ರೈತ ದಿನಾಚರಣೆ ಕಾರ್ಯಕ್ರಮ

ಹಾನಗಲ್ಲ :

        ರೈತರ ಮಕ್ಕಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಮಾತ್ರ ನಿಜವಾದ ರೈತರ ಕಾಳಜಿ ಮೆರೆಯಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಎ.ಐ.ಮಳೆಣ್ಣನವರ ನುಡಿದರು.

       ಶನಿವಾರ ಹಾನಗಲ್ಲಿನ ಕೆಎಲ್‍ಇ ವಿಜ್ಞಾನ ಮಹಾವಿದ್ಯಾಲಯದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿಧ ಆವರು, ಯುವಕರು ರಾಷ್ಟ್ರದ ಭೌವಿಷ್ಯ ಎನ್ನುವ ಸರಕಾರಗಳು ಯುವಕರಿಗಾಗಿ ಕೊಡುವ ಸೌಲಭ್ಯಗಳು ಮಾತ್ರ ನಗಣ್ಯ. =ಹಾನಗಲ್ಲ : ರೈತರ ಮಕ್ಕಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಮಾತ್ರ ನಿಜವಾದ ರೈತರ ಕಾಳಜಿ ಮೆರೆಯಲು ಸಾಧ್ಯ ರಾಷ್ಟ್ರದ ಹಿತಕ್ಕಾಗಿ ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ಒಯ್ಯುವ ಕಾರ್ಯ ಮುಂದಾಗಬೇಕಾಗಿದೆ. ಪ್ರತಿಭೆಗಳಿಗೆ ಸರಿಯಾದ ಗೌರವ ಸಿಗುತ್ತಿಲ್ಲ. ಮತ ಪಂಥಗಳ ಹೆಸರಿನಲ್ಲಿ ಮೀಸಲಾತಿ ನೀಡುವ ಸರಕಾರಗಳು ಮೊಟ್ಟ ಮೊದಲು ರೈತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

         ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಮಂಜುನಾಥ, ಶ್ರಮ ಸಂಸ್ಕತಿಯನ್ನು ಗೌರವಿಸುವ ಅಗತ್ಯವಿದೆ. ಶ್ರಮವಂತರು ಬಡವರಾಗಿಯೇ ಇದ್ದಾರೆ. ದಲ್ಲಾಳಿಗಳು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಒತ್ತಡದ ಜೀವನದ ನಡುವೆ ರೈತ ಬದುಕುತ್ತಿದ್ದಾನೆ. ರೈತ ಕೈ ಕೆಸರು ಮಾಡಿಕೊಂಡು ದುಡಿದರೆ ಅದು ದಲ್ಲಾಳಿಗಳ ಬಾಯಿಗೆ ಮೊಸಲಾಗುತ್ತಿದೆ. ಇಂದಿನ ಯುವಕರಿಗೂ ಕೂಡ ಶಾಲೆ ಕಾಲೇಜುಗಳಲ್ಲಿ ಅಂಕ ಆದಾರಿತ ಓದಿಗೆ ಮನ್ನಣೆ ನೀಡುತ್ತಿದ್ದೇವೆಯೇ ಹೊರತು ಜೀವನ ರೂಪಿಸಿಕೊಳ್ಳುವ ಶಿಕ್ಷಣ ಸಿಗುತ್ತಿಲ್ಲ ಎಂದರು.

            ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ ರೈತ ಗೀತೆ ಹಾಗೂ ನಾಡಗೀತೆಗಳನ್ನು ನೀಡಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದಂದು ರೈತರನ್ನು ಸನ್ಮಾನಿಸುವ ಮೂಲಕ ನಿಜವಾದ ರೈತ ಪ್ರೀತಿ ಮೆರೆದ ದಿನ ಇದಾಗಿದೆ. ರೈತ ನೀರಾವರಿ ಇಲ್ಲದ ಕಾರಣ ಕೈಗೆ ಕೆಲಸವಿಲ್ಲದೆ ತೆಲೆಮೇಲೆ ಕೈಹೊತ್ತು ಕೂತಿದ್ದಾನೆ. ಹೊಟ್ಟೆ ಪಡಿಗಾಗಿ ಅಲೆಮಾರಿಯಾಗಿದ್ದಾನೆ. ರೈತನನ್ನು ಸಂಕಷ್ಟದಿಂದ ಬಿಡಿಸಲು ನೀರಾವರಿ ಯೋಜನೆಗಳು ಸಫಲವಾಗಿಬೇಕು ಎಂದರು.

          ಇದೇ ಸಂದರ್ಭದಲ್ಲಿ ಬೆಳಗಾಲಪೇಟೆಯ ಪ್ರಗತಿಪರ ರೈತ ಬಸಪ್ಪ ಶಿಗ್ಗಾವಿ ಅವರನ್ನು ಸನ್ಮಾನಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ರವಿರಾಜ ತಿರುಮಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಶ್ರೀಧರ ಉರಣಕರ, ಪಾರ್ವತಿಬಾಯಿ ಕಾಶಿಕರ, ವಿ.ಜಿ.ಶಾಂತಪೂರಮಠ ಅತಿಥಿಗಳಾಗಿದ್ದರು.

ಕವಿಗೋಷ್ಠಿ :

           ಎಂ.ಎಂ.ಹೊಸೂರ, ಕಾಂತೇಶ ಅಸುಂಡಿ, ಎಸ್.ವಿ.ಹೊಸಮನಿ, ಎಚ್.ಸುದಾ, ಶಿವಾನಂದ ಚಕ್ರಸಾಲಿ, ಚಿನ್ಮಯಿ ಭಂಡಾರಿ, ಪ್ರದೀಪ ಕುಳೇನೂರ, ಬಿ.ಹೊನ್ನಪ್ಪ, ಚೇತನ ನಾಗಜ್ಜನವರ, ಸಹನಾ ಚಿಕ್ಕಮಠ, ಅನುಕುಮಾರ, ಸಂಪತ್ ಕಮಾಟಿ, ಜ್ಯೋತಿ ಶಡಗರವಳ್ಳಿ ಕಾವ್ಯವಾಚನ ಮಾಡಿದರು.ಬಿ.ಹೊನ್ನಪ್ಪ ಸ್ವಾಗತಿಸಿದರು. ಸ್ವಾತಿ ಬೈಲಣ್ಣನವರ, ಅನುಷಾ ಅರಳಿಮರದ ಕಾರ್ಯಕ್ರಮ ನಿರೂಪಿಸಿದರು. ರಾಧಿಕಾ ಹಾಗೂ ವರ್ಷಿಣಿ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link