ಭೂಸ್ವಾದೀನ ಕಾಯ್ದೆ ತಿದ್ದುಪಡಿ: ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಚಿತ್ರದುರ್ಗ

     ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಜಿಲ್ಲೆಯಲ್ಲಿನ ರಾಜ್ಯದ ಎಲ್ಲಾ ಹೆದ್ದಾರಿ ತಡೆ ಮಾಡುವುದರ ಮೂಲಕ ಭೂಸ್ವಾದೀನ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಲಾಯಿತು.

    ಚಿತ್ರದುರ್ಗ ತಾಲ್ಲೂಕಿನಲ್ಲಿ ಜಿ.ಆರ್. ಹಳ್ಳಿ ಬಳಿ, ಹೊಳಲ್ಕೆರೆ ತಾಲ್ಲೂಕಿನಲ್ಲಿ ನಗರದ ಮುಖ್ಯ ರಸ್ತೆಯಲ್ಲಿ, ಹಿರಿಯೂರಿನಲ್ಲಿ ರಾ,ಹೆ,4ರಲ್ಲಿ ಚಳ್ಳಕೆರೆಯಲ್ಲಿ ಒಳ್ಳಾರಿ ರಸ್ತೆಯಲ್ಲಿ, ಮೊಳಕಾಲ್ಲೂರಲ್ಲಿ ಹಾನಗಲ್ ಬಳಿ ಹಾಗೂ ಹೊಸದುರ್ಗದಲ್ಲಿ ಮುಖ್ಯ ವೃತ್ತದ ಬಳಿಯಲ್ಲಿ ರಸ್ತೆಯನ್ನು ಬಂದ್ ಮಾಡುವುದರ ಮೂಲಕ ಸರ್ಕಾರದ ಕ್ರಮವನ್ನು ಖಂಡಿಸಲಾಯಿತು.

      2013ರ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ಇದು ರೈತವಿರೋಧಿಯಾಗಿದೆ. ರೈತರಿಗೆ ಈ ತಿದ್ದುಪಡಿಯು ಮರಣಶಾಸನವಾಗಿದೆ. ಆದ್ದರಿಂದ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಜಿಲ್ಲೆಗಳಲ್ಲಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದರ ಮೂಲಕ ಸರ್ಕಾರದ ಗಮನವನ್ನು ಸೆಳೆಯಲು ಯತ್ನಿಸಲಾಗುತ್ತಿದೆ. ಈ ಚಳುವಳಿಯು ರೈತನ ಬದುಕಿನ ಹೋರಾಟ ಎಂದು ರೈತ ಮುಖಂಡರು ಹೇಳಿದ್ದಾರೆ.

      ಕಾಯ್ದೆಯ ಪ್ರಕಾರ, ರೈತರ ಜಮೀನು ಪಡೆಯುವಾಗ ಅವರ ಅನುಮತಿ ಮೇರೆಗೆ ಭೂಸ್ವಾಧೀನ ಪಡಿಸಿಕೊಂಡು ಅವಶ್ಯಕ ಪರಿಹಾರ ಹಣ ನೀಡಬೇಕು. ಪರಿಹಾರ ಹಣ ರೈತರಿಗೆ ತೃಪ್ತಿಕರವಲ್ಲದಿದ್ದ ಪಕ್ಷದಲ್ಲಿ ನ್ಯಾಯಾಲಯದ ಮೊರೆಹೋಗಬಹುದಿತ್ತು. ಆದರೆ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

      ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ಅದರ ಹೊಣೆಯನ್ನು ರಾಜ್ಯಸರ್ಕಾರಗಳಿಗೆ ವಹಿಸಿದೆ. ಇದು ಸರಿಯಲ್ಲ ಎಂದರು.2014ಕ್ಕಿಂತ ಮುಂಚೆ ರೈತರ ಭೂಮಿಯನ್ನು ಯಾರು ಬೇಕಾದರು ಪಡೆಯಬಹುದಾಗಿತ್ತು ಇದರಲ್ಲಿ ರೈತನ ಒಪ್ಪಿಗೆ ಅಗತ್ಯ ಇರಲಿಲ್ಲ ಇದರಿಂದ ಭೂ ಮಾಫೀಯಾದವರಿಗೆ ಅನುಕೂಲವಾಗಿತ್ತು ಇದರ ಬಗ್ಗೆ ಎಚ್ಚತ್ತ ಕೇಂದ್ರದ ಆಗಿನ ಯುಪಿಎ ಸರ್ಕಾರ ಈ ಕಾಯ್ದೆಯ ಬಗ್ಗೆ ತಿದ್ದುಪಡಿಯನ್ನು ತರುವುದರ ಮೂಲಕ ಕೆಲವೊಂದು ನಿಭಂಧನೆಗಳನ್ನು ಹಾಕುವುದರ ಮೂಲಕ ರೈತರ ಭೂಮಿಯನ್ನು ಪಡೆಯಬಹುದಾಗಿತ್ತು ಆದರೆ ಈಗ ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಮೃತ್ರಿ ಸರ್ಕಾರ ಯುಪಿಎ ಸರ್ಕಾರ ಹಾಕಿದೆ ಎಲ್ಲಾ ನಿಭಂಧನೆಗಳನ್ನು ಗಾಳಿಗೆ ತೊರಿ ಭೂಮಿಯನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದರ ಮೂಲಕ ಸರ್ಕಾರ ರೈತರ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಿದರು.

