ತುರುವೇಕೆರೆ:
ಸುಮಾರು ದಿನಗಳಿಂದ ತಾಲೂಕಿನಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದರೆ ಭಾನುವಾರ ಸಂಜೆ ಕೆಲವು ಬಾಗದಲ್ಲಿ ಬಾರಿ ಮಳೆ ಸುರಿದು ನೀರು ಹರಿದಿದೆ.
ಒಂದು ತಿಂಗಳು ಹಿಂದೆ ತಾಲೂಕಿನಲ್ಲಿ ಸರಿಯಾದ ಮಳೆ ಬಾರದೆ ರೈತರ ರಾಗಿ, ಜೋಳ, ಭತ್ತ ಬಿತ್ತನೆಗೆ ತೊಡಕಾಗಿತ್ತು. ಇತ್ತಿಚೀಗೆ ದಿನಾ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಜನರು ತತ್ತರಿಸುವಂತಾಗಿದೆ. ಹಗಲು ಹೊತ್ತಿನಲ್ಲಿಯೇ ಜಿಡಿ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ರಸ್ತೆಯಲ್ಲಿ ಜನರ ಸಂಚಾರ ವಿರಳವಾಗಿತ್ತು. ರೈತರು ಕೃಷಿ ಚಟುವಟಿಕೆಗಳಿಗೆ ತೊಡಕಾಗಿದ್ದರೇ, ತಮ್ಮ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಕಷ್ಟ ಪಡುವಂತಾಗಿದೆ.
ಸಂಪಿಗೆ ಬಾರೀ ಮಳೆ:
ಭಾನುವಾರ ತಾಲೂಕಿನ ಹಲವೆಡೆ ಬಿಡಿ ಮಳೆ ಬಿದ್ದರೆ. ಸಂಪಿಗೆಯಲ್ಲಿ ಉತ್ತಮ ಮಳೆ ಸುರಿದಿದೆ. ಬಾನುವಾರ ಸಂಜೆ 4 ಗಂಟೆಗೆ ಪ್ರಾರಂಬವಾದ ಮಳೆ ಸುಮಾರು 6 ಗಂಟೆವಗೆಗೂ ಸುರಿದು ರಸ್ತೆ ಚರಂಡಿಯಲ್ಲಿಯೂ ಸಹ ನೀರು ಹರಿಯಿತು. ತಗ್ಗು ಪ್ರದೇಶದಲ್ಲಿ ನೀರು ತುಂಬಿದ್ದು ತಗ್ಗು ಪ್ರದೇಶದ ಜನರಿಗೆ ತೊಂದರೆಯಾಗಿತ್ತು. ಈ ವರ್ಷದಲ್ಲಿ ಉತ್ತಮ ಮಳೆಯಾಗಿದ್ದು ತೆಂಗು, ಅಡಿಕೆ ತೋಟಗಳಿಗೆ ಉತ್ತಮವಾಗಿದೆ ಎಂದು ಗ್ರಾಮಸ್ಥ ಶಿವಲಿಂಗಮೂರ್ತಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








