ಬೆಳಗಾವಿ
ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಖಾನಾಪುರ ತಾಲ್ಲೂಕಿನ ತೀನೈಘಾಟ್ ಎಂಬಲ್ಲಿ ರೇಲ್ವೆ ಹಳಿಗಳ ಭದ್ರತೆಗೆಂದು ಹಾಕಿದ್ದ ಮಣ್ಣು ಕುಸಿದಿದ್ದು ಇದರ ಪರಿಣಾಮ ಸತತ ಮೂರು ಗಂಟೆಗಳಿಂದ ಗೋವಾ ಬೆಳಗಾವಿ ನಡುವೆ ರೈಲ್ವೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಇಲಾಖೆ ತಿಳಿಸಿದೆ . ಹಲವು ಗ್ರಾಮಗಳು ಜಲಾವೃತವಾಗಿದ್ದು ಸಂತ್ರಸ್ತರ ನೆರವಿಗೆ ಸೇನಾಪಡೆ ಧಾವಿಸಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