      ರೈತರ ಒಪ್ಪಿಗೆ ಇಲ್ಲದೆ ಜಮೀನು ವಶಕ್ಕೆ ಪಡೆಯಬಾರದು. ಸ್ವಾಧೀನಪಡಿಸಿಕೊಂಡ ಜಮೀನಿಗೆ, ನಾಲ್ಕು ಪಟ್ಟು ದರವನ್ನು ಪರಿಹಾರವನ್ನಾಗಿ ಕೊಡಬೇಕು. ಹಾಗೂ ಜಮೀನು ಕಳೆದು ರೈತರಿಗೆ ಪುನರ್ವಸತಿ ಕಲ್ಪಿಸಬೇಕೆಂಬ ನಿಯಮ ಸಡಿಸಿಲಿ ಏಕಗಂಟಿನ ಪರಿಹಾರ ಯೋಜನೆ ಮುಂದಾಗಿರುವ ಸರ್ಕಾರಗಳ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹೊಸ ಉದ್ದೇಶಿತ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನವಾಗಲಿ ಎಂದು ಆತಂಕ ವ್ಯಕ್ತಪಡಿಸಿದರು.

       ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವುದನ್ನು ನಿಲ್ಲಿಸಬೇಕು ಈ ಹಿಂದೆ ಇದ್ದ ರೀತಿಯಲ್ಲಿ ನಿಯಮಗಳನ್ನು ಪಾಲಿಸಿ ರೈತರ ಭೂಮಿಯನ್ನು ಖರೀದಿ ಮಾಡಬೇಕು ಯಾವುದೇ ಕಾರಣಕ್ಕೂ ಸಹಾ ಕಾಯ್ದೆಗೆ ತಿದ್ದುಪಡಿಯನ್ನು ತರಬಾರದೆಂದು ಆಗ್ರಹಿಸಿದ್ದು ರಾಜ್ಯ ಬರಗಾಲಕ್ಕೆ ತುತ್ತಾಗಿದೆ, ಇದಕ್ಕೆ ಚಿತ್ರದುರ್ಗ ಜಿಲ್ಲೆಯೂ ಹೊರತಾಗಿಲ್ಲ ಇದರಿಂದ ಇಲ್ಲಿನ ಜನತೆ ಕುಡಿಯುವ ನೀರು ಮತ್ತು ದುಡಿಯುವ ಕೈಗಳಿಗೆ ಕೆಲಸ, ಜನ ಗುಳೆ ಹೋಗದಂತೆ ಎಚ್ಚರವಹಿಸಬೇಕು ಹಾಗೂ ಜಾನುವಾರುಗಳಿಗೆ ಮೇವು ಮತ್ತು ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡುವುದರ ಮೂಲಕ ಗೋಶಾಲೆಗಳನ್ನು ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

       ಈಗ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭವಾಗುವ ಸಮಯ ಇದನ್ನು ಬಂಡವಾಳವಾಗಿಟ್ಟು ಕೂಂಡು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಡೋನೇಷನ್ ಪಡೆಯುತ್ತಿದ್ದಾರೆ ಇದರಿಂದ ಶಿಕ್ಷಣ ಎನ್ನುವುದು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ, ಬಡವರ ಶಿಕ್ಷಣ ಪಡೆಯುವುದು ಮರಿಚೀಕೆಯಾಗುತ್ತಿದೆ ಇದರ ಬಗ್ಗೆ ಸರ್ಕಾರ ಗಮನ ಹರಿಸುವುದರ ಮೂಲಕ ಡೋನೇಷನ್ ಮತ್ತು ಹೆಚ್ಚಿಗೆ ಶುಲ್ಕವನ್ನು ವಸೂಲಿ ಮಾಡುವ ಶಾಲೆಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link