ಬೆಂಗಳೂರು
ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲು ಬಾರ್ ಮೇಲೆ ದಾಳಿ ಮುಂದುವರೆಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ರಾತ್ರಿ ಸುಮಾರು 25ಕ್ಕೂ ಬಾರ್‍ಗಳ ಮೇಲೆ ದಾಳಿ ನಡೆಸಿ 57 ಮಂದಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸಿದ್ದಾರೆ.
ನಗರದ ದಕ್ಷಿಣ,ಆಗ್ನೇಯ ಹಾಗೂ ಈಶಾನ್ಯ ವಿಭಾಗಗಳ ಹಲಸೂರು, ಶಿವಾಜಿನಗರ, ಇಂದ್ರಾನಗರ,ಜೆಬಿ ನಗರ,ಬೊಮ್ಮನಹಳ್ಳಿ ಬೇಗೂರು ಹೆಚ್ ಎಸ್ ಆರ್, ಆಡುಗೋಡಿ, ಕೋರಮಂಗಲ, ಮೈಕೊ ಲೇಔಟ್, ಯಲಹಂಕ, ಕೊತ್ತನೂರು, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ ಸೇರಿ ಒಟ್ಟು 25 ಬಾರ್‍ಗಳ ಮೇಲೆ ನಿನ್ನೆ ರಾಥ್ರಿ 9ರಿಂದ 12ರವರೆಗೆ ದಾಳಿ ನಡೆಸಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಶಂಕೆಯ ಮೇಲೆ 57 ಮಂದಿಯನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








