ವಾಹನ ಸಂಚಾರಕ್ಕೆ ಅಡ್ಡಿಯಾದ ರಸ್ತೆಯ ಗುಂಡಿ

ತಿಪಟೂರು

       ಸೋಮವಾರ ನಗರದಲ್ಲಿ ಆಯೋಜಿಸಿದ್ದ ರಂಗಾಪುರ ಶ್ರೀಗಳ ಗುರುವಂದನೆಯ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಿಂದಾಗಿ ಬಿ.ಹೆಚ್.ರಸ್ತೆಯಲ್ಲಿ ವಾಹನವನ್ನು ನಿರ್ಬಂಧಿಸಿ ಕರೆ ಏರಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಬಸ್‍ನಿಲ್ದಾಣದ ಹತ್ತಿರ ವಿರುವ ಗುಂಡಿಯಲ್ಲಿ ಸರಕು ತುಂಬಿದ್ದ ಲಾರಿಯೊಂದು ಗುಂಡಿಯಲ್ಲಿ ಊತುಹೋದ ಪರಿಣಾಮವಾಗಿ ವಾಹನಸಂಚಾರಕ್ಕೆ ಅಡ್ಡಿಯಾಗಿ ಕೆಲಸಮಯ ವಾಹನ ಸಂಚಾರವು ಅಸ್ಥವ್ಯಸ್ಥವಾಗಿತ್ತು.

       ಈ ರಸ್ತೆಯಲ್ಲಿ ಗುಂಡಿಬಿದ್ದು ಹಲವು ದಿನಗಳೇ ಕಳೆದರು ಇದನ್ನು ಮುಚ್ಚಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ಗುಂಡಿಯಿಂದ ಈಗಾಗಲೇ ಅನೇಕ ಅನಾಹುತಗಳು ಸಂಭವಿಸಿವೆ. ಇನ್ನು ಮುಂದಿನವಾರವಿರುವ ಗಣಪತಿ ಜಾತ್ರೆಗೂ ಮೊದಲೇ ಈ ಗುಂಡಿನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಹಳೇಪಾಳ್ಯವಾಸಿ ಮೋಹನ್ (ಬಿಲ್ಲಾ) ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link