ಬೆಂಗಳೂರು
ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಪುನರ್ವಸತಿ ಮಸೂದೆಯನ್ನು ಮೊದಲು ರಾಜ್ಯ ಸಭೆಯ ವಿಶೇಷ ಸಮಿತಿಗೆ ವಹಿಸಬೇಕೆಂದು ಆಗ್ರಹಿಸಿ ನೂರಾರು ಲೈಂಗಿಕ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಪುನರ್ವಸತಿ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಂಡಿಸುವ ಮೊದಲು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಲಹೆ ಪಡೆದುಕೊಳ್ಳಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಪುರಭವನದ ಮುಂಭಾಗ ಸೇರಿದ ಲೈಂಗಿಕ ಕಾರ್ಯಕರ್ತರು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟದ ಕಾರ್ಯಕರ್ತರು ಮಸೂದೆಯನ್ನು ಲೋಕಸಭೆಯಲ್ಲಿ ಸಮುದಾಯದ ಸಲಹೆ ಪಡೆದುಕೊಳ್ಳದೆ ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಪುನರ್ವಸತಿ ಮಸೂದೆ ಅಂಗೀಕರಿಸಲಾಗಿದೆ ಎಂದು ದೂರಿದರು.
ಸಮುದಾಯ ಬೇಡಿಕೆಗಳನ್ನು ಪರಿಹರಿಸುವುದಲ್ಲದೆ ದೌರ್ಜನ್ಯಕರ ಶಾಸಕಾಂಗ ಪ್ರಕ್ರಿಯೆಯಾಗಿದೆ. ಈ ಮಸೂದೆಯ ಲಿಂಗ ಪರಿವರ್ತಿತ ವ್ಯಕ್ತಿಗಳ ಹಕ್ಕುಗಳಾದ ಮೀಸಲಾತಿ, ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳಿಗೆ ಸಂಬಂಧಿಸಿದ ತಾರ್ಕಿಕತೆಗಳ ಹಿನ್ನೆಲೆ ಅಲ್ಪಸಂಖ್ಯಾತ ಹಕ್ಕಿಗೆ ವಿರುದ್ಧವಾಗಿದೆ ಎಂದು ಒಕ್ಕೂಟದ ಮುಖಂಡರಾದ ಸುನೀತಾ ಆರೋಪಿಸಿದರು.
ಮಸೂದೆ ಸರ್ಕಾರ ಮತ್ತು ಅದರ ಕಾರ್ಯನಿರ್ವಾಹಕ ಅಂಗಗಳು, ಪೊಲೀಸ್ ಹಿಂಸೆ ಮುಂತಾದ ವಿಷಯಗಳ ಹೊಣೆಗಾರಿಕೆ ಕ್ರಮಗಳ ಕುರಿತು ಯಾವುದೇ ಪರಿಹಾರವನ್ನು ಸೂಚಿಸಿಲ್ಲ. ಮಸೂದೆಯು ಲಿಂಗ ಪರಿವರ್ತರ ಸಾಂಪ್ರದಾಯಕ ಆದಾಯ ಮೂಲವಾದ ಭಿಕ್ಷಾಟನೆಯನ್ನು ಅಪರಾಧವೆಂದು ಬಿಂಬಿಸಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಯನ್ನು ನಿರಾಕರಿಸುತ್ತದೆ. ವಿವಾಹ, ದತ್ತು ಸ್ವೀಕಾರ, ಆಸ್ತಿಯ ಹಕ್ಕುಗಳನ್ನು ಗುರುತಿಸುವುದಿಲ್ಲ. ಮಸೂದೆ ಲಿಂಗಪರಿವರ್ತಕರ ರಕ್ಷಣೆಗೆ ಅವಶ್ಯಕವಾದ ಅಂಶಗಳನ್ನು ಒಳಗೊಂಡಿಲ್ಲ ಎಂದು ಆರೋಪಿಸಿದರು.
ಕಾರಣ ಈ ಎರಡೂ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಬಾರದು. ಅದಕ್ಕೆ ಪರ್ಯಾಯವಾಗಿ ರಾಜ್ಯ ಸಭೆಯ ವಿಶೇಷ ಸಮಿತಿಗೆ ಮಸೂದೆಯನ್ನು ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
