ರೈತರಿಗೆ ಎಷ್ಟೇ ಸೌಲಭ್ಯ ನೀಡಿದರೂ ಮಳೆರಾಯನ ಕೃಪೆ ಬೇಕು : ವೆಂಕಟರವಣಪ್ಪ

ಪಾವಗಡ

       ತಾಲ್ಲೂಕಿನ ರೈತರು ಬರದಿಂದಾಗಿ ಭೂಮಿ ಮಾರಾಟ ಮಾಡಿ, ಕೃಷಿಯನ್ನೆ ತ್ಯಜಿಸಿ ವಲಸೆ ಹೋಗುವ ಪರಿಸ್ಥಿತಿ ತಲೆದೋರಿದೆ ಎಂದು ಸಚಿವ ವೆಂಕಟರವಣಪ್ಪ ತಿಳಿಸಿದರು. ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜಿಲ್ಲಾ ಪಂಚಾಯಿತಿ ತುಮಕೂರು, ತಾಲ್ಲೂಕು ಪಂಚಾಯಿತಿ ಪಾವಗಡ, ಕೃಷಿ ಇಲಾಖೆ ಪಾವಗಡ ಇವರ ಸಂಯುಕ್ತಾಶ್ರಯದಲ್ಲಿ 2018-19 ನೇ ಸಾಲಿನ ಸುಜಲ-3 ಯೋಜನೆಯಡಿ ತಾಲ್ಲೂಕು ಮಟ್ಟದ ಭೂಸಂಪನ್ಮೂಲ ಮಾಹಿತಿ ಕಾರ್ಯಾಗಾರ ಹಾಗೂ ಸಮಿತಿ ಸಮಾಲೋಚನೆ ಯೋಜನೆ ಅಡಿ ಚುನಾಯಿತ ಪ್ರತಿನಿಧಿಗಳ ಸಂರ್ಪಕ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

         ಪ್ರತಿ ರೈತನು ತಮ್ಮ ಜಮೀನಿನಲ್ಲಿ ಮಳೆ ನೀರು ತಡೆದು ನಿಲ್ಲಿಸಬೇಕು. ಆಗ ರೈತನ ಜಮೀನಿನಲ್ಲಿ ನೀರು ನಿಂತು ಮರಗಿಡಗಳಿಗೆ ತೇವಾಂಶ ಸಿಗುತ್ತದೆ,ಭೂಮಿಗೆ ಫಲವತ್ತತೆಯಿಂದ ಕೂಡಿ ಬೆಳೆ ಅನುಕೂಲವಾಗುತ್ತದೆ ಎಂದರು. ರೈತ ಬೆಳೆದ ಬೆಳೆಗೆ ರೈತ ಬೆಲೆ ನಿಗಧಿ ಪಡೆಸಲು ಸಾಧ್ಯವಾಗದೇ ದಾಲ್ಲಾಳಿ ಬೆಲೆಯನ್ನು ನಿಗದಿ ಪಡೆಸುವ ವ್ಯವಸ್ಥೆ ಇದ್ದು,ರೈತರ ಕಷ್ಟಕ್ಕೆ ಪ್ರತಿಫಲವಿಲ್ಲ ದಂತಾಗಿದ್ದು , ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ವಸ್ತುಗಳಿಗೆ ಅವರೆ ಬೆಲೆ ನಿಗದಿ ಪಡಿಸುವ ವ್ಯವಸ್ಥೆ ಇದ್ದು,ರೈತ ಜೀವನ ಮಟ್ಟ ಸುಧಾರಿಸುವವರು ಯಾರು,ರೈತರ ಬೆಳೆಗೆ ರೈತರೆ ಬೆಲೆ ನಿಗದಿ ಪಡೆಸುತ್ತಾರೋ ಅಲ್ಲಿಯ ತನಕ ರೈತರು ಮುಂದೆಬರಲು ಸಾಧ್ಯವಿಲ್ಲ ಎಂದರು.

        ಕೃಷಿ ಇಲಾಖೆಯಿಂದ ಫಲಾನುಭವಿಗಳನ್ನು ಗುರುರ್ತಿಸಿ ಸೌಲಭ್ಯ ನೀಡುವ ರೈತ ಬುದ್ದಿವಂತನಾಗಿರಬೇಕು,ಅಂತಹ ರೈತರಿಂದ ರೈತರಿಗೆ ತರಭೇತಿ ನೀಡಿ ಇಂತವರಿಗೂ ಅಧುನಿಕ ಸಲಕರಣಗಳು ನೀಡಿದರೆ ಮಾತ್ರ ಸರ್ಕಾರ ಕೋಟ್ಟ ಸೌಲಭ್ಯಕ್ಕೆ ಅರ್ಥ ಬರುತ್ತದೆ,ನೀಡಿದ ಸೌಲಭ್ಯ ಕೂಡ ದುರು ಪಯೋಗ ವಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.

