ಬೆಂಗಳೂರು
ರೂಪದರ್ಶಿಯೊಬ್ಬರನ್ನು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕರೆದೊಯ್ಯವ ವೇಳೆ ಆಕೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ನಡೆದಿದೆ.ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಸೋಮಶೇಖರ್‍ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.ಆರೋಪಿ ಸೋಮಶೇಖರ್ ಪರಿಚಯಸ್ಥ ರೂಪದರ್ಶಿಯೊಬ್ಬರಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕೊಡಿಸುತ್ತೇನೆ ಎಂದು ಆಮಿಷ ವೊಡ್ಡಿದ್ದಾನೆ.
ರೂಪದರ್ಶಿಯನ್ನು ಫೋಟೋಶೂಟ್ ಮಾಡಿಸಬೇಕು ಎಂದು ನೆಪ ಹೇಳಿ ಬಂಗಾರಪೇಟೆಗೆ ರೈಲಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸೋಮಶೇಖರ್ ಕುಪ್ಪಂನ ಟೇಕಲ್ ಬಳಿ ಆಕೆಗೆಗೆ ಚಾಕು ತೋರಿಸಿ ಕೈಕಾಲು ಕಟ್ಟಿಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಅಷ್ಟೇ ಅಲ್ಲದೇ ಆರೋಪಿ ರೂಪದರ್ಶಿ ಬಳಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.ಆರೋಪಿಯಿಂದ ಪಾರಾಗಿ ತಪ್ಪಿಸಿಕೊಂಡು ಬಂದು ಆಕೆ ರೈಲ್ವೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣ ಪೊಲೀಸರು ಸೋಮಶೇಖರನನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
