ಸಂಪತ್ ಕುಮಾರ್ ಅವರನ್ನು ಅಮಾನತ್ತು ಮಾಡುವಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಬಳ್ಳಾರಿ
   
       ಕಳೆದ ಕೆಲವು ವರ್ಷಗಳಿಂದ ನರ್ಸಿಂಗ್ ಸೂಪರಿಟೆಂಡೆಂಟ್ ಸಂಪತ್ ಕುಮಾರ್ ಅವರು ಹಲವಾರು ಸ್ಟಾಫ್ ನರ್ಸ್ ಗಳ ಮೇಲೆ ದೌರ್ಜನ್ಯ ಮಾಡುತ್ತ, ತಾವು ಹೇಳಿದಂತೆ ಕೇಳುವ ನರ್ಸ್ ಗಳಿಗೆ ಹಾಜರಾತಿ ಹಾಗೂ ಸಂಬಂದ ಪಟ್ಟ ವಾರ್ಡುಗಳಲ್ಲಿ ಶಿಫ್ಟ್ , ರಜೆ ಗಳಲ್ಲಿ ವಿನಾಯಿತಿ ಸಿಗುತ್ತದೆ ಎಂದು ಕರ್ನಾಟಕ ರಕ್ಷಣಾ ಸೇನೆ ಹಾಗೂ ಅಖಿಲ ಕರ್ನಾಟಕ ಕಾರ್ಮಿಕರ ಹಕ್ಕುಗಳ ರಕ್ಷಣಾ ಜಂಟಿ ಸಮಿತಿಯ ಜಿಲ್ಲಾ ಅದ್ಯಕ್ಷ ಪ್ರಸಾದ್ ಅಮಾನತ್ತು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು,
       
      ವಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನೂರಾರು ಕಾರ್ಯಕರ್ತರು ಸೇರಿದಂತೆ ಕೆಲಕಾಲ ಧರಣಿ ನಡೆಸಿದ ಅವರು ಸಂಪತ್ ಕುಮಾರ್ ಅವರನ್ನು ಈ ಕೂಡಲೇ ಬಂದಿಸುಂತೆ ಘೋಷಣೆ ಕೂಗುತ್ತಾ ಪ್ರತಿಭಟನಾ ಧರಣಿ ನಡೆಸಿದರು,
      ನಂತರ ಅಖಿಲ ಕರ್ನಾಟಕ ಕಾರ್ಮಿಕರ ಹಕ್ಕುಗಳ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಎಂ,ಮಲ್ಲೇಶ್ ಅವರು ಮಾತಾನಾಡಿ ಇವರು ಹೇಳಿದ ಮಾತು ಕೇಳದೆ ಹೋದಲ್ಲಿ ಹಾಜರಾತಿ ವಿನಾಯಿತಿ ಇರುವುದಿಲ್ಲ ಹಾಗೂ ರಜೆಯು ಕೂಡ ನೀಡುವುದಿಲ್ಲ ಹಾಗೂ ಅದೇ ವಾರ್ಡ್ ಗಳಲ್ಲಿ ಹೆಚ್ಚಿನ ಕೆಲಸ ಮಾಡುವಂತೆ ಆದೇಶ ನೀಡುತ್ತಾರೆ.
       ಅವರು ಹೇಳಿದ ಕೆಲಸಕ್ಕೆ ಸಹಕರಿಸದೆ ಹೋದಲ್ಲಿ ಒಂದು ವಾರಗಳ ಕಾಲ ಹಾಜರಾತಿ ಹಾಕದೆ ಇರುವುದು,ರತ್ನಮ್ಮಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿಸಿದರು  
        ಹೀಗೆ ಸ್ಟಾಫ್  ನರ್ಸ್ ಶ್ರೀಮತಿ ರತ್ನಮ್ಮ ಅವರು ಸೂಪರಿಂಟೆಂಡ್ ಬಳಿ ತೆರಳಿ ಇದರ ಕುರಿತು ವಿಚಾರಿಸಿದಾಗ, ಅವರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದು ಸಹಕರಿಸಿದರೆ  ನಿಮ್ಮ ಹಾಜರಾತಿ ಹಾಕುತ್ತೇನೆ ಎಂದು ಸಂಪತ್ ಕುಮಾರ್ ಅವರು ತಿಳಿಸಿದಾಗ, ನರ್ಸ್ ರತ್ನಮ್ಮ ಅವರು ಕೋಪಗೊಂಡು ಆತ್ಮಹತ್ಯಗೆ ಪ್ರತ್ನಿಸಿದ್ದು .
        ಹಲವಾರು ನರ್ಸ್  ಗಳಿಗೆ ಇದೇ ರೀತಿ ಲೈಂಗಿಕ ಕಿರುಕುಳ ನೀಡುತ್ತಿದ್ದು ಆದರೆ ಯಾವುದೇ ಪ್ರಕರಣಗಳು ಬೆಳಕಿಗೆ ಬಾರದೆ ಅಧಿಕಾರಿಗಳು ತಮ್ಮ ಪ್ರಭಾವವನ್ನು ಬಳಿಸಿ ಕೆಲವು ಕೇಸುಗಳನ್ನು ಮುಚ್ಚಿಹಾಕಿದ್ದಾರೆ, ಇಂತಹ ಪ್ರಕರಣಗಳು ಮರುಕಳಿಸದಂತೆ,ನರ್ಸಿಂಗ್ ಸೂಪರಿಂಟೆಂಡ್ ಸಂಪತ್ ಕುಮಾರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ, ಸೂಕ್ತ ತನಿಖೆಗೆ ಆದೇಶಿಸಿ ಲೈಂಗಿಕ ಕಿರುಕುಳದಿಂದ ನೊಂದಿರುವ ಎಲ್ಲಾ ಮಹಿಳೆಯರಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ವಿಮ್ಸ್ ನಿರ್ದೇಶಕ ಕೃಷ್ಣ ಸ್ವಾಮಿ ಅವರಿಗೆ ಮನವಿಯನ್ನು ನೀಡಿದರು, ನಂತರ ಅಲ್ಲಿಂದ ಡಿಸಿ ಕಛೇರಿಯ ವರೆಗೆ ತೆರಳಿದ ಅವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ ನಂತರ ಈ ರೀತಿ ಮಾಡಿದವರಿಗೆ ಕಾನೂನಿನ ಪ್ರಕಾರ ಸೂಕ್ತ ಕ್ರಮಗಳನ್ನು ಜರುಗಿಸಿ ಬಂದಿಸಲು ಆದೇಶ ನೀಡಲು ಮನವಿ ಮಾಡಿದರು ಈ ಸಂದರ್ಭದಲ್ಲಿ ಅಂಭ್ರೇಶ್,ಕಿರ್ತಿ ಪ್ರವೀಣ್ ಕುಮಾರ್, ಚಿರಂಜೀವಿ, ಹೊನ್ನೂರಸ್ವಾಮಿ,ಮಲ್ಲಿಕಾರ್ಜುನ, ಸುರೇಶ್, ಚಾಂದ್ ಬಾಷ್ ಶಿವ ನಾಯಕ್ ಮತ್ತಿತರರು ಹಾಜರಿದ್ದರು
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link