         ಮಣ್ಣಿನ ಫಲವತ್ತತೆ ಹಾಗೂ ಮಣ್ಣಿಗೆ ಅನುಗುಣವಾಗಿ ರೈತರು ಬೆಳೆಗಳನ್ನು ಬೆಳೆಯಲು ಮುಂದದಾಗ ಮಾತ್ರ ಪ್ರತಿಫಲ ನಿರೀಕ್ಷಿಸಲು ಸಾಧ್ಯ ಎಂದಾ ಅವರು ಎಷ್ಟೇ ಕ್ರೀಮಿನಾಶಕಗಳನ್ನು ಭೂಮಿಯಲ್ಲಿ ಬೆರೆಸಿದರು ಬೆಳೆಯಾಗದೇ ಇಂದು ವಿಷಪೂರಿತವಾಗಿದೆ ಎಂದು ತಿಳಿಸಿದರು.

          ಮಧುಗಿರಿಯ ಉಪನಿರ್ದೆಶಕರಾದ ಟಿ.ಎನ್. ಆಶೋಕ್ ಮಾತನಾಡಿ ಕೃಷಿ ಇಲಾಖೆಯ ವತಿಯಿಂದ ರೈತನಿಗೆ ಮಣ್ಣು ಪರಿಕ್ಷೇಯ ಕಾರ್ಡ್‍ಗಳನ್ನು ವಿತರಣೆ ಮಾಡಿ,ರೈತನ ಭೂಮಿಯ ಪ್ರದೇಶದ ಅನುಗುಣವಾಗಿ ಮಣ್ಣಿನ ಪರಿಕ್ಷೇ ಮಾಡಿಸಿದ್ದರೆ. ಬೆಳೆಗೆ ಅನುಗುಣವಾಗುವ ಗೋಬ್ಬರ ಬಳುಸುವುದರಿಂದ ಭೂಮಿಯ ಫಲವತ್ತತೆಯನ್ನು ಕಾಪಾಡಿ ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ರೈತಿಗೆ ಅರಿವು ಮೂಡಿಸಿದರು.

          ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಜಲಾನಯನ ಸ್ವಸಹಾಯ ಸಂಘಗಳಿಗೆ ಸಹಾಯಧನ, ತುಂತುರು ನೀರಾವರಿಯ ಉಪಕರಣಗಳು ಹಾಗೂ ಮೀನಿ ಟ್ಯಾಕ್ಟರ್‍ಗಳನ್ನು ಮತ್ತು ಸಿಂಕ್ಲರ್ ಪೈಪುಗಳನ್ನು ವಿತರಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷರಾದ ರವಿ ಅಧ್ಯಕ್ಷತೆ ವಹಿಸಿದರು. ಕೃಷಿ ಸಹಾಯಕ ನಿರ್ದೇಶಕರಾದ ಪುಟ್ಟರಂಗಯ್ಯ,ಪಾಧ್ಯಾಪಕ ಹಾಗೂ ಸುಜಲ ಸಂಯೋಜಕರಾದ ಡಾ;ಡಿ.ಚಿಕ್ಕರಾಮಪ್ಪರವರು ಮಾತನಾಡಿದರು.

         ಕಾರ್ಯಾಕ್ರಮದಲ್ಲಿ ತಾ.ಪಂ.ಉಪಾದ್ಯಕ್ಷರಾದ ನಾಗರಾಜು, ತಾ.ಪಂ.ಸದಸ್ಯರಾದ ರವಿ ,ತಾ.ಪಂ.ಮಾಜಿ ಅಧ್ಯಕ್ಷರಾದ ಗೊವಿಂದಪ್ಪ,ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ನರಸಿಂಹರೆಡ್ಡಿ,ಇಲಾಖೆಯ ತಾಂತ್ರಿಕ ಸಹಾಯಕ ಪ್ರವೀಣ್ , ಎ,ಒ ಗಳಾದ ರಾಮಾಂಜಿನಪ್ಪ , ಸಣ್ಣರಂಗಪ್ಪ , ಜಗನಾಥ್,ರೈತ ಸಂಘದ ಮುಖಂಡರಾದ ಅಂಜಿನಪ್ಪ,ಕೊಂಡಪ್ಪ, ಬಡಪ್ಪ , ನಾರಾಯಣಪ್ಪ , ಅಶ್ವಥ , ಹಾಗೂ ರೈತರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap