ಕೊರಟಗೆರೆ
ಉಪ ಮುಖ್ಯಮಂತ್ರಿಗಳಾದ ಡಾ|| ಜಿ.ಪರಮೇಶ್ವರ್ ಮುಖೇನ ಕಳೆದ ಒಂದು ತಿಂಗಳಿನ ಹಿಂದೆ ನೂರಾರು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಪಂಪು, ಮೋಟಾರ್ ವಿತರಣೆ ಮಾಡಲಾಗಿದ್ದು, ಈಗ ಉಳಿದ ಫಲಾನುಭವಿಗಳಿಗೆ ಡಿಸಿಎಂ ಅವರ ಆಶಯದಂತೆ ನೇರವಾಗಿ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೂಕ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ತಿಳಿಸಿದರು.
ಅವರು ಪಟ್ಟಣದ ಜಂಪೇನಹಳ್ಳಿ ಕ್ರಾಸಿನ ಖಾಸಗಿ ಜಮೀನಿನಲ್ಲಿ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ವಾಲ್ಮೀಕಿ ಸಮುದಾಯದ 18 ಜನ ರೈತರಿಗೆ ಶುಕ್ರವಾರ ಮೋಟಾರ್ ಪಂಪು ವಿತರಣೆ ಮಾಡಿದ ನಂತರ ಮಾತನಾಡಿ, ದೇವರಾಜು ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಹೋಬಳಿ ವ್ಯಾಪ್ತಿಯ ರೈತರಿಗೆ ಕ್ಯಾಮೇನಹಳ್ಳಿ ದೇವಾಲಯದ ಆವರಣದಲ್ಲಿ ಗುರುವಾರ ನೀಡಲಾಗಿದೆ.
ಇಂದು ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ 18ಜನ ರೈತರಿಗೆ ಪಂಪ್ ಮೋಟಾರ್ ವಿತರಣೆ ಮಾಡಲಾಗಿದೆ ಎಂದರು.
2016-17 ಮತ್ತು 2017-18ನೇ ಸಾಲಿನಲ್ಲಿ ಒಟ್ಟು 60 ಜನ ವಾಲ್ಮೀಕಿ ಸಮುದಾಯದ ರೈತರ ಜಮೀನಿನಲ್ಲಿ ಬೋರ್‍ವೇಲ್ ಕೊರೆಸಲಾಗಿದೆ. 60 ಜನರಲ್ಲಿ ಈಗಾಗಲೇ 28 ಜನ ರೈತರಿಗೆ ಮೋಟಾರ್‍ಪಂಪು ವಿತರಣೆ ಮಾಡಲಾಗಿದೆ. ಮುಂದಿನ ವಾರದಲ್ಲಿ ಇನ್ನುಳಿದ 32ಜನ ರೈತರಿಗೆ ಮೋಟಾರ್‍ಪಂಪು ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
