ರೈತರ ಮೊಗದಲ್ಲಿ ಹರ್ಷ ತಂದ ವರುಣ..!!

ಬ್ಯಾಡಗಿ:

    ತಾಲೂಕಿನಾದ್ಯಂತ ಸಂಜೆ ಸುರಿದ ಆಲಿಕಲ್ಲು ಸಹಿತ ಗಾಳಿ ಮಳೆಗೆ ಸ್ವಲ್ಪಮಟ್ಟಿನ ತಂಪನ್ನೆರದಿದ್ದರೇ, ಪಟ್ಟಣದಲ್ಲಿರುವ ಚರಂಡಿಗಳು ತುಂಬಿ ಹರಿದು, ತಾಲೂಕಾ ಕ್ರೀಡಾಂಗಣ ಸೇರಿದಂತೆ ಬಹಳಷ್ಟು ಶಾಲಾ ಆವರಣಗಳು ಜಲಾವೃತಗೊಂಡ ಘಟನೆ ನಡೆದಿದೆ.

     ಸಂಜೆ 5.30ರ ಸುಮಾರಿಗೆ ಆರಂಭವಾದ ಮಳೆಯು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಒಂದೇ ಸಮನೆ ಸುರಿಯಿತು. ಮಳೆಯಿಂದಾಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಹಳ್ಳಗಳಲ್ಲಿಯೂ ಸಹ ನೀರು ಹರಿದಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಳೆದ 3 ತಿಂಗಳಿಂದ ಸುಡು ಬಿಸಿಲು ಹೆಚ್ಚಾಗಿದ್ದು ಕಾಯ್ದು ಕಬ್ಬಿಣದ ಬಾಣಲೆಯಂತಾಗಿದ್ದ ರಸ್ತೆಗಳಿಗೆ ತಂಪ ನ್ನೆರೆಯಿತು.

      ವಿದ್ಯುತ್ ಸಂಪರ್ಕ ಸ್ಥಗಿತ:ಗಾಳಿ ಸಹಿತ ರಭಸದ ಮಳೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸುಮಾರು 2 ತಾಸು ಗಳಿಗೂ ಅಧಿಕ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಸ್ಕಾಂ ಇಲಾಖೆಯು ತಾಲೂಕಿನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು.

      ಕೃಷಿ ಚಟುವಟಿಕೆ ಗರಿಗೆದರುವ ನಿರೀಕ್ಷೆ:ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿತ್ತು, ಮಳೆ ಕೊರತೆಯಿಂದ ತಾಲೂಕಿನ ಯಾವುದೇ ಭಾಗದಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರಲಿಲ್ಲ, ಆದರೆ ಭಾನುವಾರ ಸಂಜೆ ಸುರಿದ ರಭಸದ ಮಳೆಗೆ ನಾಳೆಯಿಂದ ಕೃಷಿ ಚಟುವಟಿಕೆ ಗಳು ಗರಿದೆದರುವ ನಿರೀಕ್ಷೆಯಿದೆ ಆತಂಕದಲ್ಲಿದ್ದ ರೈತ ಸಮೂಹಕ್ಕೆ ಇಂದಿನ ಮಳೆ ಸ್ವಲ್ಪಮಟ್ಟಿನ ರಿಲೀಫ್ ನೀಡಿದೆ, ಹವಾಮಾನ ಇಲಾಖೆ ವರದಿಯಂತೆ ಮುಂಗಾರು ವಿಳಂಬ ವಾಗುವ ಲಕ್ಷಣಗಳಿವೆಯಾದರೂ ಭಾನುವಾರ ಸಂಜೆ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಾತ್ರ ಹರ್ಷ ತಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link