ಚಳ್ಳಕೆರೆ
ತಾಲ್ಲೂಕಿನ ಕೆಲವೆಡೆ ರೈತರು ಖಾಸಗಿ ಕಂಪನಿಯ ಈರುಳ್ಳಿ ಬೀಜವನ್ನು ಬಿತ್ತಿ ತಿಂಗಳುಗಟ್ಟಲೇ ಕಾದರೂ ಇನ್ನೂ ಬೀಜ ಮೊಳಕೆಯಾಗದೆ ರೈತರಲ್ಲಿ ಆತಂಕ ಮೂಡಿಸಿದ್ದು, ಮತ್ತೆ ರೈತರು ನಷ್ಟ ಅನುಭವಿಸುವ ಸ್ಥಿತಿಯಲ್ಲಿದ್ದಾರೆ. ಚಳ್ಳಕೆರೆ ನಗರದ ರೈತರಾದ ಅಜ್ಜಯ್ಯ, ಈರಣ್ಣ, ವೀರಭದ್ರಪ್ಪ ಎಂಬುವವರು ತಮ್ಮ ರಿ.ಸರ್ವೆ ನಂ. 68ರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಇಂಡೋಮಾರ್ಷಲ್ ಎಂಬ ನೂತನ ತಳಿಯನ್ನು ತಂದು ಕಳೆದ ಮೇ-22ರಂದು ತಮ್ಮ ಜಮೀನುಗಳಲ್ಲಿ ಈರುಳ್ಳಿ ಬೀಜವನ್ನು ಬಿತ್ತನೆ ಮಾಡಿದ್ದರು.
ನಗರದ ಖಾಸಗಿ ಗೊಬ್ಬರ ಅಂಗಡಿಯಲ್ಲಿ ಮಾಲೀಕರ ಭರವಸೆಯಂತೆ ಇಂಡೋಮಾರ್ಷಲ್ ಬೀಜವನ್ನು ಖರೀದಿಸಿ ಬಿತ್ತಿದ್ದು, 12 ದಿನದಲ್ಲಿ ಮೊಳಕೆ ಹೊಡೆಯುವುದಾಗಿ ತಿಳಿಸಿದ್ದರು. ಆದರೆ, ಬೀಜ ಬಿತ್ತನೆ ಮಾಡಿ 20ದಿನ ಕಳೆದರೂ ಜಮೀನ ಎಲ್ಲೂ ಸಹ ಈ ಬೀಜ ಮೊಳಕೆ ಒಡೆದಿಲ್ಲ.
ಅಂಗಡಿ ಮಾಲೀಕರ ಮಾತು ನಂಬಿದ ರೈತರು ಪ್ರತಿನಿತ್ಯ ತಮ್ಮ ಇಡೀ ಜಮೀನ ಬಿತ್ತನೆ ಮಾಡಿದ ಜಾಗವನ್ನು ಕಣ್ಣಲ್ಲಿ ಕಣ್ಣೀಟ್ಟು ನೋಡಿದರೂ ಸಹ ಬೀಜ ಮೊಳಕೆ ಹೊಡೆದ ಕುರುಹು ಇಲ್ಲ. ಇದರಿಂದ ಆತಂಕಗೊಂಡ ರೈತರು ತಾವು ಮತ್ತೆ ನೂತನ ತಳಿ ಬಿತ್ತಿ ಮೋಸ ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸುವ ಆತಂಕದಲ್ಲಿದ್ಧಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ತಮ್ಮ ನೋವನ್ನು ತೋಡಿಕೊಂಡ ರೈತರು ಮುಂದಿನ ದಿನಗಳಲ್ಲಿ ಇಂತಹ ಬೀಜವನ್ನು ಬಿತ್ತಿ ರೈತರು ನಷ್ಟ ಅನುಭವಿಸುವ ಸಂದರ್ಭವೇ ಹೆಚ್ಚಿದ್ದು, ತೋಟಗಕಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ದೊರಕಿಸಿಕೊಡುವುದ ರೊಂದಿಗೆ ಅಂಗಡಿ ಮಾಲೀಕರ ವಿರುದ್ದವು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ಧಾರೆ.
ಈ ಬಗ್ಗೆ ಮಾತನಾಡಿದ ರೈತ ಮಹಲಿಂಗಪ್ಪ, ಸುಮಾರು 10 ಎಕರೆಗೆ 25 ಕೆ.ಜಿಯಷ್ಟು 1.400 ರೂ ಕೊಟ್ಟು ಖರೀದಿಸಿದ ಇಂಡೋಮಾರ್ಷಲ್ ಬೀಜ ಕಾಲ ಕಾಲಕ್ಕೆ ನೀರು, ಗೊಬ್ಬರ ಕೊಟ್ಟರು ಎಲ್ಲೂ ಹುಟ್ಟಿಲ್ಲ. ನಾವು ಸಹ ಇಂದು, ನಾಳೆ ಬೀಜ ಮೊಳಕೆ ಒಡೆಯುತ್ತದೆ ಎಂದು ಕಾದು ಕಾದು ರೋಸಿದ್ದೇವೆ. ರೈತರಿಗೆ ಸರಿಯಾದ ಮಾರ್ಗದರ್ಶನ ನೀಡದೇ ನೂತನ ತಳಿಯನ್ನು ಬಿತ್ತನೆ ಮಾಡಲು ಖಾಸಗಿ ಅಂಗಡಿ ಮಾಲೀಕರೆ ಕಾರಣವಾಗಿದ್ದು, ಈ ಬಗ್ಗೆ ತೋಟಗಕಾರಿ ಇಲಾಕೆ ಅಧಿಕಾರಿಗಳು ಮಾಲೀಕರು ಮತ್ತು ಖಾಸಗಿ ಕಂಪನಿ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ನಷ್ಟ ಕೊಡಿಸಿಕೊಡುವಂತೆ ಆಗ್ರಹಿಸಿದ್ದಾರೆ.