ಸರ್ಕಾರ ಸಮಾಜದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ : ರಾಜನಹಳ್ಳಿ ಶ್ರೀ

ಹಾವೇರಿ :

    ರಾಜ್ಯ ಸರ್ಕಾರ ವಾಲ್ಮೀಕಿ ಸಮಾಜದ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ವಾಲ್ಮೀಕಿ ಸಮಾಜದ ಕಳೆದ ನಾಲ್ಕು ದಶಕದ ಬೇಡಿಕೆಯಾಗಿರುವ 7.5ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಾ ಬರಲಾಗುತ್ತಿದೆ. ಆದರೆ ಸರ್ಕಾರ ವಾಲ್ಮೀಕಿ ಜನಾಂಗದ ಬೇಡಿಕೆಗೆ ಸ್ಪಂದಿಸದೇ ಮೂಗಿಗೆ ತುಪ್ಪ ಸವರುವ ಪ್ರಯತ್ನಮಾಡುತ್ತದೆ. ಸರ್ಕಾರ ನಿರ್ಲಕ್ಷ ಖಂಡಿಸಿ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಗೆ ಆಗ್ರಹಿಸಿ ಸೆ.21ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುವುದಾಗಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನ್ನಂದಶ್ರೀಗಳು ಹೇಳಿದರು.

   ಇಲ್ಲಿನ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ಜಿಲ್ಲಾ ಜನಜಾಗೃತಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಈಹಿಂದೆ 7.5 ಮೀಸಲುಜಾರಿಗೆ ಆಗ್ರಹಿಸಿ ರಾಜನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ನ್ಯಾ.ನಾಗಮೋಹನದಾಸ ಸಮಿತಿಯನ್ನು ರಚಿಸಲಾಗಿತ್ತು, ಸಮಿತಿ ವರದಿ ನೀಡಿ ಹಲವರು ತಿಂಗಳುಗಳೇ ಉರುಳಿವೆ. ಆದರೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿದೆ. ಸರ್ಕಾರ ತಕ್ಷಣ ನಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆ.21ರಂದು ತಾವು ಏಕಾಂಗಿಯಾಗಿ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.

    ಸರ್ಕಾರ ಅ.31ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುತ್ತದೆ. ಅಂದು ಸಮಾಜದ ಬಂಧುಗಳು ಈ ಜಯಂತಿಯಲ್ಲಿ ಭಾಗವಹಿಸಬಾರದು.ಅ.30ರಂದು ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಬೆಕು. ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಸಮಾಜದ 50ರಿಂದ 60ಲಕ್ಷ ಜನರು ಅ.31ರಂದು ಬೃಹತ್ ಪ್ರತಿಭಟನೆ ನಡೆಸಿ,ವಾಲ್ಮೀಕಿ ಸಮಾಜದ ಬಹುಮುಖ್ಯ ಬೇಡಿಕೆಯಾಗಿರುವ 7.5ಮೀಸಲುಜಾರಿಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತರೋಣ. ಈ ಪ್ರತಿಭಟನೆಗೆ ಸಮಸ್ತ ವಾಲ್ಮೀಕಿ ಜನಾಂಗದವರು ಕೈಜೋಡಿಸಬೇಕೆಂದು ಶ್ರೀಗಳು ಕರೆ ನೀಡಿದರು.

