ಹುಳಿಯಾರು
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಅಡಾಣಿಕಲ್ಲು ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಎಬಿವಿಪಿಯ ನವೀನ್ ಅವರು ಆಗ್ರಹಿಸಿದ್ದಾರೆ.
ಸರಿ ಸುಮಾರು 30 ಮನೆಗಳಿರುವ ಈ ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಕೊಳವೆ ಬಾವಿಯಲ್ಲಿ ಅಂತರ್ಜಲ ಬತ್ತಿದ್ದರಿಂದ ಹೊಸ ಕೊಳವೆ ಬಾವಿ ಕೊರೆಸಿ ಅಲ್ಲಿಗೆ ಹಳೆಯ ಕೊಳವೆ ಬಾವಿಯ ಮೋಟರ್ ಬಿಡಲಾಗಿತ್ತು. ಆದರೆ ಈ ಮೋಟರ್ ಸರಿಯಾಗಿ ನೀರು ಎತ್ತದಿರುವುದರಿಂದ ಕಳೆದ ತಿಂಗಳು ಮೋಟರ್ ರಿಪೇರಿಗೆ ಕೊಡಲಾಗಿತ್ತು.
ಒಂದು ತಿಂಗಳಾದರೂ ಮೋಟರ್ ಬಿಡದಿದ್ದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪರಿಣಾಮ ಇತ್ತೀಚೆಗೆ ಮತ್ತೆ ಮೋಟರ್ ಬಿಟ್ಟರು. ಆದರೆ ಈ ಮೋಟರ್ ಸಹ ಸಿಸ್ಟನ್ ವರೆವಿಗೆ ನೀರು ಎತ್ತುವಲ್ಲಿ ವಿಫಲವಾಗಿದ್ದು ಕೊಳವೆ ಬಾವಿಯ ಬಳಿಯಲ್ಲೇ ನಲ್ಲಿ ನೀರು ಬರುವಂತೆ ಮೋಟರ್ ನೀರು ಸರಬರಾಜು ಮಾಡುತ್ತಿದೆ.
ಇದರಿಂದ ಗ್ರಾಮಕ್ಕೆ ಸಮರ್ಪಕವಾಗಿ ನೀರು ಸಿಗದೆ ನೀರಿನ ಹಾಹಾಕಾರ ಎದುರಾಗಿದೆ. ಪರಿಣಾಮ ಅಕ್ಕಪಕ್ಕದ ತೋಟ, ಗದ್ದೆಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಬಂದೊದಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಹೊಸ ಕೊಳವೆ ಬಾವಿಗೆ ಹೆಚ್ಚು ಸಾಮಥ್ರ್ಯದ ಮೋಟರ್ ಬಿಟ್ಟು ಸಮರ್ಪಕವಾಗಿ ನೀರು ಪೂರೈಕೆಯಾಗುವಂತೆ ಮಾಡುವಂತೆ ಒತ್ತಾಯಿಸಿದ್ದಾರೆ.ಎಬಿವಿಪಿ ನವೀನ್, ಅಡಾಣಿಕಲ್ಲು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