ಚಿತ್ರದುರ್ಗ
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶ ಮರು ಪರಿಶೀಲಿಸುವಂತೆ ಕೋಟೆನಾಡು ಚಿತ್ರದುರ್ಗದಲ್ಲಿ ಆಗ್ರಹ ಕೇಳಿ ಬಂದಿದೆ.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ, ಚಿತ್ರದುರ್ಗ ಜಿಲ್ಲಾ ಶಾಖೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅಯ್ಯಪ್ಪ ಮಾಲಾಧಾರಿಗಳು ಮತ್ತು ಪೂರ್ಣಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ನ್ಯಾಯಾಧಿಶರು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪರಂಪರೆಗೆ ಧಕ್ಕೆ ಬರುವ ಹಾಗೆ ತೀರ್ಪು ಕೊಟ್ಟಿದ್ದಾರೆ. ಶಬರಿಮಲೆಯಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಪದ್ದತಿಗೆ ನ್ಯಾಯಾಲಯವು ನೀಡಿರುವ ಈ ತೀರ್ಪಿಗೆ ಸಹಸ್ರಾರು ಅಯ್ಯಪ್ಪ ಸ್ವಾಮಿ ಭಕ್ತರ ಮನಸ್ಸಿಗೆ ನೋವುಂಟಾಗಿದೆ. ಪಂದಳ ರಾಜ ವಂಶಸ್ಥರ ಬಳಿ ಯಾವುದೇ ಒಂದು ತೀರ್ಮಾನಕ್ಕೆ ಬಾರದೆ ಸರ್ವೋಚ್ಛ ನ್ಯಾಯಾಲವು ಯಾರೊ ಒಬ್ಬ ಎನ್.ಜಿಒ ಹಾಕಿರುವ ದೂರನ್ನು ಒಬ್ಬ ಮಹಿಳಾ ನ್ಯಾಯಾಧೀಶೆ ಹಾಗು ಮೂವರು ಪುರುಷ ನ್ಯಾಯಾಧೀಶರುಗಳು ಚರ್ಚಿಸಿ ಅದರಲ್ಲಿ ಮಹಿಳಾ ನ್ಯಾಯಾಧೀಶೆಯು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಹಿಂದೂ ಸಂಸ್ಕøತಿಗೆ ವಿರುದ್ದವಾಗಿ ನಾವು ಬದ್ದಳಲ್ಲ ಎಂದು ತಿಳಿಸಿದ್ದಾಗಿಯೂ ಮಿಕ್ಕುಳಿದ ನ್ಯಾಯಾಧಿಶರು ದೇವಸ್ಥಾನದ ಪರಂಪರೆಗೆ ಧಕ್ಕೆ ಬರುವ ಹಾಗೆ ತೀರ್ಪು ಕೊಟ್ಟಿರುವುದನ್ನು ಖಂಡಿಸಲಾಯಿತು.
ಶ್ರೀ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜ ಕರ್ನಾಟಕ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಚಿತ್ರದುರ್ಗ ಹಾಗೂ ಎಲ್ಲಾ ಸಂಘಗಳು ಹಾಗು ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ, ಶರಣು ಘೋಷದ ರ್ಯಾಲಿ ನಡೆಸಲಾಯಿತು. ಆನೆ ಬಾಗಿಲ ಬಳಿಯ ಗಣಪತಿ ದೇವಸ್ಥಾನದಿಂದ ಪ್ರಾರಂಭ ಗೊಂಡು ಗಾಂಧಿ ವೃತ್ತ, ಬಿ, ಡಿ ರಸ್ತೆ, ಎಸ್. ಬಿ. ಎಂ ಸರ್ಕಲ್, ತಾಲ್ಲೂಕ್ ಆಫೀಸ್ ರಸ್ತೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
