ಬಳ್ಳಾರಿ
ಬಿಜೆಪಿಯವರು ಕೋಟ್ಯಂತರ ಹಣ ಖರ್ಚು ಮಾಡಿ ಕಾಂಗ್ರೇಸ್ ಜೆಡಿಎಸ್ ಪಕ್ಷದ ಅತೃಪ್ತ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಆರೋಪಿಸಿದರು.
ಬಳ್ಳಾರಿಯ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಸಕರಾಗಿ ಆಯ್ಕೆಯಾಗಿರುವ ಪಕ್ಷವನ್ನು ತೊರೆದು ರಾಜೀನಾಮೆ ನಾಟಕವಾಡುವವರನ್ನು ಸ್ಪೀಕರ್ ಕೂಡಲೇ ಅನರ್ಹ ಗೊಳಿಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಆಗ್ರಹಿಸಿದರು.
ಕಾನೂನು ಚೌಕಟ್ಟು ಮೀರಿ ಪಕ್ಷಾಂತರವಾಗಲು ಪ್ರಯತ್ನಿಸುತ್ತಿದ್ದಾರೆ.ಯಾವುದೇ ಶಾಸಕರು ಕ್ಷೇತ್ರದ ಜನರಿಂದ ಆಯ್ಕೆಗೊಂಡು ನಂತರದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿದ ಮತ್ತು ಮಾಹಿತಿಯನ್ನು ಪಡೆಯದೇ ರಾಜಿನಾಮೆ ನೀಡುವುದು ಎಷ್ಟು ಮಾತ್ರಕ್ಕೆ ಸರಿ ಎಂದು ಪ್ರಶ್ನೆ ಮಾಡಿದರು. ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಸಿಎಂ ಹಾಗೂ ಸಮನ್ವಯ ಸಮಿತಿಯ ಅದ್ಯಕ್ಷ ಸಿದ್ದರಾಮಯ್ಯ ನವರತ್ತರ ಹೇಳಬೇಕು, ಪಕ್ಷ ಎಂದರೆ ತಾಯಿ ಇದ್ದಹಾಗೆ ತಾಯಿಗೆ ದ್ರೋಹ ಮಾಡಿದವರಿಗೆ ಮುಂದೆ ಜನರೆ ತೀರ್ಪು ನೀಡುತ್ತಾರೆ. ಆನಂದ್ ಸಿಂಗ್ ದಾರಿ ತಪ್ಪಿದ ಮಗ ಎಂದು ಟೀಕಿಸಿದರು.
ಬಿಜೆಪಿ ಕೋಟ್ಯಂತರ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್? ಶಾ ಅವರನ್ನು ದೂರಿದರು. ಹಾಗೆಯೆ ಕೇಂದ್ರ ಸರ್ಕಾರದ ದೊಡ್ಡ ಸಂಸ್ಥೆಗಳಾದ ಐಟಿ ಇಡಿ ಏನು ಮಾಡುತ್ತಿವೆ, ಎಂದು ಸವಾಲು ಹಾಕಿದರು.ಅತೃಪ್ತ ಶಾಸಕರಿಗೆ ಕೊಡಲು ಇವರಿಗೆ ಹಣ ಎಲ್ಲಿಂದ ಬಂತು? ಇದರ ಬಗ್ಗೆ ಕೇಂದ್ರ ಮೌನ ವಹಿಸಿರುವುದು ಯಾಕೆ? ಈಗ ಎಲ್ಲ ಮೌನಿ ಬಾಬಾಗಳಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯ ಅಸಾಂವಿಧಾನಿಕ, ಅಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹಾಗೂ ರಾಜ್ಯದ ಜನರು ನೀಡಿದ ಜನಾದೇಶಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ,ಈ ನಡೆಯನ್ನು ದೇಶದ, ರಾಜ್ಯದ ಜನ ಸಹಿಸುವುದಿಲ್ಲ ಎಂದು ಕಾರವಾಗಿ ನುಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಜಿಲ್ಲಾ ಘಟಕದ ಅದ್ಯಕ್ಷ ಮಹಮ್ಮದ್ ರಫಿಕ್, ವೆಂಕಟೇಶ್ ಹೆಗಡೆ, ಮಾನಯ್ಯ, ಎಲ್ ಮಾರೆಣ್ಣ,ಅಸುಂಡಿ ವನ್ನೂರಪ್ಪ (ವಂಡ್ರಿ) ಅಸುಂಡಿ ನಾಗರಾಜ ಗೌಡ ಮಹಾನಗರ ಪಾಲಿಕೆ ಸದಸ್ಯ ಕುಮಾರ್ ಸ್ವಾಮಿ, ಕೊಮರಮ್ಮ ಮತ್ತಿತರ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
