ಮಂಗಳೂರು:
ಭಾರತ ಹಾಗು ಪಾಕ್ ಪ್ರಧಾನ ಮಂತ್ರಿ ಇಬ್ಬರು ಒಂದೆ ತಾಯಿ ಮಕ್ಕಳಿದ್ದಂತೆ ಇಬ್ಬರೂ ಸಹ ಅವರ ಸ್ವ ಲಾಭಕ್ಕಾಗಿ ದೇಶವನ್ನು ಬಯ್ಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಮಾನಾಥ್ ರೈ ಹೊಸ ವಿವಾದ ಸೃಷ್ಠಿಸಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆ ನೀಡುವ ರಮಾನಾಥ ರೈ. ಮಂಗಳೂರಿನಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಮುಗಿಸಿ ಹೋಗುತ್ತಿದ್ದ ವೇಳೆ, ಮೋದಿ ಹಾಗೂ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು ಎಂದು ರಮಾನಾಥ್ ರೈ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇಮ್ರಾನ್ ಖಾನ್ ವೋಟ್‍ಗಾಗಿ ಭಾರತವನ್ನು ಬಯ್ಯುತ್ತಾನೆ. ಮೋದಿ ವೋಟ್‍ಗಾಗಿ ಪಾಕಿಸ್ತಾನವನ್ನು ಬಯ್ಯುತ್ತಾರೆ. ಇಬ್ಬರು ಒಂದೇ ರೀತಿಯ ಜನ. ಅವನು ಹೇಗೋ ಸರಿಯಿಲ್ಲ, ಇವರು ಅದೇ ದಾರಿಯಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








