ಹರಪನಹಳ್ಳಿ:
ಅಕಾಲಿಕ ಬಿರುಗಾಳೆ ಮಳೆ, ಗುಡುಗು ಸಹಿತ ಮಂಗಳವಾರವು ಮುಂದುವರೆದಿದ್ದು ಬಾಗಳಿ, ನಂದಿಬೇವೂರು ತಾಂಡ, ಕಣಿವಿಹಳ್ಳಿ, ಕೋಡಿಹಳ್ಳಿ, ಹರಪನಹಳ್ಳಿ, ಕೂಲಹಳ್ಳಿ, ಚಿಕ್ಕಹಳ್ಳಿ, ಹೊಂಬಳಗಟ್ಟಿ, ಶೃಂಗಾರತೋಟ ಸೇರಿದಂತೆ ತಾಲೂಕಿನ ಹಲವು ಭಾಗದಲ್ಲಿ ಮಳೆಯಾಗಿದೆ.
ಸಿಡಿಲಿನ ಅರ್ಭಟದೊಂದಿಗೆ ಆರಂಭವಾದ ಮಳೆಯ ಸುಮಾರು 1 ಗಂಟೆಗಳ ಕಾಲ ಸುರಿದಿದ್ದು, ಬಾಗಳಿ ಗ್ರಾಮದ ಜಮೀನುಗಳಲ್ಲಿ ಮಳೆ ನೀರಿನಿಂದ ಆವೃತ್ತಗೊಂಡು ನೀರು ಹರಿದು ಬಂಧಿಭಾವಿ ಹಳ್ಳ ಮತ್ತು ಕುಂಬಾರಗಟ್ಟಿ ಹಳ್ಳಗಳು ರಸ್ತೆ ಮೇಲೆ ಹರಿದು ಬಾಗಳಿ ಕೆರೆಗೆ ಸೇರುತ್ತಿತ್ತು ಇದರಿಂದ ಅರ್ಧಗಂಟೆಗೂ ಕಾಲ ರಸ್ತೆಯಲ್ಲಿ ಹರಿಯುತ್ತಿರುವುದು ಕಂಡುಬಂತು. ಕೋಡಿಹಳ್ಳಿ ಭಾಗದ ಹಳ್ಳಗಳು ತುಂಬಿ ಬಾಗಳಿಗೆ ಕೆರೆಯ ಕಡೆಗೆ ಹರಿಯುತ್ತಿತ್ತು.
ಕೊಂಗನಹೋಸೂರು, ನಂದಿಬೇವೂರು, ನಂದಿಬೇವೂರು ತಾಂಡದಲ್ಲೂ ಸಹ ಬಿರುಗಾಳಿ ಸಹಿತ ಮಳೆ ಸುರಿದಿದ್ದು ಇದರಿಂದ ಹಳ್ಳ ತುಂಬಿ ಹರಿದಿವೆ, ಎರಡು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಕಣದಲ್ಲಿರುವ ಮೇವಿನ ಬಣವೆಗಳು ನೇಲದ ಪಾಲಾಗಿವೆ .ತಾಲೂಕಿನ ನೀಲಗುಂದ ಗ್ರಾಮದ ಸುತ್ತಮುತ್ತಲಿನಲ್ಲಿ ಭಾನುವಾರದ ಬಿರುಗಾಳಿಯಿಂದ ಕೂಡಿದ ಗುಡುಗು ಮಿಂಚಿನ ಸಮೇತ ಮಳೆಗೆ ಬೆಳೆದು ನಿಂತಿದ್ದ ಜೋಳ ನೆಲಕಚ್ಚಿದೆ. ಮೂರ್ನಾಲ್ಕು ತಿಂಗಳು ಕಷ್ಟಪಟ್ಟು ಬೆಳೆದ ಊಟದ ಜೋಳದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರಾದ ದುರುಗಪ್ಪ ಮತ್ತು ಸಣ್ಣಪ್ಪ ಅಳಲು ತೊಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








