ರೈಲ್ವೆ ನಿಲ್ದಾಣದಲ್ಲಿ ಪುರಾತನ ಬಾವಿ ಪತ್ತೆ

ದಾವಣಗೆರೆ:

     ಪುರಾತನ ಕಾಲದ ಹಳೇ ಬಾವಿಯೊಂದು ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ.ರೈಲ್ವೆ ಮಾರ್ಗ ಡಬ್ಲಿಂಗ್ ಮಾಡುವ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೊಂಡಿತ್ತು. ನಿಲ್ದಾಣದ 2ನೇ ಫ್ಲಾಟ್ ಫಾರಂ ಅನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸುಮಾರು 100 ಅಡಿ ಆಳ ಇರುವ ಪುರಾತನ ಕಾಲದ ಬಾವಿ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

       ಸುಮಾರು 100 ಅಡಿ ಆಳವಿರುವ ಬಾವಿ. ಬಾವಿ ಮೇಲೆ ಕಂಬಗಳನ್ನು ಹಾಕಿ ಮುಚ್ಚಲಾಗಿತ್ತು. ಆದರೆ, ಈಗ ರೈಲ್ವೆ ಇಲಾಖೆಯವರು ಕಾಮಗಾರಿ ಕೈಗೊಂಡಿರುವಾಗ ಈ ಬಾವಿ ಪತ್ತೆಯಾಗಿದೆ.ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಬಾವಿಯನ್ನು ಉಳಿಸಿಕೊಳ್ಳುತ್ತಾರೊ, ಇಲ್ಲ ಮುಚ್ಚಿ ಬಿಡುತ್ತಾರೋ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap