ತಂಟೆ-ತಕರಾರಿಗೆ ಆಸ್ಪದ ಕೊಡದೆ ಮಂಡನೆಯಾದ ಪುರಸಭಾ ಉಳಿತಾಯ ಬಜೆಟ್

ಕುಣಿಗಲ್

      ಈ ಬಾರಿಯ ಪುರಸಭೆಯಲ್ಲಿ ನಡೆದ ಐದನೇ ವರ್ಷದ ಕೊನೆಯ ಬಜೆಟ್ ಬಾರಿ ವಿಶೇಷ ಹಾಗೂ ಕುತುಹಲಕ್ಕೆ ಎಡೆಮಾಡುವ ಮೂಲಕ ತಂಟೆ-ತಕರಾರು ಇಲ್ಲದೆ ಬಜೆಟ್ ಮಂಡನೆಯಾಗಿದ್ದು ಕೆಲವು ಸದಸ್ಯರಿಗೆ ಸಂತೋಷ ಹಾಗೂ ಆಶ್ಚರ್ಯ ಮೂಡಿಸುವುದರೊಂದಿಗೆ 43,65,669 ಸಾವಿರ ರೂಪಾಯಿ ಉಳಿತಾಯ ಬಜೆಟ್ ತೋರಿಸಿದರು.

       ಪುರಸಭಾ ಅಧ್ಯಕ್ಷೆ ನಳಿನಾಭೈರಪ್ಪ ಅಧ್ಯಕ್ಷತೆಯಲ್ಲಿ 2019-20 ನೇ ಸಾಲಿನ ಆಯವ್ಯಯ ಬಜೆಟ್ ಮಂಡಿಸಿದರು.
ಆದರೆ ಪ್ರತಿಸಲ ಬಾರಿ ಕೆಸರೆರಚಾಟ ಮಾಡಿಕೊಳ್ಳುತ್ತ ಬಜೆಟ್ ಸಭೆಯನ್ನೇ ಮುಂದುಡುತ್ತ ತಂಟೆ ತಕರಾರು ತೆಗೆದು ಅರ್ಧಕ್ಕೆ ಎದ್ದು ಸಭೆಯಿಂದ ನಡೆಯುತ್ತಿದ್ದ ಪ್ರಸಂಗಗಳೇ ಹೆಚ್ಚು ಆದರೆ ಈ ಬಾರಿ ಕುತುಹಲ ಹಾಗೂ ಅಚ್ಚರಿ ಎಂಬಂತೆ ಯಾವುದೇ ತಕರಾರು ವೈಮನಸ್ಯೆ ಬಜೆಟ್ ಸಭೆಯಲ್ಲಿ ಕಾಣದೆ ಹೋಗಿದ್ದು ಆಶ್ಚರ್ಯ ಮೂಡಿಸಿತ್ತು.

        ಈ ಬಾರಿ ಬೆಜೆಟ್ ಪಟ್ಟಿಯಲ್ಲಿ ಕೈಬಿಟ್ಟಿರುವ ಸದಸ್ಯರಿದ್ದರೆ ಸೇರಿಸಲು ಮತ್ತು ಯಾವುದೇ ಬೇದಬಾವ ಇಲ್ಲದಂತೆ ಅಭಿವೃದ್ದಿಯ ದೃಷ್ಟಿಯಿಂದ ಸಮರ್ಪಕವಾಗಿ ಅನುದಾನವನ್ನ ಹಂಚಿಕೆ ಮಾಡಲಾಗಿದೆ ಎಂಬುವ ನಿಟ್ಟಿನಲ್ಲಿ ಎಲ್ಲ ಸದಸ್ಯರು ಒಮ್ಮತಕ್ಕೆ ಬಂದಿದ್ದರಿಂದ ಹೆಚ್ಚಿನ ಸಮಸ್ಯೆಗಳು ಉಲ್ಬಣಗೊಳ್ಳದೇ ಮಧ್ಯಾಹ್ನದ ವೇಳೆಗೆ ಸಂಪೂರ್ಣ ಬಜೆಟ್ ಸಭೆಯನ್ನು ಮುಗಿಸಿ ಭರ್ಜರಿಭೋಜನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

        ಕಳೆದ ಸಾಲಿನ 9,62,10,669/- ರೂಪಾಯಿ ಆರಂಭ ಶುಲ್ಕದೊಂದಿಗೆ ಪುರಸಭೆಗೆ 21,62,30,000/- ರೂಪಾಯಿ ಜಮಾದೊಂದಿಗೆ ಒಟ್ಟು 31,24,40,669/- ರೂಪಾಯಿ ಜಮಾ ನಿರೀಕ್ಷಿಸಿ 2019-20ನೇ ಸಾಲಿನ ಖರ್ಚನ್ನ 30,80,75,000/- ಕೋಟಿ ಖರ್ಚು ಮಾಡಿ ಉಳಿದ 43,65,669/- ಉಳಿತಾಯ ಬಜೆಟ್ ನಿರೀಕ್ಷಿಸಿದರು.

        ಈ ಸಾಲಿನ ಆಯವ್ಯಯದಲ್ಲಿ ವಿಶೇಷವಾಗಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ 10 ಲಕ್ಷ,ಅಂಬೇಡ್ಕರ್ ವಸತಿ ಯೋಜನೆಗೆ 50 ಲಕ್ಷ,ಘನ ತ್ಯಾಜ್ಯ ವಿಲೇವಾರಿ ಅಭಿವೃಧ್ದಿಗೆ 2 ಕೋಟಿ,ಕುಡಿಯುವ ನೀರಿಗೆ 50 ಲಕ್ಷ,ರಾಷ್ಟ್ರೀಯ ಹಬ್ಬಗಳಿಗೆ 3.5 ಲಕ್ಷ,ಕ್ರೀಡಾ ಚಟುವಟಿಕೆಗೆ 3 ಲಕ್ಷ, ರಸ್ತೆ ಮತ್ತು ಚರಂಡಿ ದುರಸ್ತಿಗೆ 20 ಲಕ್ಷ,ಬೀದಿ ದೀಪಗಳ ನಿರ್ವಹಣೆಗೆ 30 ಲಕ್ಷ,ಬೀದಿ ನಾಯಿ ಹಂದಿಗಳ ಹಿಡಿಯಲು 10 ಲಕ್ಷ,ನಾಯಿ-ಜೇನು-ಹಾವು ಕಚ್ಚಿರುವುದಕ್ಕೆ ಸಹಾಯ ಧನ 2 ಲಕ್ಷ,ಪಲ್ಸ್ ಪೊಲೀಯೋಗೆ 3 ಲಕ್ಷ, ಪೌರಕಾರ್ಮಿಕರ ಸಮವಸ್ತ್ರ 5 ಲಕ್ಷ,ಪೌರಕಾರ್ಮಿಕರ ಉಪಹಾರಕ್ಕೆ 10 ಲಕ್ಷ,ಉದ್ಯಾನವನ ಅಭಿವೃದ್ಧಿಗೆ 5 ಲಕ್ಷ,ವೀರಶೈವ ಶಿವಾಚಾರ್ಯ ಸ್ಮಶಾನ ಅಭಿವೃಧ್ಧಿಗೆ 10 ಲಕ್ಷ,ಶವಸಂಸ್ಕಾರಕ್ಕೆ ವಾಹನ 25 ಲಕ್ಷ,ನಗರ ಅರಣ್ಯ ಅಭಿವೃದ್ಧಿಗೆ 15 ಲಕ್ಷ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಹಣ ಮೀಸಲಿಟ್ಟಿದ್ದು,ಹಿರಿಯ ಸದಸ್ಯ ರಂಗಸ್ವಾಮಿ ಬಜೆಟ್ ಕುರಿತು ಮಾತನಾಡುತ್ತ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ,ಚಿತಾಗಾರಕ್ಕೆ ಹೆಚ್ಚಿನ ಒಲವು,ಅಂಗನವಾಡಿಗೆ ವಿಶೇಷವಾದ ಅನುದಾನ,ಎಸ್.ಸಿ,ಎಸ್.ಟಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುದಾನ, ಅಂಗವಿಕಲರ ಹಣ ವಿನಿಯೋಗ,ಅರಣ್ಯೀಕರಣಕ್ಕೆ ಒತ್ತು,ಸಿಬ್ಬಂದಿ ನೇಮಕಕ್ಕೆ ಆದ್ಯತೆ,ಘನತ್ಯಾಜ್ಯಕ್ಕೆ ಒತ್ತು ನೀಡುವಂತೆ ಒತ್ತಾಯಿಸಿದರಲ್ಲದೆ. ಕೆಲವು ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗಳು ನಡೆದರೆ ಅಂತಹ ಘಟನೆಗಳನ್ನ ನಿರ್ವಹಣೆ ಮಾಡಲು ಹಣವನ್ನು ಮೀಸಲಿಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

        ಸದಸ್ಯರಾಧ ಮಂಜು ಮಾತನಾಡಿ,ಪಟ್ಟಣದ ನಾಯಿ-ಹಂದಿಗಳನ್ನು ಹೊರಹಾಕಲು ಹೆಚ್ಚಿನ ಅನುದಾನಕ್ಕೆ ಆಗ್ರಹ,ಆಟೋ ನಿಲ್ದಾಣ,ಪುರಸಭೆಯ ವಾಣಿಜ್ಯ ಸಂಕೀರ್ಣ ಬಗ್ಗೆ ಗಮನಹರಿಸಿ ಪುರಸಭಾ ಅಸ್ತಿಯಲ್ಲಿ ಯಾರಾರು ಇದ್ದಾರೆ ಅವರಿಂದ ಎಷ್ಟು ಬಾಡಿಗೆ ಬರುತ್ತಿದೆ ಎಂಬ ಮಾಹಿತಿಯನ್ನೇ ನೀಡಲಿಲ್ಲ ಎಂದು ವಿಷಾಧಿಸಿದರು.

       ಸದಸ್ಯರಾದ ಅನ್ಸರ್‍ಪಾಷಾ. ರಾಮು ಕಂದಾಯ ವಸೂಲಿ ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿ ನೌಕರರಿಗೆ ತಾಕೀತು ಮಾಡಿದರು. ಉಪಾಧ್ಯಕ್ಷ ಅರುಣ್‍ಕುಮಾರ್,ಮುಖ್ಯಾಧಿಕಾರಿ ರಮೇಶ್,ಸದಸ್ಯ ಕೆ.ಎಲ್.ಹರೀಶ್,ಜೆ.ಟಿ.ಜಗದೀಶ್, ಚಂದ್ರು, ವಿಜಯಮ್ಮ,ಮಂಜುಳಾ,ಸತೀಶ್, ಸರಸ್ವತಿ,ಐಶಾಭಿ, ಎಲ್ಲಸದಸ್ಯರು ಹಾಗೂ ಪುರಸಭಾ ಸಿಬ್ಬಂದಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link