    ಕೇಂದ್ರ ಸರ್ಕಾರ ಎಲ್ಲ ರಂಗÀಗಳಲ್ಲಿಯು ಶೇ.7.5ಮೀಸಲಾತಿಯನ್ನು ನೀಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಕೇಂದ್ರ ಸರ್ಕಾರ ನೀಡಿರುವ ಮೀಸಲಾತಿಯನ್ನು ನೀಡುತ್ತಿಲ್ಲ. ಕೇವಕ ಶೇ.3ಮೀಸಲಾತಿಯನ್ನು ಮಾತ್ರ ನೀಡುತ್ತಿದೆ. ಇದರಿಂದ ಶಿಕ್ಷಣ ಹಾಗೂ ಉದ್ಯೋಗದಲ್ಲಿ 7.5ಮೀಸಲಾತಿ ದೊರೆಯದ ಹಿನ್ನಲೆಯಲ್ಲಿ ವಾಲ್ಮೀಕಿ ಸಮಾಜಕ್ಕೆ ಭಾರೀ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ. ಕಳೆದ 42 ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ 7.5ಮೀಸಲಾತಿ ಹೆಚ್ಚಿಸುವಂತೆ ಹೋರಾಟಮಾಡುತ್ತಾ ಬರುತ್ತಿದ್ದೇವೆ. ಈಹೋರಾಟ ನಿರ್ಣಾಯವಾಗಿದ್ದು, ಸರ್ಕಾರ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಮೀಸಲಾತಿ ನೀಡಬೇಕೆಂದು ಶ್ರೀಗಳು ಆಗ್ರಹಿಸಿದರು.

   ಚುನಾವಣೆ ಬಂದಾದ ರಾಜಕೀಯ ಪಕ್ಷಗಳು ವಾಲ್ಮೀಕಿ ಸಮಾಜದ ಬಗ್ಗೆ ಕಣ್ಣೀರು ಸುರಿಸುತ್ತವೆ. ನಮ್ಮ ¸ಮಾಜವನ್ನು ಓಟ್ ಬ್ಯಾಂಕ್‍ನ್ನಾಗಿ ಮಾಡಿಕೊಂಡಿವೆ. ಬಿಜೆಪಿ ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ವಾಲ್ಮೀಕಿ ಸಮಾಜದ 7.5 ಮೀಸಲು ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಯಡೆಯೂರಪ್ಪನವರು ಹೇಳಿಕೆ ನೀಡಿದ್ದರು. ಆದರೆ ಅವರು ಈಬಗ್ಗೆ ಚಕಾರ ಎತ್ತುತ್ತಿಲ್ಲ. 2020ರ ವಾಲ್ಮೀಕಿ ಜಾತ್ರೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವುದಾಗಿ ಭರವಸೆ ನೀಡಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಜೊತ್ಗೆ ಶ್ರೀಮಹರ್ಷಿ ವಾಲ್ಮೀಕಿ ಮಂದಿರವನ್ನು ನಿರ್ಮಿಸಬೇಕೆಂದು ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನ್ನಂದಶ್ರೀಗಳು ಆಗ್ರಹಿಸಿದರು.

   ಸಭೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಂ.ಸಾಲಿ, ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಸಮಾಜದ ಹಿರಿಯರಾದ ಸೋಮನಗೌಡ ಪಾಟೀಲ, ಅಮೃತಗೌಡ ಪಾಟೀಲ, ಮಂಜುಳಾ ಕರಬಸಮ್ಮನವರ, ಹನುಮಂತಪ್ಪ ಯಮುನಕ್ಕನವರ, ರಮೇಶ ತೆವರಿ, ಪ್ರಮೋದ ನಲವಾಗಿಲ, ಚಂದ್ರಣ್ಣ ಬೇಡರ, ಕೆ.ಮಂಜಣ್ಣ ಮತ್ತಿತರರು ಮಾತನಾಡಿದರು. ಅಶೋಕ ತಳವಾರ, ಮಾಹಾಂತೇಶ ಹೊಳಿಯಮ್ಮನವರ, ನಾಗರಾಜ ಬಡಮ್ಮನವರ, ಹೊನ್ನೂರಪ್ಪ, ಶೇಖರ ಕಳ್ಳಿಮನಿ, ಕೃಷ್ಣ ಜವಳಿ,ಮಂಜುನಾಥ ಪೂಜಾರ, ಸಿ.ವಿ.ಪಾಟೀಲ, ಶಾಂತಣ್ಣ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link