ಚಳ್ಳಕೆರೆ 

ರಾಷ್ಟ್ರದ ಹಿತಕ್ಕಾಗಿ ತ್ಯಾಗ ಬಲಿದಾನ ಮಾಡಿದ ಅನೇಕ ಮಹಾನೀಯರನ್ನು ನಾವು ಪ್ರತಿನಿತ್ಯ ಸ್ಮರಿಸಬೇಕಿದೆ. ಅವರ ಮಹಾನ್ ತ್ಯಾಗ ಮತ್ತು ಬಲಿದಾನ ಈ ರಾಷ್ಟ್ರಕ್ಕೆ ಸರ್ವವಿಧದಲ್ಲೂ ವಿಶೇಷ ಶಕ್ತಿಯನ್ನು ನೀಡಿದೆ. ಇಂದು ನಮ್ಮೆಲ್ಲರ ಸ್ವಾತಂತ್ರ್ಯಕ್ಕೆ ಮತ್ತು ಉತ್ತಮ ಜೀವನಕ್ಕೆ ಅವರು ಮಾಡಿದ ಬಲಿದಾನವೇ ನಾಂದಿ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ರಾಜ್ಯ ಸಹ ಕಾರ್ಯದರ್ಶಿ ಜಿ.ಜನಾರ್ಧನ ತಿಳಿಸಿದರು.
ಅವರು, ಶನಿವಾರ ಇಲ್ಲಿನ ನೆಹರೂ ವೃತ್ತದಲ್ಲಿ ರಾಷ್ಟ್ರದ ಗೌರವವನ್ನು ಕಾಪಾಡಲು ತನ್ನ ಜೀವವನೇ ತ್ಯಾಗ ಮಾಡಿದ ವೀರಪುರುಷ, ಮಹಾನ್ ತ್ಯಾಗಿ ಭಗತ್ ಸಿಂಗ್, ಸುಖುದೇವ್, ರಾಜ್‍ಗುರುರವರ ಬಲಿದಾನ ದಿವಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ರಾಷ್ಟ್ರದೆಲ್ಲೆಡೆ ಭಗತ್ ಸಿಂಗ್‍ರವರ ಬಲಿದಾನ ದಿನವನ್ನು ಶ್ರದ್ದೆಯಿಂದ ಆಚರಿಸುತ್ತಿದ್ದು, ಇಂದಿನ ಯುವಕರಿಗೆ ಭಗತ್ ಸಿಂಗ್ ಆದರ್ಶವೆಂದರು.
ತಾಲ್ಲೂಕು ಸಂಚಾಲಕ ಭಾನುಪ್ರಸಾದ್ ಮಾತನಾಡಿ, ರಾಷ್ಟ್ರದ ಇತಿಹಾಸದಲ್ಲಿ ಭಗತ್ ಸಿಂಗ್‍ರವರ ಬಲಿದಾನ ದಿನವನ್ನು ಮರೆಯಲು ಸಾಧ್ಯವಿಲ್ಲ. ಭಗತ್ ಸಿಂಗ್ ನಮ್ಮ ರಾಷ್ಟ್ರದ ಹೆಮ್ಮೆಯ ಪುರುಷ ಇಂದು ಅವರ ಬಲಿದಾನ ಪ್ರಯುಕ್ತ ಪಂಜಿನ ಮೆರವಣಿಗೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣೆ ನಡೆಸಿ, ಇಲ್ಲಿನ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಗುತ್ತಿದೆ. ಅವರು ರಾಷ್ಟ್ರಕ್ಕಾಗಿ ನೀಡಿದ ಕೊಡುಗೆ ಅಪಾರವೆಂದರು. ಕಾರ್ಯಕ್ರಮದಲ್ಲಿ ಎಬಿವಿಪಿ ಹಿರಿಯ ಮುಖಂಡ ಟಿ.ಮಂಜುನಾಥ, ಸಿ.ಇ.ಪ್ರಸನ್ನ, ವೆಂಕಟೇಶ್, ಲವಕುಮಾರ್, ಅಮರ್, ವೀರೇಶ್, ತೇಜ್, ನಾಗರಾಜು, ಮಧು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
