ಪಲ್ಸ್ ಪೋಲಿಯೋ ಕಾರ್ಯಕ್ರಮ

ಬ್ಯಾಡಗಿ:

          ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೀಳರಿಮೆ ಬೇಡ ಇಲ್ಲಿ ಉಚಿತವಾಗಿ ಸಿಗುವಂತಹ ವೈದ್ಯಕೀಯ ಸೇವೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿದೆ, ದುಬಾರಿ ಹಣ ನೀಡಿದರಷ್ಟೇ ಉತ್ತಮ ಚಿಕಿತ್ಸೆ ಸಿಗಲಿದೆ ಎಂಬ ಮನಸ್ಥಿತಿಯಿಂದ ಹೊರಬರುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದರು.ಭಾನುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಹನಿ ಹಾಕುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

          ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿದ್ದಾರೆಂಬುದನ್ನು ಅರ್ಥೈಸಿಕೊಳ್ಳಬೇಕು ರಕ್ತ ತಪಾಸಣೆ, ಎಕ್ಸ್-ರೇ ಸೇರಿದಂತೆ ಇನ್ನಿತರ ಉಚಿತ ಚಿಕಿತ್ಸೆಯೊಂದಿಗೆ ಔಷಧಿಗಳನ್ನು ವಿತರಿಸಲಾ ಗುವುದು ಜನರು ನಿರ್ಭಯದಿಂದ ವಿಶ್ವಾಸವನ್ನಿಟ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

         ಪೋಲಿಯೋ ಮುಕ್ತದೇಶವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುವ ಪಲ್ಸ್‍ಪೊಲೀಯೋ ಕಾರ್ಯಕ್ರಮದಿಂದ ನಿರೀಕ್ಷಿತ ಫಲಿತಾಂಶ ಬರುತ್ತಿದೆ, ಸರ್ಕಾರದ ಕಾರ್ಯಕ್ರಮವೊಂದು ಅಭೂತಪೂರ್ವ ಯಶಸ್ಸು ಕಾಣುತ್ತಿರುವುದು ಸಂತಸದ ಸಂಗತಿ, ಅವೈಜ್ಞಾನಿಕ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶಗಳ ಕೊರತೆಯಿಂದ ಜೀವಕೋ ಶಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದ್ದು, ವಿಷಯುಕ್ತ ಆಹಾರ, ಕಲುಷಿತ ನೀರು ಮತ್ತು ಮಾನಸಿಕ ಒತ್ತಡಗಳು ಮನುಷ್ಯನಲ್ಲಿ ರೋಗಗಳು ಉಲ್ಬಣವಾಗಲು ಕಾರಣವಾಗಿದೆ, ಆರೋಗ್ಯ ಸೇವೆಯ ಮೊರೆ ಹೋಗುವ ಮುನ್ನರೋಗ ಬಾರದಂತೆ ತಡೆದುಕೊ ಳ್ಳುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

        ತಾಲ್ಲೂಕಾ ವೈದ್ಯಾಧಿಕಾರಿ ಡಾ.ಬಿ.ಆರ್.ಲಮಾಣಿ ಮಾತನಾಡಿ, ಪಟ್ಟಣದಲ್ಲಿ 2456, ಗ್ರಾಮೀಣ ಪ್ರದೇಶಗಳಲ್ಲಿ 9924 ಸೇರಿದಂತೆ ಒಟ್ಟು 12380 ಐದು ವರ್ಷದೊಳಗಿನ ಮಕ್ಕಳಿದ್ದಾರೆ, ಬಸ್ ಹಾಗೂ ರೈಲ್ವೆ ನಿಲ್ದಾಣಗಳು ಸೇರಿದಂತೆ ಒಟ್ಟು 80 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, 160 ಲಸಿಕಾ ಸಿಬ್ಬಂದಿ, 16 ಮೇಲ್ವಿ ಚಾರಕರು ಹಾಗೂ ಲಸಿಕೆ ಯನ್ನು ಕೇಂದ್ರಗಳಿಗೆ ತಲುಪಿಸಲು 8 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದ್ದು ಯಾವೊಬ್ಬ ಮಗುವು ಲಸಿಕೆಯಿಂದ ದೂರ ಉಳಿಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

         ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್, ಆಡಳಿತಾಧಿಕಾರಿ ಡಾ.ಪುಟ್ಟರಾಜು ವೈದ್ಯರುಗಳಾದ ಡಾ.ಶ್ರೀನಿವಾಸ, ಚಂದ್ರಕಾಂತ್, ವಿರೇಶ ಹೊಸ್ಮನಿ, ಸುರೇಶ ಉದ್ಯೋಗಣ್ಣನವರ, ಸದಾನಂದ ಚಿಕ್ಕಮಠ ಹಿರಿಯ ಆರೋಗ್ಯ ಸಹಾಯಕ ವೈ.ಎಂ.ಹಿರಿಯಕ್ಕನವರ, ಬಿ.ಬಿ.ಕಮ್ಮಾರ ರೋಟರಿ ಕ್ಲಬ್ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link