ನ್ನು ಗುತ್ತಲದವರಗೆ ವಿಸ್ತರಿಸಲಾಗಿದೆ. ಸದರಿ ಬಸ್ ಗುತ್ತಲ ತಲುಪಿ ಮರಳಿ ಕಲ್ಲೇದೇವರ ಗ್ರಾಮಕ್ಕೆ ಬರುವಷ್ಟರಲ್ಲಿ ಗಂಟೆ 10 ಹೊಡೆಯು ತ್ತಿದ್ದು ಹೀಗಾಗಿ ಶಾಲಾ ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದರು.

       ಗುತ್ತಲಕ್ಕೆ ಹೋಗಿ ಬರುವ ಬಸ್ ಕಲ್ಲೇದೇವರ ಗ್ರಾಮಕ್ಕೆ ತಡವಾಗಿ ಬಂದು ಸೇರುತ್ತದೆ ಇದರಿಂದ ಕಲ್ಲೇದೇವರ ಗ್ರಾಮ ಸೇರಿದಂತೆ ಅಳಲಗೇರಿ, ಮೋಟೆಬೆನ್ನೂರಿನ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗಳನ್ನು ತಲುಪಲು ಸಾಧ್ಯವಾಗದೇ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ, ಕೂಡಲೇ ಗುತ್ತಲದವರೆಗೆ ಹೋಗುವುದನ್ನು ರದ್ದುಗೊಳಿಸಿ ಶಾಲಾ ಅವಧಿಗೆ ಬಸ್ ತಲುಪುವಂತೆ ನೋಡಿಕೊಳ್ಳಲು ಆಗ್ರಹಿಸಿದರು.

        ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂದಿಸಿದ ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ಕಡ್ಲಿಕೊಪ್ಪ ಬೆಳಿಗ್ಗೆ ಒಂದು ಬಸ್ ಬಿಡುವ ವ್ಯವಸ್ಥೆಯನ್ನು ಮಾಡುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಲು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಕುಮಾರ ಚೂರಿ, ನಿಂಗಪ್ಪ ಕರಿಯಪ್ಪನವರ, ಶಂಕರ ಮರಿಗಾಲ, ಕಲ್ಲಪ್ಪ ತೋಟದ, ಕುಮಾರ ಹಿರೇಮಠ, ಮಂಜುನಾಥ ಲಿಂಗಣ್ಣನವರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link