ಹರಪನಹಳ್ಳಿ
ದಲಿತರು, ರೈತರು, ಕಾರ್ಮಿಕರು ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳನ್ನು ಹೊರತುಪಡಿಸಿ ಮೋಟಾರು ಕಾಯ್ದೆ ಅನುಷ್ಠಾನ ಮಾಡಬೇಕು ಎಂದು ರೈತ ಸಂಘ ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಂ.ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನಸಾಮಾನ್ಯರಿಗೆ ನಾಡಿಮಿಡಿತ ಅರಿತುಕೊಳ್ಳದೇ ವಿವೇಕವಲ್ಲದ ಕಾನೂನು ಜಾರಿಗೆ ತರಲಾಗಿದೆ. ಇದರ ವಿರುದ್ದ ಜನಾಂದೋಲನ ಸೆ.12ರಿಂದ ಆರಂಭಿಸುವುದಾಗಿ ಹೇಲಿದರು.
ದಂಢದ ಮೊತ್ತವನ್ನು ಹತ್ತು ಪಟ್ಟು ಏರಿಕೆ ಮಾಡಿ ಸರ್ಕಾರದ ಖಜಾನೆ ಭರ್ತಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಇದರಿಂದ ಬೈಕ್ವುಳ್ಳ ಜನಸಾಮಾನ್ಯರು ದಂಢ ಕಟ್ಟುವುದು ಅಸಾಧ್ಯವಾಗಿದೆ. ವಿಧಿಸುವ ದಂಢ ಕಟ್ಟುವ ಬದಲು ಬೈಕ್ ಮಾರಾಟ ಮಾಡುವುದೇ ಲೇಸು ಎನ್ನುವಂತಾಗಿದೆ ಎಂದರು.
ಮೆಕ್ಕೆಜೋಳ, ಕಬ್ಬು, ಭತ್ತ, ರಾಗಿ, ಜೋಳ, ಶೇಂಗಾ ಬೆಳೆಗಳಿಗೆ ದುಪ್ಪಟ್ಟು ವೈಜ್ಞಾನಿಕ ಬೆಲೆ ನಿಗಧಿ ಮಾಡದ ಸರ್ಕಾರ, ಮೋಟಾರು ಕಾಯ್ದೆ ಮೂಲಕ ಜನರಿಗೆ ಹೊರೆ ಆಗುವಂತೆ ದಂಢ ಹೆಚ್ಚಿಸಿರುವುದು ಸರಿಯಲ್ಲ. ಬೇಕಿದ್ದರೆ ಉದ್ಯೋಗ ಖಾತ್ರಿ ಕೂಲಿ ಹಣ ಬರೀ ದುಪ್ಪಟ್ಟು ಮಾಡಿ ಸಾಕು ಎಂದು ಒತ್ತಾಯಿಸಿದರು. ಪ್ರಜೆಗಳ ಹಿತ ಬಯಸುವ ಕಾನೂನು ಬೇಕೆ ಹೊರತು, ನಮಗೆ ಜನವಿರೋಧಿ ನೀತಿ ಬೇಡ.ತಕ್ಷಣ ದಂಢ ವಿಧಿಸುವ ನಿಯಮ ನಿಲ್ಲಿಸಿದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ರೈತರು ಹೆಲ್ಮೆಟ್ ಇಲ್ಲದೆ ಬೈಕ್?ಗ್ಳನ್ನು ಚಲಾಯಿಸಿಕೊಂಡು ಬಂದು, ಪೊಲೀಸ್ ಠಾಣೆಗಳ ಎದುರು ಪಾರ್ಕಿಂಗ್ ಮಾಡಿ, ಸ್ವಯಂ ಪ್ರೇರಿತರಾಗಿ ಜೈಲಿಗೆ ಹೋಗುವ ಪ್ರತಿಭಟನೆ ಮಾಡುವುದಾಗಿ ಮಾಹಿತಿ ನೀಡಿದರು.
ಸಂಘಟನಾ ಕಾರ್ಯದರ್ಶಿ ಶೃಂಗಾರತೋಟ ಬಸವರಾಜ್, ಪ್ರದಾನ ಕಾರ್ಯದರ್ಶಿ ಉಚ್ಚಂಗಿದುರ್ಗ ಚಂದ್ರಪ್ಪ, ತಾಲ್ಲೂಕು ಉಪಾಧ್ಯಕ್ಷ ನೀಲಪ್ಪ, ಕಣವಿ ನೀಲಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