ತಿಪಟೂರು :
ಮಳೆ ಇಲ್ಲದೆ ಕಂಗೆಟ್ಟು ಬೇಸಿಗೆಯ ವಾತಾವರಣವನ್ನು ಸೃಷ್ಠಿಸಿದ್ದ ಇಳೆಗೆ ಇಂದು ಮದ್ಯಾಹ್ನ 3ರ ವೇಳೆಯಲ್ಲಿ ಸುರಿದ ಪುನರ್ವಸು ಮಳೆಯು ಸ್ವಲ್ಪ ತಂಪಿನ ವಾತಾವರಣವನ್ನು ಸೃಷಿಸಿತು.ಭಾನುವಾರ ಎಲ್ಲರಿಗೂ ರಜಾದಿನ ಆದರೆ ಮಳೆ ರಜೆಯನ್ನು ಲೆಕ್ಕಿಸದೆ ಜುಲೈ ತಿಂಗಳ ಮೊದಲ ಮಳೆಯಾಗಿ ಬಂದು ಸ್ವಲ್ಪ ತಂಪನ್ನೆರೆಯಿತು. ಇದರಿಂದ ರೈತರ ಮೊದಲ್ಲಿ ಮಂದಹಾಸ ಮೂಡುವುದು ಕಷ್ಟವೇ ಆದರೂ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಂತೆ ಮಳೆ ಬಂದಿದ್ದರಿಂದ ಜಾನುವಾರುಗಳಿಗೆ ಸ್ವಲ್ಪ ಮೇವು ಬರಬಹುದೇನು ಎಂಬ ಆಶಾಭಾವನೆಯಜೊತೆಗೆ ಇನ್ನುದೆರಡು ದಿನ ಮಳೆ ಬಂದರೆ ಚಿಕ್ಕಪುಟ್ಟ ಕೆರೆಕಟ್ಟೆಗಳಾದರು ತುಂಬಿ ದನಕರುಗಳುಗೆ ನೀರುಸಿಗುವಂತಾಗಲಿ ಎಂದು ಬೇಡಿಕೊಳ್ಳಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








