ವರ್ಷದ ಮೊದಲಿಗೆ ಧರೆ ತಣಿಸಿದ ಇಳೆ

ಹರಪನಹಳ್ಳಿ:

     ವರ್ಷದ ಪ್ರಥಮ ಇಳೆ ಧೆರೆಯನ್ನು ತಣಿಸಿದ್ದು, ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿ ಅತಿ ಗಾಳಿಯಿಂದ ಮನೆಗಳ ಮೇಲ್ಚಾವಣಿ ಹಾರಿ, ವಿದ್ಯುತ್ ಕಂಬಗಳು ಮತ್ತು ಕೆಲ ಮರಗಳು ಧರೆಗುರುಳಿದ ಘಟನೆ ಭಾನುವಾರ ಸಂಜೆ ಜರುಗಿದೆ.ಕರೋನಾ ಭೀತಿಯಲ್ಲಿ ವಿಶ್ವವೇ ಲಾಕ್‍ಡೌನ್ ಆಗಿದ್ದು ಮನೆಗಳಲ್ಲೇ ಬಿಸಿಲಿನ ಧಗೆಯಲ್ಲಿ ಕಾಲ ನೂಕುತ್ತಿರುವ ಜನತೆಗೆ ಸುರಿದ ವರುಣನ ಕೃಪೆಯಿಂದ ತಂಪೆರೆದಂತಾಗಿದೆ.

ಸಿಡಿಲಿಗೆ ಎತ್ತುಗಳ ಬಲಿ

     ತಾಲೂಕಿನ ತಲವಾಗಲು ಗ್ರಾಮದ ಹನುಮಂತಪ್ಪ ತಾಯಿ ಚೌಡಮ್ಮನಿಗೆ ಸೇರಿದ ಒಂದು ಎತ್ತು ಹಾಗೂ ಕೂಲಹಳ್ಳಿ ಗ್ರಾಮದ ವೆಂಕಟೇಶ್ ತಂದೆ ರಾಮಣ್ಣನವರ ಎತ್ತು ಸಿಡಿಲಿಗೆ ಬಲಿಯಾಗಿವೆ.ಪಟ್ಟಣದಲ್ಲಿ 186.6 ಮಿ.ಮೀ, ಅರಸಿಕೆರೆ 49.4, ಹಿರೆಮೇಗಳಗೇರೆ 40.2, ಉಚ್ಚಂಗಿದುರ್ಗ 8.4, ತೆಲಿಗೆ 15.4, ಹಲವಾಗಲು 30.3 ಮಿಮೀ ಮಳೆಯಾದ ವರಧಿಯಾಗಿದೆ.

      ಪಟ್ಟಣದ ತಗ್ಗಿನಮಠದ ಬಳಿಯ ಡಿವೈಎಸ್‍ಪಿ ಕಚೇರಿ, ಗ್ರಂಥಾಲಯ ಹಾಗೂ ದೂರದರ್ಶನ ಮರುಪ್ರಸರಣ ಕೇಂದ್ರ , ಕೋಟೆ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಜಲಾವೃತವಾಗಿತ್ತು. ಬಣಗಾರ ಪೇಟೆಯಲ್ಲಿ ಕೆಲ ಮನೆಗಳ ಮೇಲ್ಚಾವಣೆ ಹಾರಿಹೋಗಿವೆ. 2 ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.ತಾಲೂಕಿನ ನೀಲಗುಂದ ಗ್ರಾಮದ ಭೋವಿ ಕಾಲೋನಿ ಸಂಪೂರ್ಣ ಜಲಾವೃತವಾದ ಘಟನೆ ಜರುಗಿದೆ. ರೈತರ ಮೊಗದಲ್ಲಿ ನಗುವಿನ ಮಂದಹಾಸ ಮೂಡಿದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link