ಬಳ್ಳಾರಿ
ಖಾಸಗಿ, ಅರೆಸರ್ಕಾರ, ಸಹಕಾರ ರಂಗದ ಒಡೆತನದ ಭವಿಷ್ಯ ನಿಧಿ ವಂತಿಗೆದಾರರು, ನಿವೃತ್ತ ನೌಕರರ ಹಕ್ಕುಗಳಿಗಾಗಿ 2010 ರಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ, ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ರು.
ಮಾರುಕಟ್ಟೆಯ ಬೆಲೆಗನುಗುಣವಾಗಿ ಪಿಂಚಣಿ ಹೆಚ್ಚಿಸಿ ಎಂದು ಭವಿಷ್ಯ ನಿಧಿ ವಂತಿಗೆದಾರರು ಮತ್ತು ಪಿಂಚಣಿದಾರರ ಸಂಘಟನೆಗಳ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸಿದ್ರು.ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ಯಾವುದೇ ವಂತಿಗೆ ಇಲ್ಲದೇ 1,000 ರೂಪಾಯಿಗಿಂತ ಮೇಲ್ಪಟ್ಟು ಹಣ ನೀಡುತ್ತಿವೆ. ಅದರಲ್ಲಿ ದೆಹಲಿ ಸರ್ಕಾರ 2,500 ರೂ, ಆಂದ್ರಪ್ರದೇಶ ಸರ್ಕಾರ 3,000 ರೂಪಾಯಿ ನೀಡುತ್ತಿದೆ.
ಕೇಂದ್ರ ಸರ್ಕಾರ ಭವಿಷ್ಯ ನಿಧಿ ವಂತಿಗೆ ಸಲ್ಲಿಸಿದ ಪಿಂಚಣಿದಾರರಿಗೆ ಕೇವಲ 75 ರೂಪಾಯಿ ಸಹಾಯಧನ ನೀಡುತ್ತಿದೆ. ಸರ್ಕಾರ ಕಾರ್ಮಿಕ ಇಲಾಖೆಯಿಂದ ಮತ್ತು ಕಾರ್ಮಿಕ ಮಂತ್ರಿಗಳಿಂದ ಉತ್ಪಾದನಾ ಕ್ಷೇತ್ರದ ನಿವೃತ್ತ ಕಾರ್ಮಿಕರ ಮೇಲೆ ಶೋಷಣೆ ಮತ್ತು ಅನ್ಯಾಯ ನಿರಂತರವಾಗಿ ನಡೆಯುತ್ತಿದೆ. ಭಾರತ 60 ಲಕ್ಷ ಪಿಂಚಣಿದಾರರನ್ನು ಪ್ರತಿನಿಧಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು.
ಖಾಸಗಿ, ಅರೆಸರ್ಕಾರ, ಸಹಕಾರ ರಂಗದ ಒಡೆತನದ ಭವಿಷ್ಯ ನಿಧಿ ವಂತಿಗೆದಾರರ, ನಿವೃತ್ತ ನೌಕರರ ಹಕ್ಕುಗಳಿಗಾಗಿ 2010 ರಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಿಂಚಣಿದಾರರ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಮಲ್ಲೇಶಪ್ಪ ಹೇಳಿದರು.ಪಿಂಚಣಿ ಹೆಚ್ಚಳ ಮಾಡುವಂತೆ ಪ್ರತಿಭಟನೆಬೇಡಿಕೆಗಳೇನು?
147ನೇ ರಾಜ್ಯಸಭಾ ವರದಿಯನ್ನು ಜಾರಿಗೆ ತರಬೇಕು. ಕನಿಷ್ಠ 7500 ಪಿಂಚಣಿ ನಿಗದಿಪಡಿಸಬೇಕು. 1971 ಮತ್ತು ಇಪಿಎಸ್ 1995 ಎರಡೂ ಯೋಜನೆಗಳಲ್ಲಿ ವಂತಿಗೆ ನೀಡಿದ ಕಾರ್ಮಿಕರಿಗೆ ಎರಡು ಯೋಜನೆಗಳ ಪ್ರತ್ಯೇಕ ಲೆಕ್ಕಚಾರ ಮಾಡಿ ಪಿಂಚಣಿ ನಿಗದಿಪಡಿಸಬೇಕು. ಇಪಿಎಸ್ 1995 ರ ಪ್ಯಾರ 32 ರ ಪ್ರಕಾರ, ಪ್ರತಿ ವರ್ಷ ಮಾರುಕಟ್ಟೆ ಬೆಲೆಗನುಗುಣವಾಗಿ ಪಿಂಚಣಿ ನಿಗದಿ ಪಡಿಸಬೇಕು, ಇದನ್ನು 2000 ವರೆಗೆ ಕೊಡಲಾಗಿದ್ದು 2001 ರಿಂದ ನೀಡಿಲ್ಲ. ಬಾಕಿಯನ್ನು ಪಾವತಿಸಬೇಕು. ವೈದ್ಯಕೀಯ ಸೌಲಭ್ಯ ನೀಡಬೇಕು