ಭದ್ರಾ ಮೇಲ್ದಂಡೆ : ಆಹ್ವಾನ ಇಲ್ಲದ್ದಕ್ಕೆ ಆಕ್ರೋಶ

ಪಾವಗಡ

    ಪಾವಗಡ ತಾಲ್ಲೂಕಿನ ಜನತೆಗೆ ಶುದ್ದ ಕುಡಿಯುವ ನೀರಿಗಾಗಿ 2350 ಕೋಟಿ ರೂ.ಗಳನ್ನು ಸಿದ್ದರಾಮಯ್ಯರ ಸರ್ಕಾರ ಬಿಡುಗಡೆ ಮಾಡಲು ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಕಾರಣವಾಗಿವೆ. ಶಾಸಕರು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಭೂಮಿ ಪೂಜಾ ಕಾರ್ಯಗಳನ್ನು ನಡೆಸಬೇಕೆಂದು ಪೂಜಾರಪ್ಪ ಒತ್ತಾಯಿಸಿದ್ದಾರೆ.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಸುಮಾರು 32 ದಿನಗಳ ಕಾಲ ನಡೆದ ಬೃಹತ್ ಪ್ರತಿಭಟನೆಯಲ್ಲಿ ತಾಲ್ಲೂಕಿನ ನೂರಾರು ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ಆದರೆ ಕ್ಷೇತ್ರದ ಶಾಸಕರಾದ ವೆಂಕಟರವಣಪ್ಪ ಕಳೆದ ವಾರ ತುಂಗಭದ್ರಾ ಕುಡಿಯುವ ನೀರಿನ ಭೂಮಿ ಪೂಜೆಗೆ ಬೆರಣಿಕೆಯ ನಾಯಕರನ್ನು ಮಾತ್ರ ಕರೆದು, ಉಳಿದವರನ್ನು ಅವಮಾನ ಪಡಿಸಿದ್ದಾರೆ. ಮುಂದೆ ಈ ರೀತಿ ಆಗದಂತೆ ಎಲ್ಲರನ್ನು ಜೊತೆಗೆ ಕರೆದೊಯ್ಯುವ ಕೆಲಸವನ್ನು ಮಾಡಿ ತಾಲ್ಲೂಕಿನ ಅಭಿವೃದ್ಧಿಗೆ ಮಾಜಿ ಸಚಿವರು ಶ್ರಮಿಸಬೇಕೆಂದರು.

      ಬಿಎಸ್ಪಿ ಮಂಜುನಾಥ್ ಮಾತನಾಡಿ, ತಾಲ್ಲೂಕಿಗೆ ನೀರು ತರುವ ಹೋರಾಟದಲ್ಲಿ ನೂರಾರು ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ಈ ಹೋರಾಟ ಒಬ್ಬರಿಗೆ ಮಾತ್ರ ಸೀಮಿತವಾಗಿರಲಿಲ್ಲ. ತಾಲ್ಲೂಕಿನ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಹೋರಾಟವಾದ ಹಿನ್ನೆಲೆಯಲ್ಲಿ, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಯಾರೂ ಮರೆಯುವಂತಿಲ್ಲ. ಆದ ಕಾರಣ ಸ್ಥಳೀಯ ಜನಪ್ರತಿನಿಧಿಗಳನ್ನೂ ಒಗ್ಗೂಡಿಸಿಕೊಂಡು ಹೋಗಬೇಕೆಂದರು.

     ಈ ಸಂದರ್ಭದಲ್ಲಿ ಮಾದಿಗ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಶ್ರೀರಾಮಸೇನೆ ಅಧ್ಯಕ್ಷ ಕಾವಲಗೆರೆ ರಾಮಾಂಜಿ, ಭದ್ರಾ ಮೇಲ್ದಂಡೆ ಹೋರಾಟ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್, ಎಪಿಎಂಸಿ ಹಮಾಲಿ ಸಂಘದ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link