ಹಾನಗಲ್ಲ :
ಹಾನಗಲ್ಲ ತಾಲೂಕಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮುದಾಯಕ್ಕೆ ಶೇ.7 ರಷ್ಟು ಮಿಸಲಾತಿ ಈಗಿರುವ ಶೇ.3 ರಿಂದ ಸಂವಿದಾನ ಬದ್ದವಾಗಿ ಹೆಚ್ಚಿಸುವ ಹಕ್ಕನ್ನು ಒತ್ತಾಯಿಸಿ ವಾಲ್ಮೀಕಿ ಸಮಾಜದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಎಮ್.ಗಂಗಪ್ಪವರಿಗೆ ಮನವಿ ಅರ್ಪಿಸಿದರು.
ಶುಕ್ರವಾರ ಬೆಳಿಗ್ಗೆ 11 ಘಂಟೆ ಸುಮಾರಿಗೆ ಪ್ರತಿಭಟನಾ ಮೆರವಣಿಗೆ, ಈಲ್ಲಿನ ಗ್ರಾಮದೇವಿ ದೇವಸ್ಥಾನದಿಂದ ಹೊರಟು ಪ್ರಮುಖ ಬಿದಿಗಳ ಮುಖಾಂತರ ನೂರಾರು ವಾಲ್ಮೀಕಿ ಸಮಾಜದ ಭಾಂಧವರು, ತಮ್ಮ ಬೇಡಿಕೆಗಳನ್ನು ಇಡೇರಿಸುವಂತೆ ಘೊಷಣೆಗಳನ್ನು ಕೂಗುತ್ತ ಕನಕದಾಸ ಸರ್ಕಲ್ಲಿಗೆ ತಲುಪಿ ಕೆಲಕಾಲ ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರ ಕಚೇರಿ ತಲುಪಿ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ನಿವೃತ್ತ ಜಿಲ್ಲಾಧಿಕಾರಿ ಹಾಗೂ ಸಮಾಜದ ಮುಖಂಡ ಬಿ.ಶಿವಪ್ಪ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜಕ್ಕೆ ಸಂವಿಧಾನ ಬದ್ದ ಹಕ್ಕಾಗಿರುವ ಶೇ.7ರಷ್ಟು ಮಿಸಲಾತಿ ನೀಡುತ್ತಿದ್ದರು ರಾಜ್ಯ ಸರಕಾರ ಮಿಸಲಾತಿಯನ್ನು ನೀಡದೆ ಹಿಂದೇಟು ಹಾಕುತ್ತಿರುವುದು ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದು ಖಂಡನೀಯ.
ಏಪ್ರೀಲ್ 1956 ರಲ್ಲಿ ಪರಿಶಿಷ್ಠ ಪಂಗಡದ ಜನಸಂಖ್ಯೆಯ ಅದ್ಯಯನದ ಬಾಕಿ ಇರಿಸಿ, ತಾತ್ಕಾಲಿಕವಾಗಿ ಪರಶೀಷ್ಟ ಪಂಗಡದವರಿಗೆ ಶೇ.3 ರಷ್ಟು ಮಿಸಲಾತಿಯನ್ನು ನಿಗದಿಪಡಿಸಲಾಗಿತ್ತು. 1956ರ ಉತ್ತರಾರ್ಧದಲ್ಲಿ ಬಾಂಬೆ ಪ್ರಾಂತ್ಯದ ಬೆಳಗಾವಿ, ಕಾರವಾರ, ಧಾರವಾಡ, ಹೈದರಾಬಾದ್ ಪ್ರಾಂತ್ಯದ ಬಿದರ್, ಗುಲಬರ್ಗಾ, ರಾಯಚೂರ, ಹಾಗೂ ಮದ್ರಾಸ್ ಪ್ರಾಂತ್ಯದ ದಕ್ಷಿಣ ಕನ್ನಡ ಈ ಎಲ್ಲ ಜಿಲ್ಲೆಗಳ ರಾಜ್ಯ ಪುನರ್ ವಿಂಗಡಣೆ ಕಾರಣದಿಂದ ಕರ್ನಾಟಕ ರಾಜ್ಯಕ್ಕೆ ಸೇರಿದವು. ಈ ಸೇರುವಿಕೆಯಿಂದ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇದ್ದ (6) ಜಾತಿಗಳು 49 ಜಾತಿಗಳಷ್ಟು ಹೆಚ್ಚಾದವು
2011ರ ಜನಗಣತಿ ಪ್ರಕಾರ ಪರಿಶಿಷ್ಟ ವರ್ಗಗಳ ಸಂಖ್ಯೆ 42,45,565 ಲಕ್ಷ. ಇದ್ದು, ಒಟ್ಟು ಕರ್ನಾಟಕ ರಾಜ್ಯದಲ್ಲಿ ವಾಲ್ಮೀಕಿ ಜನಸಂಖ್ಯೆ ಶೇ.7 ರಷ್ಟು ಇದ್ದರು ಭಾರತ ಸಂವಿಧಾನ ಆರ್ಟಿಕಲ್ 15-16 ಪ್ರಕಾರ ಪರಿಶಿಷ್ಟ ವರ್ಗದ ಜನರಿಗೆ ಕನಿಷ್ಟ ಜನಸಂಖ್ಯೆ ಪ್ರಮಾಣದ ಅನುಸಾರ ಕಡ್ಡಾಯವಾಗಿ ಮಿಸಲಾತಿಯನ್ನು ನೀಡಬೇಕೆಂದು ನಿರ್ದೆಶನವಿದೆ ಕೂಡಲೇ ಕರ್ನಾಟಕ ಉಚ್ಚನ್ಯಾಯಾಲಯದ ವಿಭಾಗೀಯ ಪೀಠದ ನಿರ್ದೇಶನ್ವಯ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಪರಿಶಿಷ್ಟ ಪಂಗಡದ ಜನರಿಗೆ ಕಾನೂನು ಬದ್ದವಾಗಿದೆ ಎಂದು ಆದೇಶಿಸಿದೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಮುಖಾಂತರ ಕ್ಯಾಬಿನೇಟ್ ಅನುಮೋಧನೆಗಾಗಿ ಕಡತವನ್ನು 2016 ರಲ್ಲಿ ಕಳುಹಿಸಿದ್ದಾರೆ. ಕೂಡಲೆ ಕರ್ನಾಟಕ ರಾಜ್ಯ ಸರ್ಕಾರ ಪರಶೀಲಿಸಿ ಪರಿಶಿಷ್ಟ ಪಂಗಡವರಿಗೆ ಮಿಲಾತಿಯನ್ನು ಶೇ.7 ಕ್ಕೆ ಹೆಚ್ಚಿವಂತೆ ಕ್ರಮ ಕೈಗೊಳ್ಳಬೇಕೆಂದರು.
ಈ ಸಂಧರ್ಭದಲ್ಲಿ ತಾಲೂಕ ಅಧ್ಯಕ್ಷ ಎಚ್.ಎಮ್.ಓಲೇಕಾರ, ಹೊನ್ನಪ್ಪ ಅಕ್ಕಿವಳ್ಳಿ, ಸುರೇಶ ಅರಳೇಶ್ವರ, ಪುಟ್ಟಪ್ಪ ನರೇಗಲ್, ರಾಮಣ್ಣ ಶೇಷಗೀರಿ, ಭಿಮಣ್ಣ ಶೇಷಗೀರಿ, ಶಿವಾನಂದ ಕನ್ನಕ್ಕನವರ, ಮಂಜಪ್ಪ ಮಲಗುಂದ, ಈರಪ್ಪ ದೊಡ್ಡಮನಿ, ರಮೇಶ ತಳವಾರ, ವಿರಪಾಕ್ಷಪ್ಪ ತಳವಾರ, ರತ್ನಮ್ಮ ಗುಡ್ಡದಮತ್ತಳ್ಳಿ, ಈರಪಾಕ್ಷ ಗೆಜಿಹಳ್ಳಿ, ಹನುಮಂತಪ್ಪ ಯಳ್ಳೂರ, ಶಾರದಾ ತಳವಾರ, ಅನುಸೂಯಾ, ಟಿ.ಕವಿತಾ, ಶಿಲ್ಪಾ ವರ್ದಿ, ಗಂಗಮ್ಮ ಓಲೇಕಾರ, ಹೊನ್ನಮ್ಮ ವರ್ದಿ, ನೇತ್ರಾ ವರ್ದಿ, ವಿಜಯಾ ಗಾಳಪೂಜಿ, ಲಲಿತಾ ವಾಲ್ಮೀಕಿ, ಸಾವಕ್ಕ ಕನವಳ್ಳಿ, ವಿ.ಮಂಜುಳಾ, ಗುಡ್ಡಪ್ಪ ಬಾರ್ಕೆರ್, ಎಫ್.ಎಚ್.ಹುಣಸಿಹಳ್ಳಿ, ಲಕ್ಷ್ಮಣ ತಳವಾರ, ಚಂದ್ರಪ್ಪ ಸುಂಕದ, ಎಮ್.ಗಾಯಿತ್ರಿ, ಎಮ್.ರಮೇಶ ಮುಂತಾದವರಿದ್ದರು.